ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಜಯನಗರ : 13 ವರ್ಷಗಳ ನಂತರ ನಡೆದ ಗಲ್ಲಿ ದುರುಗಮ್ಮ ಜಾತ್ರೋತ್ಸವ

ಹರಪನಹಳ್ಳಿ : ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನ ಅರಸೀಕೆರೆ ಹೋಬಳಿಯ ಚಿಕ್ಕ ಕಬ್ಬಳ್ಳಿ ಗ್ರಾಮದಲ್ಲಿ 13 ವರ್ಷಗಳ ನಂತರ ನಡೆದ ಗಲ್ಲಿ ದುರುಗಮ್ಮ ಜಾತ್ರೋತ್ಸವ ಬುಧವಾರ ಸಂಪನ್ನಗೊಂಡಿತು.

ಮೂರು ದಿನಗಳ ಕಾಲ ನಡೆದ ಜಾತ್ರೆಯಲ್ಲಿ ಮಂಗಳವಾರ ಗ್ರಾಮಸ್ಥರ ಸಮ್ಮುಖದಲ್ಲಿ ದೇವಿಯ ಹೊಳೆ ಪೂಜೆ ನಡೆಯಿತು. ದೇವಿಗೆ ವಿವಿಧ ಬಗೆಯ ಹೂಗಳಿಂದ ಅಲಂಕಾರ ಮಾಡಿ, ವಿಶೇಷ ಪೂಜಾ ಕೈಂಕರ್ಯ ಕೈಗೊಳ್ಳಲಾಯಿತು.

ದೇವರ ಕೇರಿ ಹಾಗೂ ದುರುಗಮ್ಮ ದೇವಿಯ ಉತ್ಸವ ಮೂರ್ತಿ ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಿ ಸಕಲ ಮಂಗಳ ವಾದ್ಯಗಳೊಂದಿಗೆ ದೇವಿಯ ದೇವಸ್ಥಾನ ಸುತ್ತ ಮೆರವಣಿಗೆ ನಡೆಸಲಾಯಿತು.

ಚಿಕ್ಕ ಕಬ್ಬಳ್ಳಿ ಸೇರಿ ಸುತ್ತ ಮುತ್ತಲಿನ ಭಾಗಿಯಾದ ಭಕ್ತರು ‘ಗಲ್ಲಿ ದುರುಗಮ್ಮ ದೇವಿಯೇ ನಿನ್ನ ಪಾದಕೆ ನಮೋಸ್ತುತೇ' ಎಂದು ಕೂಗುತ್ತಾ ಇಷ್ಟಾರ್ಥ ಈಡೇರಿಸುವಂತೆ ಬೇಡಿಕೊಂಡರು. ದೇವಿಗೆ ವಿಶೇಷ ಪೂಜೆ ಮಾಡುವುದರ ಮೂಲಕ ಭಕ್ತಿಯನ್ನು ಅರ್ಪಿಸಿದರು.

ಈ ಸಂದರ್ಭದಲ್ಲಿ ಅರಸೀಕೆರೆ ಪೂಜಾರ್ ಮರಿಯಪ್ಪ, ಕಬ್ಬಳ್ಳಿ ಪರಸಪ್ಪ, ಲಕ್ಷ್ಮಣ್ಣ, ರಾಮಪ್ಪ, ಸುಭಾಸಪ್ಪ, ಬಿರಂಜಿ ರಮೇಶ್, ಚಂದ್ರು ಗೌಡ್ರು, ಮಾದಿಹಳ್ಳಿ ಹನುಮಂತಪ್ಪ, ಮೈಲಪ್ಪ, ರಂಗಪ್ಪ, ಗ್ರಾ.ಪಂ.ಸದಸ್ಯ ಶ್ರೀನಿವಾಸ್, ಮಂಜಪ್ಪ, ಮಾಳ್ಗಿ ಮೈಲಪ್ಪ, ನಿಂಗಪ್ಪ, ಪೂಜಾರ್ ಮಹಾಂತೇಶ್, ಪರಸಪ್ಪ, ಸೇರಿದಂತೆ ಗ್ರಾಮಸ್ಥರು ಇದ್ದರು.

Edited By : Abhishek Kamoji
Kshetra Samachara

Kshetra Samachara

28/01/2026 10:21 pm

Cinque Terre

2.38 K

Cinque Terre

0

ಸಂಬಂಧಿತ ಸುದ್ದಿ