ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಭಾರತ-ಅಮೆರಿಕ ಸಂಬಂಧಗಳ ಹೊಸ ಅಧ್ಯಾಯ: ಬೃಹತ್ ವ್ಯಾಪಾರ ಒಪ್ಪಂದಕ್ಕೆ ಗ್ರೀನ್ ಸಿಗ್ನಲ್!

ನವದೆಹಲಿ: ಭಾರತ ಮತ್ತು ಅಮೆರಿಕ ನಡುವಿನ ಸಂಬಂಧಗಳು ಮತ್ತೆ ಬಲಗೊಳ್ಳುತ್ತಿವೆ. ಕಳೆದ ವರ್ಷ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ವಿಧಿಸಿದ್ದ ಅಧಿಕ ಸುಂಕಗಳಿಂದಾಗಿ ಹದಗೆಟ್ಟಿದ್ದ ದ್ವಿಪಕ್ಷೀಯ ಸಂಬಂಧಗಳು, ಈ ಹೊಸ ವರ್ಷದಲ್ಲಿ ಮತ್ತೆ ಹಳಿಗೆ ಬಂದಿವೆ.

ಎರಡೂ ದೇಶಗಳ ನಡುವೆ ಹೊಸ ವ್ಯಾಪಾರ ಒಪ್ಪಂದಕ್ಕೆ ನಾಂದಿ ಹಾಡಿದೆ. ಅಧಿಕಾರಿಗಳು ಈ ಪ್ರಮುಖ ಒಪ್ಪಂದದ ವಿವರಗಳನ್ನು ಬಹಿರಂಗಪಡಿಸಿದ್ದಾರೆ.

(ಫೆ.02) ಉಭಯ ನಾಯಕರ ನಡುವಿನ ಫೋನ್ ಕರೆಯ ನಂತರ, ಟ್ರಂಪ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ, ಭಾರತದ ಮೇಲಿನ ಸುಂಕವನ್ನು ಶೇ. 25ರಿಂದ ಶೇ. 18ಕ್ಕೆ ಇಳಿಸುವ ಮೂಲಕ ಸುಂಕ ಕಡಿತವನ್ನು ಘೋಷಿಸಿದ್ದಾರೆ. ಇದು ತಕ್ಷಣ ಜಾರಿಗೆ ಬರಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಇದೇ ವೇಳೆ, ರಷ್ಯಾದಿಂದ ತೈಲ ಖರೀದಿ ಮಾಡಿದ್ದಕ್ಕೆ ಹೆಚ್ಚುವರಿಯಾಗಿ ವಿಧಿಸಿದ್ದ ಶೇ. 25ರಷ್ಟು ಸುಂಕವನ್ನೂ ಕಡಿತಗೊಳಿಸಲಾಗಿದೆ. ಭಾರತವು ರಷ್ಯಾದಿಂದ ತೈಲ ಖರೀದಿ ಮಾಡುವುದನ್ನು ನಿಲ್ಲಿಸುವುದಾಗಿ ಒಪ್ಪಿಕೊಂಡ ಕಾರಣ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಟ್ರಂಪ್ ಬಹಿರಂಗಪಡಿಸಿದ್ದಾರೆ.

ಬೃಹತ್ ವ್ಯಾಪಾರ ಒಪ್ಪಂದ

ಅಂದಹಾಗೆ, ಭಾರತ ಮತ್ತು ಅಮೆರಿಕ ನಡುವೆ ಮಹತ್ವದ ವ್ಯಾಪಾರ ಒಪ್ಪಂದಕ್ಕೆ ಒಪ್ಪಿಗೆ ಸಿಕ್ಕಿದ್ದು, ಭಾರತವು 500 ಬಿಲಿಯನ್ ಡಾಲರ್‌ಗಳಿಗಿಂತ ಹೆಚ್ಚು ಮೌಲ್ಯದ ಅಮೆರಿಕನ್ ಉತ್ಪನ್ನಗಳನ್ನು ಖರೀದಿಸಲು ಒಪ್ಪಿಕೊಂಡಿದೆ ಎಂದು ಟ್ರಂಪ್ ಹೇಳಿದ್ದಾರೆ. ಈ ಒಪ್ಪಂದವು ಕೃಷಿ ಸೇರಿದಂತೆ ಬಹು ಕಾರ್ಯತಂತ್ರದ ಕ್ಷೇತ್ರಗಳನ್ನು ವ್ಯಾಪಿಸಿದೆ ಎಂದು ಭಾರತೀಯ ಅಧಿಕಾರಿಗಳು ತಿಳಿಸಿದ್ದಾರೆ.

