ಬಾಗಲಕೋಟೆ: ಮನೆ ಕಳ್ಳತನ ಮಾಡಿದ್ದ ಇಬ್ಬರು ಆರೋಪಿಗಳನ್ನು ಮುಧೋಳ ಪೊಲೀಸರು ಬಂಧಿಸಿದ್ದಾರೆ.
ನಗರದ ಬಸ್ ನಿಲ್ದಾಣದ ಬಳಿ ಬಸವೇಶ್ವರ ವೃತ್ತದಲ್ಲಿ ಓಡಾಡುತ್ತಿದ್ದ ಅನುಮಾನಾಸ್ಪದ ಇಬ್ಬರು ವ್ಯಕ್ತಿಗಳನ್ನು ವಿಚಾರಣೆ ನಡೆಸಿದ್ದು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾದ ಆರೋಪಿಗಳು ಎಂದು ತಿಳಿದುಬಂದಿದೆ. ಬಂಧಿತ ಆರೋಪಿಗಳು ದುರ್ಗಪ್ಪ ಫಕೀರಪ್ಪ ವಾಲ್ಮೀಕಿ ಹಾಗೂ ರಾಮಾಚಾರಿ ಈರಪ್ಪ ಗಡ್ಡಿ ಎಂದು ಗುರುತಿಸಲಾಗಿದೆ. ರಾತ್ರಿ ವೇಳೆ ಬೀಗ ಮುರಿದು ಮನೆಗಳಲ್ಲಿನ ಬಂಗಾರ, ಬೆಳ್ಳಿ ಆಭರಣಗಳನ್ನು ಕಳ್ಳತನ ಮಾಡಿರುವ ಬಗ್ಗೆ ಒಪ್ಪಿಕೊಂಡಿದ್ದಾರೆ. ಬಂಧಿತರಿಂದ 7,70,000/- ರೂ 50 ಗ್ರಾಂ ನ ವಿವಿಧ ಬಂಗಾರದ ಆಭರಣಗಳು, ಹಾಗೂ 130 ಗ್ರಾಂ ತೂಕದ ವಿವಿಧ ಬೆಳ್ಳಿಯ ಆಭರಗಳು ಸೇರಿದಂತೆ ಒಟ್ಟು ಒಟ್ಟು 8,09,000/-, ರೂ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
Kshetra Samachara
31/01/2026 10:28 pm
LOADING...