ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪೊಲೀಸ್ ಸಮವಸ್ತ್ರದಲ್ಲೇ ತಾಯಿಯ ವಾತ್ಸಲ್ಯ : ಹಸಿದ ಕೂಸಿಗೆ ಹಾಲುಣಿಸಿದ "ಆಕಾಂಕ್ಷಾ ಜೈನ್"

ಮಧ್ಯಪ್ರದೇಶ : ಅಮ್ಮನ ಮಡಿಲು, ತೊಟ್ಟಿಲಂತೆ, ಅಮ್ಮನ ಕೈತುತ್ತು, ಅಮೃತದಂತೆ, ಇವೆಲ್ಲ ಸಿಕ್ಕವರೇ ಅದೃಷ್ಟವಂತರಂತೆ ಎಂಥ ಅರ್ಥಪೂರ್ಣ ಮಾತಲ್ವಾ?... ಸದ್ಯ ಈ ಮಾತನ್ನು ನೆನಪಿಸಿಕೊಳ್ಳಲು ಕಾರಣವೊಂದಿದೆ. ಅದೇನಂದ್ರೆ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ಆರೋಪಿಯ ಕೂಸಿಗೆ ಅಮ್ಮನಾಗಿದ್ದಾರೆ.

ಸಾಮಾನ್ಯವಾಗಿ ನಮಗೆ ಪೊಲೀಸರು ಅಂದಾಕ್ಷಣ ಕಣ್ಮುಂದೆ ಬರುವುದು ಲಾಠಿ, ಗಂಭೀರ ಮುಖ ಮತ್ತು ಕಠಿಣ ಕಾನೂನು ಕ್ರಮ. ಆದರೆ, ಮಧ್ಯಪ್ರದೇಶದ ದತಿಯಾದಲ್ಲಿ ನಡೆದ ಒಂದು ಘಟನೆ ಪೊಲೀಸ್ ಇಲಾಖೆಯ ಮಾನವೀಯ ಮುಖವನ್ನು ಪರಿಚಯಿಸಿದೆ. ಹೌದು ದತಿಯಾ ಜಿಲ್ಲೆಯ 'ಕಂಜರ್' ವಸಾಹತಿನಲ್ಲಿ ಅಕ್ರಮ ಮದ್ಯ ತಯಾರಿಕೆ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಆಧರಿಸಿ, ಪೊಲೀಸರ ತಂಡವೊಂದು ದಾಳಿ ನಡೆಸಿದ ವೇಳೆ ಪೊಲೀಸ್ ಜೀಪ್ ಬರುತ್ತಿರುವುದನ್ನು ಕಂಡ ಗ್ರಾಮಸ್ಥರು, ಬಂಧನದ ಭೀತಿಯಿಂದ ಕಾಲ್ಕಿತ್ತಿದ್ದಾರೆ. ಈ ವೇಳೆ, ಕೆಲ ಮಹಿಳೆಯರು ತಮ್ಮ ಹಸುಗೂಸುಗಳನ್ನು ಅಲ್ಲೇ ಬಿಟ್ಟು ಪ್ರಾಣ ಉಳಿಸಿಕೊಳ್ಳಲು ಓಡಿಹೋಗಿದ್ದಾರೆ.

ಈ ವೇಳೆ ಮನೆಯೊಂದರೊಳಗೆ ಪ್ರವೇಶಿಸಿದ ಪೊಲೀಸರಿಗೆ ಅಲ್ಲಿ ಯಾವುದೇ ಅಕ್ರಮ ಮದ್ಯ ಸಿಗದೆ ತಾಯಿ ಇಲ್ಲದೆ ಭಯ ಮತ್ತು ಹಸಿವಿನಿಂದ ಕಿರುಚಾಡುತ್ತಿದ್ದ ಸುಮಾರು ಮೂರು ತಿಂಗಳ ಪುಟ್ಟ ಮಗುವೊಂದು ಪತ್ತೆಯಾಗಿದೆ. ಮಗುವಿನ ಆರ್ತನಾದ ಕೇಳಿ ಮನಕರಗಿದ ಎಸ್‌ಡಿಒಪಿ (SDOP) ಆಕಾಂಕ್ಷಾ ಜೈನ್ ತಕ್ಷಣ ಮಗುವನ್ನು ಎತ್ತಿಕೊಂಡು ಸಮಾಧಾನಪಡಿಸಿದ್ದಾರೆ. ಹಸಿದಿದ್ದ ಕೂಸಿಗೆ ಹಾಲಿನ ಬಾಟಲಿ ತರಿಸಿ ಸ್ವತಃ ತಾವೇ ಹಾಲುಣಿಸಿದ್ದಾರೆ. ಮಗು ಅಳು ನಿಲ್ಲಿಸುವವರೆಗೂ, ಮಡಿಲಲ್ಲೇ ಇರಿಸಿಕೊಂಡು ಸಂತೈಸಿದ್ದಾರೆ. ಬಳಿಕ, ಮಗುವಿನ ಮನೆಯವರು ಮರಳಿದ ವೇಳೆ ಅವರಿಗೆ ಕಂದನನ್ನು ಹಸ್ತಾಂತರಿಸಿದ್ದಾರೆ.

ಪೊಲೀಸರ ಕರ್ತವ್ಯ ಕೇವಲ ಅಪರಾಧಿಗಳನ್ನು ಹಿಡಿಯುವುದಲ್ಲ, ಅಸಹಾಯಕರ ನೆರವಿಗೆ ನಿಲ್ಲುವುದು ಕೂಡ ಹೌದು ಎಂಬುದನ್ನು ಆಕಾಂಕ್ಷಾ ಜೈನ್ ಸಾಬೀತುಪಡಿಸಿದ್ದಾರೆ. ಅಳುವ ಕಂದನಿಗೆ ಕೆಲಹೊತ್ತು ಅಮ್ಮನಾದ ನಿಮಗೆ ನಮ್ಮದೊಂದು ಸಲಾಂ

ನಿರ್ಮಲಾ ಅರಳಿಕಟ್ಟಿ ನ್ಯೂಸ್‌ ಡೆಸ್ಕ್‌ ಪಬ್ಲಿಕ್‌ ನೆಕ್ಸ್ಟ್‌ ಹುಬ್ಬಳ್ಳಿ

Edited By :
PublicNext

PublicNext

30/01/2026 12:34 pm

Cinque Terre

25.74 K

Cinque Terre

0

ಸಂಬಂಧಿತ ಸುದ್ದಿ