ತುಮಕೂರು: ನಗರದಲ್ಲಿ ನಡೆದ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಮಟ್ಟದ ಕ್ರೀಡಾಕೂಟದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಜಿಲ್ಲಾಸ್ಪತ್ರೆ ತಂಡ ಪ್ರಥಮ ಬಹುಮಾನ ಪಡೆಯಿತು. ವಿಜೇತ ತಂಡವನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಚಂದ್ರಶೇಖರ್, ಜಿಲ್ಲಾ ಶಸ್ತçಚಿಕಿತ್ಸಕ ಡಾ.ಅಸ್ಗರ್ ಬೇಗ್ ಅಭಿನಂದಿಸಿದರು.
ಈ ವೇಳೆ ಮಾತನಾಡಿದ ಡಾ.ಅಸ್ಗರ್ ಬೇಗ್, ಆರೋಗ್ಯ ಇಲಾಖೆ ಸಿಬ್ಬಂದಿ ಆರೋಗ್ಯದಲ್ಲಿ ದೃಢಕಾಯರಾಗಿ, ಕ್ರೀಡೆಯಲ್ಲೂ ಸಾಧನೆ ಮಾಡುವ ಮೂಲಕ ಇತರೆ ಇಲಾಖೆಗೆ ಪ್ರೇರಣೆ ಆಗಿರುವಿರಿ ಎಂದು ಶ್ಲಾಘಿಸಿ, ದೈನಂದಿನ ಒತ್ತಡದ ಕೆಲಸದ ನಡುವೆ ಕ್ರೀಡಾಸಕ್ತಿ ಬೆಳೆಸಿಕೊಂಡರೆ ಲವಲವಿಕೆಯಿಂದ ಇರಬಹುದು. ಉತ್ಸಾಹಿಗಳಾಗಿ ಚುರುಕಿನಿಂದ ಕೆಲಸಕಾರ್ಯ ಮಾಡಬಹುದು ಎಂದು ಹೇಳಿದರು.
ಜಿಲ್ಲಾ ಆಸ್ಪತ್ರೆ ಕ್ರಿಕೆಟ್ ತಂಡದ ನಾಯಕ ಸಂತೋಷ್ ಹೊಸಮನಿ, ಡಾ.ಸುರೇಶ್, ಡಾ.ಸಿದ್ಧೇಶ್, ಡಾ.ಲೋಕೇಶ್, ಮಂಜುನಾಥ್ ಹೆಚ್.ಡಿ, ಮಂಜು ಗುಡಿಮನಿ, ರಾಮು ಪೂಜಾರಿ, ಬಸವರಾಜ ದೊಡ್ಡಮನಿ, ನವೀನ್‌ಕುಮಾರ್, ಶರತ್, ಸಮೀರ್ ಶಾಹಿದ್, ರಘುನಂದನ್, ವೇದಮೂರ್ತಿ ಅವರನ್ನು ಅಭಿನಂದಿಸಿ ಶುಭ ಕೋರಿದರು.
ವಿಜೇತ ತಂಡವಾಗಿ ಪ್ರಶಸ್ತಿ ಸ್ವೀಕಾರ ಸಮಾರಂಭದಲ್ಲಿ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ರಮೇಶ್, ಜಿಲ್ಲಾ ಕಾರ್ಯಾಧ್ಯಕ್ಷ ಗೋಪಿನಾಥ್, ಜಿಲ್ಲಾ ಉಪಾಧ್ಯಕ್ಷ ಮಂಜುನಾಥ್ ಹೆಚ್.ಡಿ, ಹಿರಿಯ ಉಪಾಧ್ಯಕ್ಷರಾದ ಜಿ.ಎನ್.ರಾಧಾಷ್ಣ, ಪದ್ಮರಾಜು, ಕಾರ್ಯದರ್ಶಿಗಳಾದ ಪರಮೇಶ್, ಶಿವಶಂಕರ್, ಜಿಲ್ಲಾ ಕ್ರೀಡಾ ಕಾರ್ಯದರ್ಶಿಗಳಾದ ಹರೀಶ್, ಪ್ರವೀಣ್, ಸಹಕಾರ್ಯದರ್ಶಿ ಷಡಕ್ಷರಿ ಸೇರಿದಂತೆ ನಿರ್ದೇಶಕರು, ಪದಾಧಿಕಾರಿಗಳು ಹಾಜರಿದ್ದರು.
ವಿವಿಧ ಸ್ಪರ್ಧೆಗಳಲ್ಲಿ ಜಿಲ್ಲಾಸ್ಪತ್ರೆ ಸಿಬ್ಬಂದಿಗಳು ಭಾಗವಹಿಸಿದ್ದರು. ಟೇಬಲ್ ಟೆನ್ನೀಸ್‌ನಲ್ಲಿ ಎ.ಆರ್.ಸೌಭಾಗ್ಯ, ಕೇರಂನಲ್ಲಿ ಡಾ.ದೀಪಾಲಿ, ಶಟಲ್ ಬ್ಯಾಡ್ಮಿಂಟನ್‌ನಲ್ಲಿ ರೂಪಾದೇವಿ, ಹರ್ಡಲ್ಸ್ ಮತ್ತು ಪವರ್ ವಿಫ್ಟಿಂಗ್‌ನಲ್ಲಿ ಎಂ.ಸಿ.ಸುವರ್ಣ ಬಹುಮಾನ ಪಡೆದರು.
ಇದರ ಅಂಗವಾಗಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕಿರುನಾಟಕ ಮತ್ತು ಜಾನಪದ ನೃತ್ಯದಲ್ಲಿ ಬಿ.ಸಿ.ರಮ್ಯಾ, ಎನ್.ಎಸ್.ಗುಣವತಿ ಬಹುನಮಾನ ಗಳಿಸಿದರು.
ಡಿಹೆಚ್‌ಓ ಡಾ.ಚಂದ್ರಶೇಖರ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಅಸ್ಗರ್ ಬೇಗ್, ಜಿಲ್ಲಾ ಸಂಘದ ಉಪಾಧ್ಯಕ್ಷ, ಎನ್‌ಪಿಎಸ್ ಸಂಘದ ಜಿಲ್ಲಾಧ್ಯಕ್ಷ ಮಂಜುನಾಥ್ ಡಿ.ಹೆಚ್, ಆರ್.ಎಂ.ಓ ಡಾ.ಅಶೋಕ್, ಅಧಿಕಾರಿಗಳಾದ ಡಾ.ಮೋಹನ್‌ಕುಮಾರ್, ಡಾ.ರಾಮೇಗೌಡ ಮತ್ತಿತರರು ಹಾಜರಿದ್ದು ಸ್ಪರ್ಧಾ ವಿಜೇತರನ್ನು ಅಭಿನಂದಿಸಿದರು.
Kshetra Samachara
31/01/2026 04:54 pm