ಕೂಡ್ಲಿಗಿ: ಕೋಟೆ ಕೊತ್ತಲಗಳ ನಾಡು, ಪಾಳೇಗಾರರ ನೆಲೆಬೀಡು, ಒನಕೆ ಓಬವ್ವನ ತವರೂರು ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಹೋಬಳಿಯಲ್ಲಿ ನಡೆಯುತ್ತಿರೋ ಒನಕೆ ಓಬವ್ವ ಉತ್ಸವಕ್ಕೆ ಬಸವಲಿಂಗ ಮಹಾಸ್ವಾಮಿಗಳು, ಶಾಸಕ ಶ್ರೀನಿವಾಸ್, ಡಿಸಿ ಕವಿತಾ ಮನ್ನಿಕೇರಿ, ಎಸ್ಪಿ ಜಾಹ್ನವಿ ಮತ್ತಿತರ ಗಣ್ಯ ವ್ಯಕ್ತಿಗಳು ಡೊಳ್ಳು ಬಾರಿಸುವ ಮೂಲಕ ಅದ್ಧೂರಿ ಚಾಲನೆ ನೀಡಿದ್ರು.
ಕಳೆದ ಮೂರು ವರ್ಷಗಳಿಂದ ಗುಡೇಕೋಟೆ ಉತ್ಸವ ನಡೆಯುತ್ತಿದೆ. ಒನಕೆ ಓಬವ್ವ ಉತ್ಸವದ ಮೊದಲ ದಿನ ಖ್ಯಾತ ಗಾಯಕ ರಾಜೇಶ್ ಕೃಷ್ಣನ್ ಸೇರಿ ನೂರಾರು ಕಲಾವಿದರು ಕಲಾ ಪ್ರದರ್ಶನ ನೀಡಲಿದ್ದಾರೆ. ಇನ್ನು ಈ ಉತ್ಸವಕ್ಕೆ 10 ಸಾವಿರಕ್ಕೂ ಅಧಿಕ ಜನ ಆಗಮಿಸಿದ್ರು.
Kshetra Samachara
01/02/2026 07:02 pm
LOADING...