ಬಳ್ಳಾರಿ: ಬಳ್ಳಾರಿ ನಗರದಲ್ಲಿನ ಪುಲ್ಲಯ್ಯ ಕಾಂಪೌಂಡ್ ಒಳ ಆವರಣದಲ್ಲಿ ಶುಕ್ರವಾರ ಬೆಳಗ್ಗೆ 2ಗಂಟೆಗೆ ಪಡಿತರ ಅಕ್ಕಿ ಸಾಗಾಟದ ಅಡ್ಡೆ ಮೇಲೆ ದಾಳಿ ನಡೆಸಿ 523 ಚೀಲ ಅಕ್ಕಿ ವಶಕ್ಕೆ ಪಡೆದುಕೊಂಡಿದೆ. ದಾಳಿಯನ್ನು ಬಳ್ಳಾರಿ ಸಹಾಯಕ ಆಯುಕ್ತ ರಾಜೇಶ್ ನೇತೃತ್ವದಲ್ಲಿ ನಡೆಸಿದ್ದಾರೆ. ಪಡಿತರ ಅಂಗಡಿಗಳಿಂದ pickup ವಾಹನದ ಮೂಲಕ ಅಕ್ರಮವಾಗಿ ಸಂಗ್ರಹಿಸಿದ ಅಕ್ಕಿಯನ್ನು ಗುಜರಾತ್ ಮೂಲದ ದೊಡ್ಡ ಲಾರಿಯಲ್ಲಿ ತುಂಬಿ ಸಾಗಿಸಲು ಯತ್ನಿಸುತ್ತಿದ್ದರು.
ಸಣ್ಣ ವಾಹನದಿಂದ ದೊಡ್ಡ ಲಾರಿಗೆ ಅಕ್ಕಿ ತುಂಬುತ್ತಿರುವ ಸಮಯದಲ್ಲೇ ದಾಳಿ ನಡೆದಿದ್ದು, ಒಂದು ದೊಡ್ಡ ಲಾರಿ, ಎರಡು pickup ಆಟೋಗಳು, ಇಬ್ಬರು ಗುಜರಾತ್ ಮೂಲದ ಚಾಲಕರು, ಬಳ್ಳಾರಿ ಮೂಲದ ಒಬ್ಬ ಚಾಲಕ ಮತ್ತು ಐವರು ಹಮಾಲಿಗಳನ್ನು ವಶಕ್ಕೆ ಪಡೆದಿದ್ದಾರೆ. ಇನ್ನೂ ಒಬ್ಬ ಚಾಲಕ ಮತ್ತು ಐವರು ಹಮಾಲಿಗಳು ಪರಾರಿಯಾಗಿದ್ದಾರೆ. ಅಕ್ಕಿಯನ್ನು ಅಕ್ರಮವಾಗಿ ಗುಜರಾತ್ ರಾಜ್ಯಕ್ಕೆ ಸಾಗಿಸಲು ತಯಾರಾಗಿದ್ದ ಘಟಕದ ವಿರುದ್ಧ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
PublicNext
24/01/2026 08:22 am
LOADING...