ಕೊಟ್ಟೂರು : ವಿಜಯನಗರ ಜಿಲ್ಲೆಯ ಕೊಟ್ಟೂರಿನಲ್ಲಿ ಮಗನಿಂದಲೇ ತಂದೆ ತಾಯಿ ತಂಗಿ ಹತ್ಯೆ ಕೇಸ್ ಗೆ ಸಂಬಂಧಿಸಿದಂತೆ ನರಹಂತಕ ಅಕ್ಷಯ್ ಕುಮಾರ್ ನನ್ನ ಬೆಂಗಳೂರು ತಿಲಕ್ ನಗರ ಪೊಲೀಸರು ಕೊಟ್ಟೂರಿಗೆ ಕರೆತಂದಿದ್ದಾರೆ.
ಬೆಂಗಳೂರಿಂದ ಕೊಟ್ಟೂರಿಗೆ ನಿನ್ನೆ ತಡರಾತ್ರಿಯೆ ಬಿಟ್ಟಿದ್ದರು. ಇಂದು ಮುಂಜಾನೆ 10:430 ಸುಮಾರಿಗೆ ಕೊಟ್ಟೂರಿನ ಎಲ್.ಬಿ. ಬಡಾವಣೆಯ ನಿವಾಸಕ್ಕೆ ಆಗಮಿಸಿದ್ದಾರೆ. ಮನೆಯ ಹಾಲ್‌ನಲ್ಲೇ ಮೂರು ಶವ ಹೂತು ಹಾಕಿರುವ ಶಂಕೆ ಇದೆ. ಹೀಗಾಗಿ ಸಹಾಯಕ ಆಯುಕ್ತ ಸುರೇಶ್ ಕುಮಾರ್, ತಹಶೀಲ್ದಾರ್ ಅಮರೇಶ್ ಜಿಕೆ ಸಮ್ಮುಖದಲ್ಲಿ ಮೃತದೇಹ ಹೊರತೆಗೆಯಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಘಟನಾ ಸ್ಥಳದಲ್ಲಿ ನೂರಕ್ಕೂ ಅಧಿಕ ಪೊಲೀಸರನ್ನ ನಿಯೋಜಿಸಲಾಗಿದೆ.
PublicNext
31/01/2026 12:43 pm
LOADING...