ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಜಯನಗರ: ಸಾಲದ ಕಥೆ, ಮಿಸ್ಸಿಂಗ್ ನಾಟಕವಾಡಿದ ಅಕ್ಷಯ್: ಕೊಟ್ಟೂರು ಕೊಲೆಗಾರನ ಕಳ್ಳಾಟ ಬಯಲು!

ವಿಜಯನಗರ: ಹೀಗೇ ಮನೆ ಒಳಗೆ ತೋಡಿರುವ ಗುಂಡಿ. ಮನೆಯ ಹೊರಗಡೆ ಆತಂಕದಲ್ಲೇ ನಿಂತಿರುವ ಜನರ ಗುಂಪು. ಮತ್ತೊಂದೆಡೆ ಕುಟುಂಬಸ್ಥರ ಆಕ್ರಂಧನ. ಈ ದೃಶ್ಯಗಳು ಕಂಡು ಬಂದಿದ್ದು ವಿಜಯನಗರ ಜಿಲ್ಲೆಯ ಕೊಟ್ಟೂರು ಪಟ್ಟಣದಲ್ಲಿ. ಹೌದು ಫೋಟೋದಲ್ಲಿ ಕಾಣ್ತಿರುವ ಈ ಕಿರಾತಕನೇ ಇಡೀ ಸ್ಟೋರಿಯ ವಿಲನ್. ಇತನ ಹೆಸರು ಅಕ್ಷಯ್ ಕುಮಾರ್. ಈ ಗಡ್ಡದಾರಿ ಕಿರಾತಕ ಮಾಡಿರುವ ಖರಾಬ್ ಕೆಲಸ ಕೇಳಿದ್ರೆ ಎಂತವರ ಕರುಳು ಚುರ್ ಅನ್ನೋದ್ರ ಜೊತೆಗೆ, ಹಿಡಿಶಾಪ ಹಾಕೋದು ಗ್ಯಾರಂಟಿ. ಮುದ್ದಾಗಿ ಸಾಕಿದ್ದ ಹೆತ್ತ ತಂದೆ, ತಾಯಿ ಹಾಗೂ ರಕ್ತ ಹಂಚಿಕೊಂಡು ಹುಟ್ಟಿದ್ದ ತಂಗಿ ಸೇರಿ ಮೂವರನ್ನೂ ಕೊಲೆ ಮಾಡಿ, ಮನೆಯಲ್ಲೇ ಸಮಾಧಿ ಮಾಡಿದ್ದಾನೆ....

