ಹೊಸಪೇಟೆ : ಚಿರತೆ ದಾಳಿಗೆ 36 ಕುರಿಮರಿಗಳು ಬಲಿ ಆಗಿವೆ. ಈ ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ನಾಗಲಾಪುರ ತಾಂಡದ ಬಳಿ ನಡೆದಿದೆ. ಕೂಡ್ಲಿಗಿ ತಾಲೂಕಿನ ಗೊಲ್ಲರಹಟ್ಟಿಯ ಗರಗ ಮಲ್ಲಪ್ಪ ಅನ್ನೋರಿಗೆ ಸೇರಿದ ಕುರಿಮರಿಗಳು ಅಂತ ಗುರುತಿಸಲಾಗಿದೆ.
ಹೊಲದಲ್ಲಿ ಕುರಿ ಮೇಯಿಸುವ ವೇಳೆ ಹಿಂಡಿನ ಮೇಲೆ ದಾಳಿ ಮಾಡಿದೆ. ಚಿರತೆ ದಾಳಿಗೆ 36 ಕುರಿಮರಿಗಳು ಮೃತಪಟ್ಟಿವೆ. 3 ಲಕ್ಷ ರೂ. ಮೌಲ್ಯದ 36 ಕುರಿಮರಿಗಳನ್ನು ಒಂದೇ ರಾತ್ರಿಯಲ್ಲಿ ಚಿರತೆಗೆ ಬಲಿಯಾಗಿರುವುದರಿಂದ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಸಮೀಪದ ಬ್ಯಾಲಕುಂದಿ ಗ್ರಾಮದಲ್ಲಿ ಜಾತ್ರೆ ಇರುವುದರಿಂದ ಕುರಿಗಾಹಿಗಳು ಜಾತ್ರೆಗೆ ತೆರಳಿದ್ದರು. ಕುರಿ ಮೇಯಿಸುವ ವೇಳೆಯಲ್ಲಿ ಮಹಿಳೆಯರೇ ಇದ್ದು, ಅವರು ಜೀವಭಯದಿಂದ ಚಿರತೆಯಿಂದ ಕುರಿಮರಿಗಳನ್ನು ರಕ್ಷಿಸಿಕೊಳ್ಳಲು ಆಗಿಲ್ಲ. ಗೊಲ್ಲರಹಳ್ಳಿ, ದೇವಲಾಪುರ ಹಲವು ಗ್ರಾಮಗಳಲ್ಲಿ ಹಲವು ತಿಂಗಳಿನಿಂದಲೂ ಚಿರತೆಗಳು ಸಂಜೆ ವೇಳೆ, ಮುಂಜಾನೆ ಹೊತ್ತಿನಲ್ಲಿ ಓಡಾಟ ನಡೆಸುತ್ತಿವೆ. ಅರಣ್ಯ ಇಲಾಖೆಯವರು ಎಚ್ಚೆತ್ತು ಚಿರತೆ ಸೆರೆ ಹಿಡಿಯುವ ಕೆಲಸ ಮಾಡಬೇಕೆಂದು ರೈತರು ಆಗ್ರಹಿಸಿದರು.
PublicNext
30/01/2026 08:57 am
LOADING...