ಹಗರಿಬೊಮ್ಮನಹಳ್ಳಿ : ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕು ದಶಮಾಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ನಾಣ್ಯಾಪುರ ಗ್ರಾಮ, ಕೋಳಿ ಸಾಕಾಣಿಕೆ ನಿಷಿದ್ಧ. ಕರ್ನಾಟಕದಲ್ಲೇ ಕೋಳಿ ಕೂಗದ ಗ್ರಾಮವೆಂದೇ ಪ್ರತೀತಿಯಲ್ಲಿದೆ. ಈ ಗ್ರಾಮ ಬಹು ವೈಶಿಷ್ಟ್ಯತೆ ಗಳನ್ನು ತನ್ನೊಡಲಲ್ಲಿ ಹುದುಗಿಸಿಕೊಂಡಿದೆ ಈ ಗ್ರಾಮ, ಪ್ರಮುಖ ಮೂರು ಕೋಮಿನವರು ವಾಸವಿರುವ ಗ್ರಾಮದಲ್ಲಿ, ಪರಸ್ಪರ ಅನ್ಯೋನ್ಯತೆ ಸಹಬಾಳ್ವೆಯಿಂದ ಸೌಹಾರ್ದತೆ ವಾತಾವರಣ ಮನೆಮಾಡಿದೆ.
ಶ್ರೀಜಗಲೂರಪ್ಪಸ್ವಾಮಿ ಈ ಗ್ರಾಮದ ಆರಾಧ್ಯ ದೈವವಾಗಿದೆ. ಭರತ (ಹೊಸ್ತಿಲ) ಹುಣ್ಣಿಮೆ ಹಾಗೂ ದೀಪಾವಳಿಯಂದು ಪ್ರತಿ ವರ್ಷದ ಈ ಎರಡು ಸಂದರ್ಭದಲ್ಲಿ ಜಗಲೂರಪ್ಪ ಹಬ್ಬ ಆಚರಣೆ ಆಚರಿಸಲಾಗುತ್ತದೆ. ಈ ಹಬ್ಬ ದೇವರ ಎತ್ತುಗಳ ಮೆರೆಸುವ ವಿಶಿಷ್ಟವಾದ ಹಾಗೂ ಸಾಂಪ್ರದಾಯಿಕ ಧಾರ್ಮಿಕ ಆಚರಣೆಯಾಗಿದೆ. ಮ್ಯಾಸ ಬೇಡರ ಮೂಲ ಪುರುಷ ಪಾಪನಾಯಕ ಸ್ಮರಣಾರ್ಥ ಗದ್ದುಗೆ ನಿರ್ಮಿಸಿ ಆರಾಧಿಸಲಾಗುತ್ತದೆ. ಪಾಪನಾಯಕರ ಎತ್ತುಗಳಾದ ಕಿಲಾರಿ ಎತ್ತುಗಳನ್ನು ಸಂಪೋಷಿಸಿ ಸಂರಕ್ಷಿಸಿ ಅವುಗಳನ್ನು ಮೆರೆಸುವ ಜಾನಪದೀಯ ಹಬ್ಬವಾಗಿದೆ. ತನು ಮನ ಶುದ್ಧತೆಯಿಂದ ಆರಾಧಿಸಿದರೆ ಜಗಲೂರಪ್ಪ ತನು ಮನ ಶುದ್ಧತೆಗೆ ಪ್ರಸನ್ನನಾಗುತ್ತಾನೆಂದು ನಾಣ್ಯಾಪುರ ಗ್ರಾಮದ ಭಕ್ತರ ಅಭಿಪ್ರಾಯವಾಗಿದೆ. “ನಡೆದುಕೊ ಪಡೆದುಕೋ” - ಅಂದರೆ ಶ್ರದ್ಧಾ ಭಕ್ತಿಯ ಆಧಾರದ ಮೇಲೆ ಮೇಲೆ ಜಗಲೂರಪ್ಪದೇವರ ಒಲುಮೆ ಸಾಧ್ಯ ಎನ್ನುತ್ತಾರೆ ಗ್ರಾಮದ ಹಿರಿಯರು.
