ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಳ್ಳಾರಿ: ಅಕ್ಕಿ ದಂಧೆಕೋರರ ಮೇಲೆ ಪೊಲೀಸರ ದಾಳಿ, 170 ಚೀಲ ಅಕ್ರಮ ಪಡಿತರ ಅಕ್ಕಿ ವಶ

ಬಳ್ಳಾರಿ : ಬಳ್ಳಾರಿ ಗ್ರಾಮೀಣ ಪೊಲೀಸರು ಹಾಗೂ ಎಪಿಎಂಸಿ ಪೊಲೀಸರು ಮತ್ತು ಆಹಾರ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ಪಡಿತರ ಅಕ್ಕಿ ಸಾಗಾಟ ಮಾಡ್ತಿದ್ದ ವಾಹನ ಸೀಜ್ ಮಾಡಿದ್ದಾರೆ.

ಪಡಿತರ ಅಂಗಡಿಯಲ್ಲೇ ಚೀಲ ಬದಲಾಯಿಸಿ ಸಾಗಾಟ ಮಾಡಲಾಗ್ತಿತ್ತು. ಪಡಿತರ ಅಂಗಡಿಯಲ್ಲೇ ಚೀಲ ಬದಲಾಯಿಸಿ ಬುಲೆರೋ ವಾಹನದಲ್ಲಿ ಪಡಿತರ ಅಕ್ಕಿ ದಂಧೆಕೋರರು ಸಾಗಾಟ ಮಾಡ್ತಿದ್ರು..ಅಕ್ಕಿ ದಂಧೆಯ ಕೆಲ ಕಿಂಗ್ ಪಿನ್ ಗಳಿಗೆ ಪಡಿತರ ಅಕ್ಕಿ ಮಾರಾಟ ಮಾಡ್ತಿತ್ತಿದ್ರು ಆರೋಪಿಗಳು. ಖಚಿತ ಮಾಹಿತಿ ಮೇರೆಗೆ ಪೊಲೀಸರು ಹಾಗೂ ಆಹಾರ ಇಲಾಖೆ ಅಧಿಕಾರಿಗಳು ದಾಳಿ ಮಾಡಿದ್ದಾರೆ.

ಬಳ್ಳಾರಿ ಗ್ರಾಮಾಂತರ ಪೊಲೀಸರಿಂದ 1.75 ಲಕ್ಷ ಮೌಲ್ಯದ 170 ಚೀಲಗಳಲ್ಲಿನ 80 ಕ್ವಿಂಟಾಲ್ ಪಡಿತರ ಅಕ್ಕಿ ವಶಕ್ಕೆ ಪಡೆದಿದ್ದಾರೆ. ನ್ಯಾಯಬೆಲೆ ಅಂಗಡಿ ಮಾಲಕಿ ರಾಜೇಶ್ವರಿ, ಬಸವರಾಜ ಹಾಗೂ ಪ್ರತಾಪ್ ಸೇರಿ ಐದು ಜನರ ಮೇಲೆ FIR ದಾಖಲಿಸಿ, ಇಬ್ಬರನ್ನು ಬಂಧನ ಮಾಡಲಾಗಿದೆ..

-ವೀರೇಶ್ ನಾಯಕ ಎಲ್, ಪಬ್ಲಿಕ್ ನೆಕ್ಸ್ಟ್, ಬಳ್ಳಾರಿ

Edited By : Shivu K
PublicNext

PublicNext

31/01/2026 07:52 pm

Cinque Terre

16.97 K

Cinque Terre

0

ಸಂಬಂಧಿತ ಸುದ್ದಿ