ಬೇಲೂರು: ತಾಲ್ಲೂಕಿನ ಅರೇಹಳ್ಳಿ ಹೋಬಳಿಯ ಕಾನನಹಳ್ಳಿ ಅರಣ್ಯ ಪ್ರದೇಶದ ಬಳಿ ತಡರಾತ್ರಿ ಬೈಕ್ ಸವಾರರಿಬ್ಬರು ಎರಡು ಕಾಡಾನೆಗಳ ಮಧ್ಯೆ ಸಿಲುಕಿ, ಅಚ್ಚರಿಯ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾದ ಘಟನೆ ನಡೆದಿದೆ.
ಮೂಡಿಗೆರೆ ಭಾಗದಿಂದ ಅರೇಹಳ್ಳಿ ಕಡೆಗೆ ಬೈಕ್‌ನಲ್ಲಿ ಬರುತ್ತಿದ್ದ ಸವಾರರು, ರಸ್ತೆಯ ತಿರುವಿನಲ್ಲಿ ಕಾಡಾನೆಗಳು ಇರುವುದನ್ನು ಗಮನಿಸದೆ ವೇಗವಾಗಿ ಮುನ್ನುಗ್ಗಿದ್ದಾರೆ.
ರಸ್ತೆಯ ಮಧ್ಯೆಯೇ ಎರಡು ಕಾಡಾನೆಗಳು ಸಾಗುತ್ತಿದ್ದವು. ಕತ್ತಲಿದ್ದ ಕಾರಣ ಸವಾರರು ನೇರವಾಗಿ ಆನೆಗಳ ಅತ್ಯಂತ ಸಮೀಪಕ್ಕೆ ಹೋಗಿದ್ದು, ಕ್ಷಣಾರ್ಧದಲ್ಲಿ ಆನೆಗಳ ಮಧ್ಯೆಯೇ ಸಿಲುಕಿಕೊಂಡಿದ್ದಾರೆ.
ವಾಹನ ಸವಾರರು ಚಾಣಾಕ್ಷತನದಿಂದ ಬೈಕ್ ಅನ್ನು ನಿಯಂತ್ರಿಸಿ ಆನೆಗಳಿಗೆ ತೊಂದರೆಯಾಗದಂತೆ ಅಲ್ಲಿಂದ ಜಾಣ್ಮೆಯಿಂದ ಪಾರಾಗಿದ್ದಾರೆ. ಆನೆಗಳು ಸಹ ಯಾವುದೇ ಆಕ್ರೋಶ ವ್ಯಕ್ತಪಡಿಸದೆ ತಮ್ಮ ಪಾಡಿಗೆ ತಾವು ರಸ್ತೆ ದಾಟಿ ಸಾಗಿವೆ.
ಸವಾರರ ಹಿಂಬದಿಯಿದ್ದ ಕಾರಿನಲ್ಲಿದ್ದವರು ಈ ಇಡೀ ದೃಶ್ಯವನ್ನು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ.
PublicNext
02/02/2026 07:36 pm
LOADING...