ಕೊಲೆ ಆರೋಪಿ ಅಕ್ಷಯ್ ಕುಮಾರ್ ತನ್ನ ತಂದೆ ಭೀಮರಾಜ್ ತಾಯಿ ಜಯಲಕ್ಷ್ಮಿ ಹಾಗೂ ತಂಗಿ ಅಮೃತಾರನ್ನ ಕೊಟ್ಟೂರಿನ ಬಾಡಿಗೆ ಮನೆಯಲ್ಲಿ ಕೊಲೆ ಮಾಡಿ, ಮನೆಯಲ್ಲೇ ಗುಂಡಿ ತೋಡಿ ಮುಚ್ಚಿ ಹಾಕಿದ್ದಾನೆ. ವಿಜಯನಗರ ಜಿಲ್ಲೆ ಕೊಟ್ಟೂರು ಪಟ್ಟಣದ ಎಲ್‌. ಬಿ. ಬಡಾವಣೆಯ ಬಾಡಿಗೆ ಮನೆಯ ಒಳ ಭಾಗದಲ್ಲಿ ಟೈಲ್ಸ್ ಕಿತ್ತು ಗುಂಡಿ ತೋಡಿದ್ದ ಭೂಪ, ಕೊಲೆ ಮಾಡಿ, ಗುಂಡಿ ತೋಡಿ ಮಣ್ಣು ಮುಚ್ಚಿದ್ದಾನೆ. ಮನೆ ಒಳಗೆ ಎಲ್ಲೆಂದರಲ್ಲಿ ರಕ್ತ ಚೆಲ್ಲಿರೋದನ್ನ ನೋಡಿದ್ರೆ ಮಾರಕಾಸ್ತ್ರಗಳಿಂದ ಕೊಲೆ ಮಾಡಿ, ಆ ಬಳಿಕ ಮುಚ್ಚಿದ್ದಾನೆ ಅನ್ನೋದು ಸ್ಪಷ್ಟ. ಹೀಗಾಗಿ ಮನೆ ತುಂಬ ರಕ್ತದ ಕಲೆಗಳು ಕಂಡು ಬರ್ತವೆ. ಅಲ್ಲದೇ ಮನೆಯಲ್ಲಿ ನಾಲ್ಕು ಮತ್ತು ಬರುವ ಬಾಟಲ್ ಗಳನ್ನೂ ಈ ಪಾಪಿ ಅಕ್ಷಯ್ ಇಟ್ಟಿದ್ದಾನೆ. ತಂದೆ - ತಾಯಿ, ಸಹೋದರಿ ಕೊಲೆ ಮಾಡಿದ್ದ ಈ ಕೊಲೆಗಡುಕ ಮಿಸ್ಸಿಂಗ್ ಕೇಸ್ ಕಳ್ಳಾಟವಾಡಿದ್ದ. ಬೆಂಗಳೂರಿನ ತಿಲಕ್ ನಗರ ಠಾಣೆಯಲ್ಲಿ ಮಿಸ್ಸಿಂಗ್ ಕೇಸ್ ನೀಡಲು ಹೋಗಿದ್ದ ಆರೋಪಿ ಅಕ್ಷಯ್ ಗೊಂದಲ ಹೇಳಿಕೆಯಿಂದ ಕೆರಳಿದ್ದ ಪೊಲೀಸರು ತಮ್ಮದೇ ಸ್ಟೈಲ್ ನಲ್ಲಿ ವಿಚಾರಣೆ ನಡೆಸಿದಾಗ ಅಸಲೀ ಸತ್ಯ ಕಕ್ಕಿದ್ದಾನೆ.

