ಹೊಸಪೇಟೆ : ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಹೊರವಲಯದಲ್ಲಿರುವ ರಾಷ್ಟ್ರೀಯ ಹೆದ್ದಾರಿ 50 ಹಾಯ್ದು ಹೋಗುವ ಐತಿಹಾಸಿಕ ಟನಲ್ ನ ಮೇಲಿರೋ ವೈಕುಂಠ ಗುಡ್ಡಕ್ಕೆ ಆಕಸ್ಮಿಕ ಬೆಂಕಿ ಬಿದ್ದು ಅಪಾರ ಸಸ್ಯಸಂಕುಲ ನಾಶ ಆಗಿದೆ.
ಕಿಡಿಗೇಡಿಗಳು ಬೆಂಕಿ ಹಚ್ಚಿರೋ ಶಂಕೆ ವ್ಯಕ್ತವಾಗಿದೆ. ಇದೇ ವೈಕುಂಠ ಗುಡ್ಡದಲ್ಲಿ ರೈಲ್ವೇ ಟ್ರಾಕ್ ಹಾದು ಹೋಗಿದೆ. ಹೊಸಪೇಟೆ- ಕೊಟ್ಟೂರು- ಹರಿಹರ ಮಾರ್ಗದಲ್ಲಿ ರೈಲುಗಳು ಸಂಚಾರ ಮಾಡುತ್ತವೆ. ಒಂದು ವೇಳೆ ಬೆಂಕಿ ಹತ್ತಿದ ಸಮಯದಲ್ಲಿ ರೈಲು ಬಂದಿದ್ರೆ, ಅನಾಹುತವಾಗುತ್ತಿತ್ತು. ಗುಡ್ಡಕ್ಕೆ ಬೆಂಕಿ ಬಿದ್ದ ಕೂಗಳತೆ ದೂರದಲ್ಲೇ ಟಿಬಿ ಡ್ಯಾಂ ಇದೆ.
ಜೊತೆಗೆ ಐಷಾರಾಮಿ ವೈಕುಂಠ ಅತಿಥಿ ಗೃಹ ಇದೆ. ಅರಣ್ಯ ಅಧಿಕಾರಿಗಳ ಮುಂಜಾಗ್ರತಾ ಕ್ರಮದಿಂದ ಅತಿಥಿ ಗೃಹ ಕೂಡಾ ಬಚಾವ್ ಆಗಿದೆ. ಜೊತೆಗೆ ಅನಾಹುತ ಆಗೋಕು ಮುನ್ನ ಅರಣ್ಯ ಇಲಾಖೆ ಸಿಬ್ಬಂದಿ, ರೈತರು ನಂದಿಸಿದ್ದಾರೆ.
PublicNext
01/02/2026 09:36 pm
LOADING...