ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಜಯನಗರ : ಎತ್ತು ತಿವಿದು ಚಿಕಿತ್ಸೆ ಫಲಕಾರಿಯಾಗದೇ ರೈತ ಸಾವು

ಹರಪನಹಳ್ಳಿ : ಹೊಲದಲ್ಲಿ ಕೆಲಸಮಾಡುವಾಗ ಎತ್ತು ಇರಿದು ಗಾಯಗೊಂಡ ರೈತ ಆಸ್ಪತ್ರೆಯಲ್ಲಿ ಮೃತಪಟ್ಟಿರುವ ಘಟನೆ ಜಿಲ್ಲೆಯ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನ ಆಲದಹಳ್ಳಿ ಗ್ರಾಮದಲ್ಲಿ ನಡೆದಿದೆ. ಆಲದಹಳ್ಳಿ ಗ್ರಾಮದ ರೈತ ಬಿ. ಪಂಚಪ್ಪ (65) ಮೃತಪಟ್ಟವರು. ರೈತ ಬಿ.ಪಂಚಪ್ಪ ಎಂದಿನಂತೆ ಹೊಲದಲ್ಲಿ ಎತ್ತುಗಳೊಂದಿಗೆ ಕೃಷಿ ಕೆಲಸದಲ್ಲಿ ನಿರತರಾದ ವೇಳೆ ಏಕಾಏಕಿ ಎತ್ತು ರೈತ ಪಂಚಪ್ಪನ ಪಕ್ಕೆಗೆ ಕೊಂಬಿನಿಂದ ತಿವಿದಿದೆ.

ಗಂಭೀರವಾಗಿ ಗಾಯಗೊಂಡ ರೈತ ಸ್ಥಳದಲ್ಲಿ ಮೂರ್ಛೆ ಹೋಗಿದ್ದಾರೆ. ಅಲ್ಲೆ ಇದ್ದ ಪಂಚಪ್ಪನವರ ಪುತ್ರ ಬಿ.ಕೊಟ್ರೇಶ ಮತ್ತಿಹಳ್ಳಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಹರಪನಹಳ್ಳಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.

ಆದರೆ, ಚಿಕಿತ್ಸೆ ಫಲಕಾರಿಯಾಗದೆ ರೈತ ಪಂಚಪ್ಪ ಮೃತಪಟ್ಟಿದ್ದಾರೆ. ಈ ಕುರಿತು ಚಿಗಟೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Abhishek Kamoji
Kshetra Samachara

Kshetra Samachara

29/01/2026 08:28 pm

Cinque Terre

1.54 K

Cinque Terre

0

ಸಂಬಂಧಿತ ಸುದ್ದಿ