ಕೊಲೆ ಬಳಿಕ ಸಂಬಂಧಿಕರಿಗೆ ಕರೆ ಮಾಡಿದ್ದ ಈ ಅಕ್ಷಯ್ ಇಲ್ಲೂ ಒಂದು ಕಥೆ ಕಟ್ಟಿದ್ದ. ಅಪ್ಪನಿಗೆ ಹುಷಾರ್ ಇಲ್ಲ. ಜಯದೇವ್ ಆಸ್ಪತ್ರೆಗೆ ಹೋಗಿದ್ದೇವೆ. ಧೈರ್ಯವಾಗಿರಿ ಅಂತ ಹೇಳಿದ್ದ. ಮತ್ತೊಬ್ಬ ಚಿಕ್ಕಪ್ಪನಿಗೆ ಕರೆ ಮಾಡಿ, ಅಪ್ಪ - ಅಮ್ಮ, ತಂಗಿ ಬೆಂಗಳೂರಿಗೆ ಬಂದಿದ್ದಾರೆ. 14 ಲಕ್ಷ ಸಾಲ ಮಾಡಿದಾರೆ. ಸಾಲ ಕೊಟ್ಟವರಿಗೆ ಹಣ ಕೋಡೋದಕ್ಕೆ ಹೋಗಿದ್ದಾರೆ ಅಂತ ಹೇಳಿದ. ಬಳಿಕ ಮಿಸ್ಸಿಂಗ್ ಕೇಸ್ ಕೊಡ್ತಿದ್ದಿನಿ. ಪೊಲೀಸರೇ ಹುಡುಕಿ ಕೊಡ್ತಾರೆ ಅಂತಾನೂ ಸುಳ್ಳು ಹೇಳಿದ್ದಾನೆ. ಆ ಬಳಿಕ ಕುಟುಂಬಸ್ಥರು ಮೃತ ಅಮೃತಾ ಫೋನ್ ಗೆ ಕರೆ ಮಾಡಿದ್ದಾರೆ. ಆಗ ತಿಲಕ್ ನಗರ ಪೊಲೀಸರು ರಿಸೀವ್ ಮಾಡಿ ನಿನ್ನ ಮಗ ಲೋಫರ್ ಇದ್ದಾನೆ. ನಿಮ್ಮ ಅಕ್ಕ - ಭಾವ ಮಗಳು ಮಿಸ್ಸಿಂಗ್ ಆಗಿಲ್ಲ. ಆತನೇ ಕೊಲೆ ಮಾಡಿದ್ದಾನೆ ಅನ್ನೋದನ್ನ ಕೇಳಿ ಕುಟುಂಬಸ್ಥರು ಶಾಕ್ ಗೆ ಒಳಗಾಗಿದ್ರು. ಅದಕ್ಕೂ ಮುನ್ನವೇ ತಂದೆ - ತಾಯಿ, ತಂಗಿಯನ್ನ ಕೊಂದು ಬೆಂಗಳೂರಿಗೆ ತೆರಳಿ ಸಂಬಂಧಿಕರಿಗೆ ಸುಳ್ಳು ಹೇಳಿದ್ದ. ಚಿತ್ರದುರ್ಗ ಮೂಲತಃ ಹೊಸದುರ್ಗ ತಾಲೂಕಿನ ದೊಡ್ಡ ಕಿಟ್ಟದಹಳ್ಳಿಯವರು ಅಂತ ಹೇಳಲಾಗ್ತಿದೆ. ಮೊದಲು ಚಿತ್ರದುರ್ಗದಲ್ಲಿ ರಿಮೋಡಿಂಗ್ ಶಾಪ್ ಮಾಡಿದ್ರಂತೆ. ಬಳಿಕ ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಸ್ವಾಮಿಹಳ್ಳಿಯಲ್ಲಿ ಶಾಪ್ ಇಟ್ಟಿದ್ದರು. ಆ ಬಳಿಕ ದಾವಣಗೆರೆಯ ಜಗಳೂರಿಗೆ ಶಿಫ್ಟ್ ಆಗಿ, ಒಂದೂವರೆ ಕೋಟಿ ರೂ. ಮೌಲ್ಯದ ಮನೆ ಕಟ್ಟಿದ್ದರು. ಬಳಿಕ ಕೊಟ್ಟೂರು ಪಟ್ಟಣಕ್ಕೆ ಬಂದು ನಾಲ್ಕು ವರ್ಷದಿಂದ ಶಿಫ್ಟ್ ಆಗಿದ್ದರು. ತಪ್ಪು ಮಾಡಿದ ಮಗನಿಗೆ ಶಿಕ್ಷೆ ಆಗಲಿ ಅಂತ ಅಕ್ಷಯ್ ಚಿಕ್ಕಮ್ಮ, ಚಿಕ್ಕಪ್ಪ ಆಗ್ರಹಿಸಿದ್ರು.

ಸದ್ಯ ಆರೋಪಿ ಅಕ್ಷಯ್ ನನ್ನ ಪೊಲೀಸರು ಬೆಂಗಳೂರಿನಿಂದ ಕೊಟ್ಟೂರಿಗೆ ಕರೆತರುತ್ತಿದ್ದು, ಆ ಬಳಿಕವಷ್ಟೇ ಕೊಲೆಗೆ ನಿಖರ ಕಾರಣ ಗೊತ್ತಾಗಲಿದೆ. ಆದ್ರೆ ಕೂಲಿ, ನಾಲಿ ಮಾಡಿ ಮಗ ರಾಜನಂತೆ ಮೆರೆಯಲಿ ಎಂದು ಕನಸು ಕಂಡಿದ್ದ ತಂದೆ ತಾಯಿ ಹಾಗೂ ತಂಗಿಯನ್ನ ಕೊಂದ ಕೀಚಕನಿಗೆ ಉಗ್ರ ಶಿಕ್ಷೆಯಾಗಲಿ ಅಂತಾ ಜನ ಹಿಡಿ ಶಾಪ ಹಾಕ್ತಿದ್ದಾರೆ.

ಪಾಂಡುರಂಗ ಜಂತ್ಲಿ ಪಬ್ಲಿಕ್ ನೆಕ್ಸ್ಟ್ ವಿಜಯನಗರ

Edited By : Shivu K
PublicNext

PublicNext

31/01/2026 06:42 pm

Cinque Terre

10.02 K

Cinque Terre

0

ಸಂಬಂಧಿತ ಸುದ್ದಿ