ಹಗರಿಬೊಮ್ಮನಹಳ್ಳಿ : ಚಿನ್ನದ ದರ ಇಳಿಕೆಯಾಗಲಿ ಅಂತ ವಿಭಿನ್ನ ಹರಕೆ ಭಕ್ತನೋರ್ವ ಹರಕೆ ಹೊತ್ತಿದ್ದಾನೆ. ಚಿನ್ನದ ದರ ಇಳಿಯಲಿ, ