ಹೊಸಪೇಟೆ : ಉತ್ತರ ಹಾಗೂ ಮಧ್ಯ ಭಾರತದ ಆವಾಸಸ್ಥಾನ ಹೊಂದಿರುವ ಈ ಪಕ್ಷಿಯು ಇತ್ತೀಚೆಗೆ ಕರ್ನಾಟಕದ ಎರಡು ಸ್ಥಳಗಳಲ್ಲಿ ಕಾಣಿಸಿಕೊಂಡಿದ್ದು, ಇದೀಗ ಹಂಪಿಯಲ್ಲಿ ಪಕ್ಷಿ ಪ್ರೇಮಿಗಳಿಗೆ ಗೋಚರಿಸಿ ಅಚ್ಚರಿ ಮೂಡಿಸಿದೆ.
ಪಂಪಯ್ಯಸ್ವಾಮಿ ಮಳಿಮಠ ಮಾರ್ಗದರ್ಶನದಲ್ಲಿ ಕೊಲ್ಕತ್ತಾ ತಂಡವು ಹಂಪಿಯಲ್ಲಿ ಪಕ್ಷಿ ವೀಕ್ಷಣೆಯಲ್ಲಿ ತೊಡಗಿದ್ದಾಗ ಅಚ್ಚುತರಾಯ ದೇಗುಲ ಸ್ಮಾರಕಗಳ ಮೇಲೆ ಓಡಾಡುವುದನ್ನು ಕಂಡು ಸಬ್ಯಸಾಚಿ ರಾಯ್ ಅವರು ತಮ್ಮ ಕ್ಯಾಮರದಲ್ಲಿ ಸೆರೆ ಹಿಡಿದಿದ್ದಾರೆ. ಪಕ್ಷಿಯು ಸದಾ ಹಳೆಯ ಕಟ್ಟಡ ಸ್ಮಾರಕಗಳ ಮೇಲೆ ಉಳಿದುಕೊಂಡಿರುತ್ತದೆ. ಇದಕ್ಕೂ ಮೊದಲು ಈ ಪಕ್ಷಿಯನ್ನು ಪರಿಸರ ಪ್ರೇಮಿ ಪಂಪಯ್ಯಸ್ವಾಮಿ ಮಳಿಮಠ ಅವರು ಕೊಪ್ಪಳ ಜಿಲ್ಲೆಯ ಇಟಗಿ ಮಹಾದೇವ ದೇಗುಲದ ಬಳಿ ಪತ್ತೆ ಹಚ್ಚಿದ್ದಾರೆ.
Kshetra Samachara
28/01/2026 12:03 pm
LOADING...