ಭಾರತ ಖರೀದಿಸಲಿರುವ ಪ್ರಮುಖ ಉತ್ಪನ್ನಗಳು

ಭಾರತ ಅಮೆರಿಕದಿಂದ ಖರೀದಿಸುವ ಉತ್ಪನ್ನಗಳ ಪಟ್ಟಿಯಲ್ಲಿ ಪೆಟ್ರೋಲಿಯಂ, ರಕ್ಷಣಾ ಸಾಧನಗಳು, ಎಲೆಕ್ಟ್ರಾನಿಕ್ಸ್, ಔಷಧಗಳು, ದೂರಸಂಪರ್ಕ ಉತ್ಪನ್ನಗಳು ಮತ್ತು ವಿಮಾನಗಳನ್ನೂ ಒಳಗೊಂಡಿದೆ ಎಂದು ಭಾರತೀಯ ಸರ್ಕಾರಿ ಅಧಿಕಾರಿಯೊಬ್ಬರು ರಾಯಿಟರ್ಸ್‌ಗೆ ಮಾಹಿತಿ ನೀಡಿದ್ದಾರೆ.

ಅಲ್ಲದೆ, ಕೆಲವು ಕೃಷಿ ಉತ್ಪನ್ನಗಳನ್ನು ಸಹ ಈ ವ್ಯಾಪಾರ ಒಪ್ಪಂದ ಒಳಗೊಂಡಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಹೆಚ್ಚುವರಿ ವಲಯಗಳನ್ನು ಒಳಗೊಂಡ ಹೆಚ್ಚು ಸಮಗ್ರ ಒಪ್ಪಂದದ ಕುರಿತು ಮಾತುಕತೆ ಮುಂದುವರಿಯಲಿದೆ ಎಂದು ಮೂಲಗಳು ರಾಯಿಟರ್ಸ್‌ಗೆ ತಿಳಿಸಿವೆ.

ಕೃಷಿ ಕ್ಷೇತ್ರದ ಮಹತ್ವ

ಈ ವ್ಯಾಪಾರ ಒಪ್ಪಂದದಿಂದ ಭಾರತದಲ್ಲಿ ಅಮೆರಿಕದ ಕೃಷಿ ಉತ್ಪನ್ನಗಳಿಗೆ ಹೆಚ್ಚಿನ ಮಾರುಕಟ್ಟೆ ಪ್ರವೇಶ ಸಿಗಲಿದೆ ಎಂದು ಅಮೆರಿಕ ಕೂಡ ದೃಢಪಡಿಸಿದೆ.

ಈ ಬಗ್ಗೆ ತಮ್ಮ ಎಕ್ಸ್​ ಖಾತೆಯಲ್ಲಿ ಬರೆದುಕೊಂಡಿರುವ ಅಮೆರಿಕದ ಕೃಷಿ ಕಾರ್ಯದರ್ಶಿ ಬ್ರೂಕ್ ರೋಲಿನ್ಸ್, ಹೊಸ ಯುಎಸ್-ಭಾರತ ಒಪ್ಪಂದವು ಹೆಚ್ಚಿನ ಅಮೆರಿಕನ್ ಕೃಷಿ ಉತ್ಪನ್ನಗಳನ್ನು ಭಾರತದ ಬೃಹತ್ ಮಾರುಕಟ್ಟೆಗೆ ರಫ್ತು ಮಾಡುತ್ತದೆ. ಇದರಿಂದ ಗ್ರಾಮೀಣ ಅಮೆರಿಕಕ್ಕೆ ಹಣ ಪಂಪ್​ ಆಗುತ್ತದೆ ಎಂದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ-ಭಾರತ ನಡುವಿನ ಈ ಒಪ್ಪಂದವನ್ನು ಸ್ವಾಗತಿಸಿದ್ದಾರೆ. ಸುಂಕ ಕಡಿತದಿಂದ ಸಂತೋಷಗೊಂಡಿದ್ದೇನೆ ಎಂದು ತಿಳಿಸಿರುವ ಅವರು, ಟ್ರಂಪ್ ಅವರ ನಾಯಕತ್ವ ಜಾಗತಿಕ ಶಾಂತಿ, ಸ್ಥಿರತೆ ಮತ್ತು ಸಮೃದ್ಧಿಗೆ ಅತ್ಯಗತ್ಯ ಎಂದು ಹೊಗಳಿದ್ದಾರೆ.

Edited By : Abhishek Kamoji
PublicNext

PublicNext

03/02/2026 08:32 pm

Cinque Terre

21.5 K

Cinque Terre

0

ಸಂಬಂಧಿತ ಸುದ್ದಿ