ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ : ಫೆ.14 ರಂದು ಲಕ್ಷ್ಮೇಶ್ವರ ತಾಲೂಕ 2ನೇ ಕನ್ನಡ ಸಾಹಿತ್ಯ ಸಮ್ಮೇಳನ

ಗದಗ : ಇತಿಹಾಸ ಪ್ರಸಿದ್ಧ ತಾಲೂಕಿನ ಕೋಟೆಗ್ರಾಮ ಯಳವತ್ತಿ ಗ್ರಾಮದಲ್ಲಿ ಇದೇ ಫೆಬ್ರವರಿ 14 ರಂದು ಹಮ್ಮಿಕೊಳ್ಳಲಾಗುತ್ತಿರುವ ಲಕ್ಷ್ಮೇಶ್ವರ ತಾಲೂಕ 2ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಎಲ್ಲರೂ ಸೇರಿ ಯಶಸ್ವಿಗೊಳಿಸೋಣ. ಕವಿಗೋಷ್ಠಿ, ಉಪನ್ಯಾಸಗಳಂತಹ ಕಾರ್ಯಗಳಲ್ಲಿ ಹೊಸಬರಿಗೆ ಅವಕಾಶ ನೀಡೋಣ" ಎಂದು ಹಿರಿಯ ಸಾಹಿತಿ,ವಕೀಲ ಬಿ.ಎಸ್.ಬಾಳೇಶ್ವರಮಠ ಅಭಿಪ್ರಾಯಪಟ್ಟರು.

ಅವರು ಲಕ್ಷ್ಮೇಶ್ವರ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು ಆಜೀವ ಸದಸ್ಯರು, ಹಿರಿಯರು, ಸಾಹಿತಿಗಳು, ಸಾಹಿತ್ಯಾಭಿಮಾನಿಗಳು, ಕನ್ನಡಪರ ಸಂಘಟನೆಗಳ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು.

ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಯಳವತ್ತಿಯ ಶಿಕ್ಷಕ ಆರ್.ಎಸ್.ಗಾಣಿಗೇರ "ಸಮ್ಮೇಳನ ಆಯೋಜಿಸುವ ಅವಕಾಶ ಯಳವತ್ತಿ ಗ್ರಾಮಕ್ಕೆ ನೀಡಿದ್ದಕ್ಕಾಗಿ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಎಲ್ಲ ಸಾಹಿತ್ಯ ಬಳಗಕ್ಕೆ ಧನ್ಯವಾದಗಳು. ಊರಿನ ಹಿರಿಯರು, ಯುವಕರು, ಸಾಹಿತ್ಯಭಿಮಾನಿಗಳು, ಸರ್ವರೂ ಸೇರಿ ಪ್ರತಿದಿನ ಸಮ್ಮೇಳನಕ್ಕಾಗಿ ಶ್ರಮಿಸುತ್ತಿದ್ದಾರೆ. ಯಳವತ್ತಿ ಗ್ರಾಮಕ್ಕೆ ಅಗತ್ಯವಾಗಿರುವ ಕೆಲವು ಅಂಶಗಳನ್ನು ಸಮ್ಮೇಳನದ ಮೂಲಕ ಒತ್ತಾಯಿಸುವಂತಾಗಬೇಕು. ಕನ್ನಡ ತೇರನು ಎಳೆಯಲು ಯಳವತ್ತಿ ಗ್ರಾಮ ಸಜ್ಜಾಗುತ್ತಿದೆ" ಎಂದರು. ಸಾಹಿತಿ ಹಾಗೂ ಒಡೆಯರ ಮಲ್ಲಾಪುರ ಮುರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಚಾರ್ಯ ನಾಗರಾಜ ಕಳಸಾಪುರ ಮಾತನಾಡಿ "ಕನ್ನಡದ ತೇರನ್ನು ಎಳೆಯುವ ಈ ಕನ್ನಡದ ಹಬ್ಬಕ್ಕೆ ನಾವೆಲ್ಲರೂ ಕೂಡ ತನು-ಮನ- ಧನದೊಂದಿಗೆ ಸಹಕರಿಸಿ ಸಂಭ್ರಮಿಸೋಣ, ಯಶಸ್ವಿಗೊಳಿಸೋಣ" ಎಂದರು.

ತಾಲೂಕಾ ಮಕ್ಕಳ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಗರಾಜ ಹಣಗಿ ಮಾತನಾಡಿ "ಗೋಷ್ಠಿಯಲ್ಲಿ ಮಕ್ಕಳ ಸಾಹಿತ್ಯದ ಗೋಷ್ಠಿಯು ಕೂಡ ಇರಲಿ" ಎಂದು ಸಲಹೆ ನೀಡಿದರು.

