ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೊಸಪೇಟೆ: "ಜನ ಮರುಳೋ ಜಾತ್ರೆ ಮರುಳೋ"; ಇಡೀ ಗ್ರಾಮ ಸುತ್ತ ಮುಳ್ಳಿನ ಬೇಲಿ ಬಡಿದು ಜಾತ್ರೆ ಆಚರಣೆ!

ಹೊಸಪೇಟೆ : ಇಡೀ ಊರಿನ ಸುತ್ತ ಮುಳ್ಳಿನ ಬೇಲಿ ಬಡಿದು ಉಡುಸಲಮ್ಮ ದೇವಿಯ ವಿಶಿಷ್ಟ ಆಚರಣೆ ಮಾಡುತ್ತಿದ್ದಾರೆ. ವಿಜಯನಗರ ಜಲ್ಲೆಯ ಹೊಸಪೇಟೆ ತಾಲೂಕಿನ ಬ್ಯಾಲಕುಂದಿ ಗ್ರಾಮದಲ್ಲಿ ವಿಭಿನ್ನ ಆಚರಣೆ ಬೆಳಕಿಗೆ ಬಂದಿದೆ‌. ನೂರಾರು ವರ್ಷಗಳ ಇತಿಹಾಸ ಇರುವ ಉಡುಸಲಮ್ಮ ದೇವಿಯ ಜಾತ್ರೆ ಪ್ರಯುಕ್ತ ಈ ಆಚರಣೆ ಮಾಡಲಾಗ್ತಿದೆ.

9 ವರ್ಷಗಳಿಗೊಮ್ಮೆ ಉಡುಸಲಮ್ಮ ಜಾತ್ರೆ ನಡೆಯುತ್ತಿದೆ‌. ಇದ್ರಿಂದ ಸತತ ಒಂಬತ್ತು ದಿನಗಳ ಕಾಲ ಒಂಬತ್ತು ರೀತಿಯ ಧಾನ್ಯಗಳನ್ನಿಟ್ಟು ವಿವಿಧ ಧಾರ್ಮಿಕ ಪೂಜೆಗಳ ಕಾರ್ಯ ಮಾಡಲಾಗುತ್ತಿದೆ. ಒಂಬತ್ತು ದಿನ ಜಾತ್ರೆ ನಡೆಯುವ ವೇಳೆ ಯಾರೊಬ್ಬರೂ ಗ್ರಾಮ ಬಿಟ್ಟು ಪರ ಊರಿಗೆ ಹೋಗುವಂತಿಲ್ಲ. ಒಂದು ಸೂಜಿ ಕಡ್ಡಿ ಕೂಡಾ ಊರಿಂದ ಆಚೆ ಒಯ್ಯುವಂತಿಲ್ಲ. ಜನರ ಚಲನವಲನ ಗಮನಿಸಲು ಅಗಸಿ ಬಾಗಿಲ ಬಳಿ ಒಬ್ಬ ಕಾವಲುಗಾರನನ್ನು ನೇಮಿಸಲಾಗಿದೆ.

ಈ ರೀತಿ ಕಟ್ಟುನಿಟ್ಟಾದ ಆಚರಣೆ ಮಾಡಿದ್ರೆ ಮಳೆ-ಬೆಳೆ ಚೆನ್ನಾಗಿ ಆಗುತ್ತೆ ಅನ್ನೋ ನಂಬಿಕೆ ಇಲ್ಲಿನ ಗ್ರಾಮಸ್ಥರದ್ದಾಗಿದೆ. ಗ್ರಾಮದ ಗೌಡರು, ಗಂಗಾ ಮತಸ್ಥರು, ತಳವಾರ, ಪೂಜಾರು ಸೇರಿದಂತೆ ದಲಿತರು ಹಬ್ಬ ಆಚರಣೆ ಮಾಡ್ತಿದ್ದಾರೆ.

ಒಟ್ಟಿನಲ್ಲಿ ಆಧುನಿಕತೆಯ ಭರಾಟೆ ಒಂದು ಕಡೆಗೆ ಜೋರಾಗಿ ಸಾಗ್ತಿದ್ರೆ, ಇತ್ತ ಬ್ಯಾಲಕುಂದಿ ಅನ್ನೋ ಗ್ರಾಮದಲ್ಲಿ ಜನ ಮರುಳೋ, ಜಾತ್ರೆ ಮರುಳೋ ಅನ್ನೋ ಹಾಗೆ ಈ ರೀತಿಯ ವಿಚಿತ್ರ ಆಚರಣೆ ನಡೆಯುತ್ತಿರೋದು ತೀವ್ರ ಚರ್ಚೆಗೆ ಗ್ರಾಸ ಆಗಿದೆ‌.

Edited By :
Kshetra Samachara

Kshetra Samachara

29/01/2026 01:10 pm

Cinque Terre

2.36 K

Cinque Terre

0

ಸಂಬಂಧಿತ ಸುದ್ದಿ