ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ: ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿಯ ಚಿಂತನ ಮಂಥನ ಸಭೆ

ಗದಗ: ಸ್ಥಳೀಯ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಶನಿವಾರ ಆಯೋಜಿಸಲಾಗಿದ್ದ ತಾಲೂಕು ಮಟ್ಟದ ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿಯ ಚಿಂತನ ಮಂಥನ ಸಭೆ ಜರಗಿತು.

ಕಾರ್ಯಕ್ರಮವನ್ನು ಸಸಿಗೆ ನೀರು ಹಾಕುವ ಮೂಲಕ ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಡಿ.ಆರ್ ಪಾಟೀಲ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತಿ ಹಾಗೂ ತಾಲೂಕು ಪಂಚಾಯತಯವರು ಗ್ರಾಮವನ್ನು ಹೇಗೆ ಕಟ್ಟಬೇಕು ಗ್ರಾಮವನ್ನು ಹೇಗೆ ಸದೃಢಗೊಳಿಸಬೇಕು.

ಅರಿವು ಹಾಗೂ ಕಾನೂನು ಸಂವಿಧಾನದ ರೀತಿಯಲ್ಲಿ ಗ್ರಾಮದ ಪ್ರತಿಯೊಂದು ಕುಟುಂಬಕ್ಕೆ ಸಹ ಕಾರ್ಯಕಾರಿಣಿ ಸಭೆಯನ್ನು ಏರ್ಪಡಿಸಿ ಗ್ರಾಮದವರಿಗೆ ಅರಿವು ಮೂಡಿಸಬೇಕು. ಚಾಚು ತಪ್ಪದೇ ಗ್ರಾಮ ಪಂಚಾಯಿತಿ ಎಂದರೇನು? ಇದರ ಅನುಕೂಲಗಳೇನು ಹಾಗೂ ಪ್ರತಿಯೊಬ್ಬ ಗ್ರಾಮದ ಜನರಿಗೆ ಮೂಲಭೂತ ಸೌಕರ್ಯಗಳ ಹೇಗೆ ಪಡೆದುಕೊಳ್ಳಬೇಕು ಎನ್ನುವ ವಿಷಯವನ್ನು ಪ್ರಸ್ತುತಪಡಿಸಿದರು.

ಕಾನೂನು ಅನುಕೂಲವಾಗಿಯೇ ಸಂವಿಧಾನ ಸಂವಿಧಾನದ ಅನುಕೂಲವಾಗಿಯೇ ಸುತ್ತೋಲೆ ಇರುತ್ತದೆ. ಗ್ರಾಮದವರಿಗೆ ಆಶ್ರಯ ಫ್ಲಾಟ್ ಗಳು, ದನದ ಕೊಟ್ಟಡಿ, ಮನೆ ಕಟ್ಟಲಿಕ್ಕೆ ಹಾಗೂ ಇನ್ನೂ ಅನೇಕ ಸೌಲಭ್ಯಗಳನ್ನು ಅನುದಾನ ಬಂದಲ್ಲಿ ತಾವೇ ಸ್ವತಹ ಗ್ರಾಮಸ್ಥರು ಒಂದು ಸಭೆ ಕೂಡಿ ತಾವುಗಳೇ ಆಯ್ಕೆ ಮಾಡಿ ಬಂದಂತ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ನಮ್ಮ ಜವಾಬ್ದಾರಿಯನ್ನು ಕಾನೂನು ಪ್ರಕಾರ ನಿಭಾಯಿಸಬೇಕು ಗ್ರಾಮ ಪಂಚಾಯತಿಯಲ್ಲಿ ಅಧಿಕಾರವನ್ನು ಪ್ರತಿಯೊಬ್ಬ ಗ್ರಾಮದ ಜನರು ಸದುಪಯೋಗ ಪಡೆದುಕೊಳ್ಳಬೇಕು ಗ್ರಾಮದ ಅಭಿವೃದ್ಧಿಯ ಕಾರ್ಯಕ್ರಮಗಳು ಗ್ರಾಮಸ್ಥರ ತೀರ್ಮಾನವೇ ಅಂತಿಮ ತೀರ್ಮಾನ ಎಂದು ಹೇಳಿದರು.

ಗ್ರಾಮದ ಸಮಸ್ಯೆಗಳನ್ನು ತಾವೇ ಸ್ವತಹ ಬಗೆಹರಿಸಿಕೊಳ್ಳಬೇಕು. ನಿಮ್ಮೆಲ್ಲರ ಸಹಕಾರ ಇದ್ದರೆ ಇನ್ನು ಹೆಚ್ಚಿನ ಅಭಿವೃದ್ಧಿ ಕಾರ್ಯಗಳಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಅಧಿಕಾರಿ ಎ ಹೊಂಬಾಳೆಮಠ, ಜಿ ಎಸ್ ಗಡ್ಡೆದೇವರ ಮಠ, ಸುಜಾತ ದೊಡ್ಡಮನಿ, ನಾಗರಾಜ ಮಡಿವಾಳರ, ಎಸ್ ಪಿ ಬಳೆಗಾರ, ರಾಮಕೃಷ್ಣ ದೊಡ್ಡಮನಿ, ರಾಮಣ್ಣ ಲಮಾಣಿ, ಜಯಕ್ಕ ಕಳ್ಳಿ, ವಿರುಪಾಕ್ಷಪ್ಪ ಪಡಗೇರಿ, ಚನ್ನಪ್ಪ ಜಗಲಿ, ಯಲ್ಲವ್ವ ದುರ್ಗಣ್ಣವರ, ಶಿವಾನಂದ ಪಾಟೀಲ, ರಾಮಣ್ಣ ಲಮಾಣಿ, ಯಲ್ಲಪ್ಪ ತಳವಾರ, ಶಶಿಕಲಾ ಬಡಿಗೇರ, ಪಿಎಸ್ಐ ನಾಗರಾಜ ಗಡದ, ಕ್ರೈಂ ಪೊಲೀಸ್ ಟಿ.ಕೆ ರಾಠೋಡ, ಇಓ ಕೃಷ್ಣಪ್ಪ ಧರ್ಮರ, ಈಶ್ವರ ಮೇಡ್ಲೇರಿ, ಪ್ರವೀಣ ಬಾಳಿಕಾಯಿ, ವಿಜಯ ಕರಡಿ, ಇಸ್ಮೈಲ್ ಆಡೂರು ಹಾಗೂ ಲಕ್ಷ್ಮೇಶ್ವರ ತಾಲೂಕಿನ ಗ್ರಾಮಗಳ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರು ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.

Edited By : PublicNext Desk
Kshetra Samachara

Kshetra Samachara

31/01/2026 04:19 pm

Cinque Terre

5.18 K

Cinque Terre

0

ಸಂಬಂಧಿತ ಸುದ್ದಿ