ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊಟ್ಟೂರು: ತ್ರಿವಳಿ ಕೊಲೆ ಪ್ರಕರಣ, ಮೂವರ ಕುತ್ತಿಗೆ ಕೊಯ್ದು ಮನೆಯಲ್ಲೇ ಹೂತಿದ್ದ ಹಂತಕ..!

ಕೊಟ್ಟೂರು : ವಿಜಯನಗರ ಜಿಲ್ಲೆ ಕೊಟ್ಟೂರು ಪಟ್ಟಣದಲ್ಲಿ ತ್ರೀವಳಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಂದೆ - ತಾಯಿ, ಸಹೋದರಿ ಹತ್ಯೆ ಬಳಿಕ ಆರೋಪಿ ಬೆಂಗಳೂರಿಗೆ ತೆರಳಿದ್ದ. ಬೆಂಗಳೂರಿನ ತಿಲಕ್ ನಗರದ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕೇಸ್ ದಾಖಲು ಮಾಡಲು ಪ್ಲಾನ್ ಮಾಡಿದಾಗ ಆರೋಪಿ ಸಿಕ್ಕಿಬಿದ್ದಿದ್ದಾನೆ ಅಂತ ಕೊಟ್ಟೂರಲ್ಲಿ ವಿಜಯನಗರ ಎಸ್ಪಿ ಜಾಹ್ನವಿ ಹೇಳಿಕೆ ಕೊಟ್ಟಿದ್ದಾರೆ.

ತಿಲಕ್ ನಗರ ಪೊಲೀಸ್ ಠಾಣೆಯಲ್ಲಿ ಕ್ರೈಂ ನಂಬರ್ 35/26 ಮಿಸ್ಸಿಂಗ್ ಕೇಸ್'ನ್ನ ಅಕ್ಷಯ್ ದಾಖಲು ಮಾಡಿದ್ದ. ತಂದೆ - ತಾಯಿ, ಸಹೋದರಿ ಜಯದೇವ ಆಸ್ಪತ್ರೆಗೆ ಹೋಗಿದ್ರು. ಆಸ್ಪತ್ರೆಗೆ ಹೋದವರು ವಾಪಾಸ್ ಮನೆಗೆ ಬಂದಿಲ್ಲ ಅಂತ ಬೆಂಗಳೂರಿನ ತಿಲಕ್ ನಗರ ಪೊಲೀಸ್ ಠಾಣೆಯಲ್ಲಿ ಅಕ್ಷಯ್ ಕೇಸ್ ದಾಖಲು ಮಾಡಿದ್ದ.

ತಿಲಕ್ ನಗರ ಪೊಲೀಸ್ ಅಧಿಕಾರಿಗಳು ಆರೋಪಿ ಅಕ್ಷಯ್ ವಿಚಾರಣೆ ಮಾಡಿದ್ದಾರೆ. ವಿಚಾರಣೆ ವೇಳೆ ದ್ವಂದ್ವ ಹೇಳಿಕೆ ನೀಡಿದ್ದ. ವಿಚಾರಣೆ ಬಳಿಕ ಭೀಮ್‌ರಾಜ್, ಜಯಲಕ್ಷ್ಮಿ, ಸಹೋದರಿ ಅಮೃತ ಕೊಲೆ ಮಾಡಿರುವ ನಿಜಾಂಶ ಒಪ್ಪಿದ್ದಾನೆ. ತಿಲಕ್ ‌ನಗರ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ. ಆರೋಪಿ ಅಕ್ಷಯ್ ಹೇಳಿಕೆ ಆಧರಿಸಿ ಕೊಟ್ಟೂರು ಪಟ್ಟಣಕ್ಕೆ ತಿಲಕ್ ನಗರ ಪೊಲೀಸ್ರು ಬಂದಿದ್ದರು. ಮೂವರನ್ನ ಕೊಲೆ ಮಾಡಿ ಮನೆಯ ಹಾಲ್‌ನಲ್ಲಿ ನಾಲ್ಕು ಅಡಿ ಉದ್ದ, ಎರಡು ಅಡಿ ಅಗಲ ಕುಣಿ ತೆಗೆದು ಆರೋಪಿ ಅಕ್ಷಯ್ ಹೂತಿದ್ದ. ಮೂವರನ್ನೂ ಚಾಕುವಿನಿಂದ ಕುತ್ತಿಗೆ ಕೊಯ್ದು ಸಾಯಿಸಿರೋದಾಗಿ ತನಿಖೆಯಲ್ಲಿ ಒಪ್ಪಿದ್ದಾನೆ‌. ಕೊಲೆಗೆ ನಿಖರ ಕಾರಣ ತಿಳಿದಿಲ್ಲ. ಪ್ರಕರಣ ತನಿಖೆಯಲ್ಲಿದೆ ಅಂತ ವಿಜಯನಗರ ಎಸ್ಪಿ ಜಾಹ್ನವಿ ಹೇಳಿದ್ರು.

Edited By : Shivu K
PublicNext

PublicNext

31/01/2026 07:17 pm

Cinque Terre

18.54 K

Cinque Terre

1

ಸಂಬಂಧಿತ ಸುದ್ದಿ