ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಳ್ಳಾರಿ: ಎಎಸ್ಪಿಗೆ ಡಿವೈಎಸ್ಪಿ ಅಧಿಕಾರ ಹಸ್ತಾಂತರಿಸಿಲ್ಲ : ಬಿಜೆಪಿ ಆಕ್ರೋಶ

ಬಳ್ಳಾರಿ: ತುಮಕೂರು ಜಿಲ್ಲೆಯ ತಿಪಟೂರು ಉಪವಿಭಾಗದ ಎಎಸ್‌ಪಿ ಆಗಿದ್ದ ಐಪಿಎಸ್ ಅಧಿಕಾರಿ ಯಶ್ ಕುಮಾರ್ ಶರ್ಮಾ ಅವರನ್ನು ಮಂಗಳವಾರ ಬಳ್ಳಾರಿ ನಗರ ಎಎಸ್ಪಿಯಾಗಿ ನಿಯೋಜಿಸಿ ಬುಧವಾರ ಬಂಟ್ವಾಳಕ್ಕೆ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಹಿನ್ನೆಲೆ ಸರ್ಕಾರದ ಆದೇಶ ಹಿನ್ನೆಲೆಯಲ್ಲಿ ಅಧಿಕಾರ ಸ್ವೀಕರಿಸಲು ಬುಧವಾರ ಬೆಳಗ್ಗೆಯೇ ಯಶ್ ಕುಮಾರ್ ಶರ್ಮಾ ನಗರ ಡಿವೈಎಸ್ಪಿ ಕಚೇರಿಗೆ ಆಗಮಿಸಿದ್ದರು.

ಆದರೆ, ಹಿಂದಿನ ನಗರ ಡಿವೈಎಸ್ಪಿ ಚಂದ್ರಕಾಂತ್ ನಂದಾರೆಡ್ಡಿ, ವರ್ಗಾವಣೆ ಆದೇಶ ಪ್ರತಿಯಲ್ಲಿ ನನ್ನ ಹೆಸರು ನಮೂದಾಗಿಲ್ಲ. ಜತೆಗೆ ಸ್ಥಳವನ್ನೂ ತೋರಿಸಿಲ್ಲ. ಹೀಗಾಗಿ ನಾನು ಅಧಿಕಾರ ಬಿಟ್ಟುಕೊಡಲ್ಲ, ಹಸ್ತಾಂತರಿಸಲ್ಲ ಎಂದು ತಿಳಿಸಿದ್ದಾರೆ.

ಹೀಗಾಗಿ ಯಶ್ ಕುಮಾರ್ ಶರ್ಮಾ, ವಿಧಿ ಇಲ್ಲದೆ ಸಂಜೆ ವಾಪಸ್‌ ತೆರಳಿದ್ದಾರೆ. ಬಳ್ಳಾರಿ ನಗರದ ಬ್ಯಾನರ್ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಎಸ್ಪಿ ಪಿ. ರವಿಕುಮಾರ್, ನಗರ ಡಿವೈಎಸ್ಪಿ ಚಂದ್ರಕಾಂತ್ ನಂದಾರೆಡ್ಡಿ, ಗಂಗಾವತಿ ಶಾಸಕ ಜಿ.ಜನಾರ್ದನರೆಡ್ಡಿಗೆ ಆರೋಪದ ಕೇಂದ್ರಬಿಂದುವಾಗಿದ್ದರು. ಇದೀಗ ಎಎಸ್‌ಪಿ ವರ್ಗಾವಣೆ ಆದೇಶ ತಡೆದಿರುವುದರಿಂದ ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ...

Edited By :
PublicNext

PublicNext

30/01/2026 04:42 pm

Cinque Terre

6.75 K

Cinque Terre

0

ಸಂಬಂಧಿತ ಸುದ್ದಿ