ಗದಗ: ದೇಶಾದ್ಯಂತ ಬ್ಯಾಂಕ್ ನೌಕರರ ಮುಷ್ಕರ ಹಿನ್ನೆಲೆಯಲ್ಲಿ ಗದಗ ಜಿಲ್ಲೆಯಲ್ಲೂ ಬ್ಯಾಂಕ್ ನೌಕರರಿಂದ ಮುಷ್ಕರ ಮಾಡಲಾಗಿದೆ. ಗದಗ ನಗರದ ಮಹಾತ್ಮಾ ಗಾಂಧಿ ವೃತ್ತದ ಬಳಿಯ ಕೆನರಾ ಬ್ಯಾಂಕ್ ಆವರಣದಲ್ಲಿ ಮುಷ್ಕರ ನಡೆದಿದ್ದು, ವಾರಕ್ಕೆ ಐದು ದಿನ ಮಾತ್ರ ಕೆಲಸದ ದಿನ ಮಾಡುವಂತೆ ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.
ಕೆಂದ್ರ ಸರ್ಕಾರದ ಅಡಿಯಲ್ಲಿ ಬರುವ ಜನರಲ್ ಇನ್ಶುರೆನ್ಸ್ ಕಂಪನಿಗಳು ಈಗಾಗಲೇ ಐದು ದಿನ ಕಾರ್ಯ ನಿರ್ವಹಿಸುತ್ತಿವೆ. ನಮಗೂ ವಾರಕ್ಕೆ ಐದು ದಿನ ಮಾತ್ರ ಕಾರ್ಯದ ದಿನ ಮಾಡಿ ಅಂತಾ ಒತ್ತಾಯಿಸಿದ್ದಾರೆ. ಪ್ರತಿಭಟನೆಯಲ್ಲಿ ವಿವಿಧ ಸರ್ಕಾರಿ ಬ್ಯಾಂಕ್ ನೌಕರರು ಭಾಗವಹಿಸಿದ್ದರು.
Kshetra Samachara
27/01/2026 03:06 pm
LOADING...