ಆದಿವಾಸಿ ಮ್ಯಾಸ ಬೇಡರ ಕುಲದ ಮೂಲ ಪುರುಷರಾದ , ಪಾಪನಾಯಕರ ಸ್ಮರಣಾರ್ಥವಾಗಿ , ಕಿಲಾರಿ ಎತ್ತುಗಳನ್ನು ಮೆರೆಸುವ ಆಚರಣೆ ಜಾರಿ ತರುವ ನಿಟ್ಟಿನಲ್ಲಿ. ಜಗಲೂರಪ್ಪ ಹಬ್ಬವನ್ನು ಆಚರಿಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ನಾಣ್ಯಾಪುರ ಗ್ರಾಮದಲ್ಲಿ ಜಗಲೂರಪ್ಪ ಹಬ್ಬವನ್ನು
ಹತ್ತು ಹಲವು ತಲೆಮಾರಿನ ಹಿಂದೆ, ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ, ಮ್ಯಾಸಬೇಡರ ಹಟ್ಟಿಯಿಂದ ವಲಸೆ ಬಂದ ಮ್ಯಾಸಬೇಡ ಸಮುದಾಯದ ಕೆಲ ಕುಟುಂಬಗಳು ನಾಣ್ಯಾಪುರದಲ್ಲಿ ನೆಲೆನಿಂತಾಗಿನಿಂದ ಅವರು ತಮ್ಮ ಆದಿನಾಯಕ ಮೂಲ ಪುರುಷ ಪಾಪನಾಯಕರ. ಮೂಲ ಗದ್ದಿಗೆಯಿಂದ ತರಲಾದ ಕೆಲ ಧಾರ್ಮಿಕ ಪರಿಕರಗಳಿಂದ ಗದ್ದಿಗೆ ನಿರ್ಮಿಸಿ ಅದನ್ನು ಆರಾಧಿಸುವ ಧಾರ್ಮಿಕ ಸಾಂಪ್ರದಾಯಿಕ ಪರಿಪಾಠ ಅಳವಡಿಸಿಕೊಂಡಿದ್ದಾರೆ. ಆ ಗದ್ದಿಗೆಯನ್ನು ಜಗಲೂರಿನಿಂದ ತಂದಿರುವ ಕಾರಣಕ್ಕೆ ಆ ಗದ್ದಿಗೆಯನ್ನು ಜಗಲೂರಪ್ಪ ದೇವರೆಂದು ಕರೆಯಲಾಗುತ್ತದೆ.
ಶ್ರೀ ಜಗಲೂರಪ್ಪಸ್ವಾಮಿ ನಿರಾಕಾರ ಎತ್ತುಗಳೇ ದೈವ, ಅನಾದಿಕಾಲದಿಂದ ಆರಾಧಿಸುತ್ತಲಿರುವ ದೇವರು. ಗದ್ದಿಗೆಯನ್ನೇ ಪೂಜಿಸಿ ಆರಾಧಿಸುತ್ತಲಿದ್ದು , ಜಗಲೂರಪ್ಪ ಗದ್ದಿಗೆ ವಿಸ್ಮಯಗಳ ಪವಾಡಗಳಿಂದ ಹೆಸರಾಗಿದೆ. ಗ್ರಾಮದಲ್ಲಿ ಕೋಳಿ ಕೂಗುವಂತಿಲ್ಲ ಇಲ್ಲಿ ಅಲಿಖಿತ ನಿಯಮ ಜಾರಿಯಲ್ಲಿದೆ. ಶ್ರೀಜಗಲೂರಪ್ಪಗೆ ಸೋಮವಾರ ಗುರುವಾರದಂದು ಶ್ರೇಷ್ಠ ಎಂಬ ಪ್ರತೀತಿಯಲ್ಲಿದೆ.
PublicNext
02/02/2026 07:16 pm