ಹಿರಿಯ ಸಾಹಿತಿಗಳಾದ ಸಿ.ಜಿ.ಹಿರೇಮಠ,ಕೊತ್ತಲ ಮಹದೇವಪ್ಪ, ಎಸ್.ಎಫ್.ಆದಿ, ಕೆ.ಎಸ್. ಕೊಡ್ಲಿವಾಡ,ಕ.ರಾ.ವೇ ಸ್ವಾಭಿಮಾನಿ ಬಣದ ಜಿಲ್ಲಾಧ್ಯಕ್ಷ ಶರಣು ಗೋಡಿ, ಕರಾವಿಪ ಜಿಲ್ಲಾಧ್ಯಕ್ಷ ರಮೇಶ ರಿತ್ತಿ, ತಾಲೂಕಾ ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ನಿರ್ಮಲಾ ಅರಳಿ, ಪುರಸಭಾ ಮಾಜಿ ಅಧ್ಯಕ್ಷೆ ಅಶ್ವಿನಿ ಅಂಕಲಕೋಟಿ, ರಫೀಕ್ ಕಲಬುರ್ಗಿ, ಸಾಹಿತಿ ಪ್ರೊ.ಸೋಮಶೇಖರ ಕೆರಿಮನಿ, ಶರಣಪ್ಪ ಆಲೂರ ಮುಂತಾದವರು ಹಲವಾರು ಉಪಯುಕ್ತ ಸಲಹೆ ನೀಡಿದರು. ತಾಲೂಕ ಕ.ಸಾ.ಪ ಅಧ್ಯಕ್ಷ ಈಶ್ವರ ಮೆಡ್ಲೇರಿ ಪ್ರಾಸ್ತಾವಿಕವಾಗಿ ಮಾತನಾಡಿ ಎರಡನೇ ತಾಲೂಕ ಕನ್ನಡ ಸಾಹಿತ್ಯ ಸಮ್ಮೇಳನದ ಎಲ್ಲ ಯೋಜಿತ ರೂಪುರೇಷೆ, ವಿವರಣೆಗಳನ್ನು ಸಭೆಯ ಮುಂದಿರಿಸಿದರು.

ಕ.ಸಾ.ಪ ಸಲಹಾ ಸಮಿತಿಯ ಎಸ್.ಎನ್.ಮಳಲಿ, ಎಸ್.ಬಿ. ಅಣ್ಣಿಗೇರಿ, ಪ್ರೌಢಶಾಲಾ ಶಿಕ್ಷಕರ ಸಂಘದ ಪದಾಧಿಕಾರಿ ಸಂಗಮೇಶ ಅಂಗಡಿ, ಜೆ.ಎಸ್.ರಾಮಶೆಟ್ರ, ಎಸ್.ಎಫ್.ಕೊಡ್ಲಿ, ಐ.ಎ. ಬಳಿಗಾರ, ಎಸ್.ವಿ.ಕನೋಜ, ಮಹಾಂತೇಶ ಬೇರಗಣ್ಣವರ, ಶಂಕರ ಶಿಳ್ಳಿನ, ರತ್ನಕ್ಕ ಕರ್ಕಿ, ಶಿವಾನಂದ ವಡಕಣ್ಣವರ, ಡಾ.ಶಿವಾನಂದ ಹೂವಿನ, ಗಂಗಾಧರ ಅರಳಿ , ಎಂ.ಕೆ.ಕಳ್ಳಿಮಠ, ಸೊಲಬಪ್ಪ ಸಜ್ಜನ, ಎನ್.ಬಿ.ತಳ್ಳಳ್ಳಿ, ಕೈಸರ್ ಮಹಮ್ಮದ್ ಅಲಿ, ಗಿರೀಶ ಸಜ್ಜನ ಮುಂತಾದವರು ಭಾಗವಹಿಸಿದ್ದರು.

ಕ.ಸಾ.ಪ ತಾಲೂಕ ಘಟಕದ ಗೌರವ ಕಾರ್ಯದರ್ಶಿ ಮಂಜುನಾಥ ಚಾಕಲಬ್ಬಿ ಕಾರ್ಯಕ್ರಮ ನಿರೂಪಿಸಿದರು. ಸಂಘಟನಾ ಕಾರ್ಯದರ್ಶಿ ನಾಗರಾಜ ಮಜ್ಜಿಗುಡ್ಡ ವಂದಿಸಿದರು.

ಫೋಟೋ ಕ್ಯಾಪ್ಸನ್.ಕನ್ನಡ ಸಾಹಿತ್ಯ ಪರಿಷತ್ತು ಆಜೀವ ಸದಸ್ಯರು, ಹಿರಿಯರು, ಸಾಹಿತಿಗಳು, ಸಾಹಿತ್ಯಾಭಿಮಾನಿಗಳು, ಕನ್ನಡಪರ ಸಂಘಟನೆಗಳ ಪೂರ್ವಭಾವಿ ಸಭೆ ಮಾಡಿದರು.

Edited By : PublicNext Desk
Kshetra Samachara

Kshetra Samachara

02/02/2026 03:56 pm

Cinque Terre

3.38 K

Cinque Terre

0

ಸಂಬಂಧಿತ ಸುದ್ದಿ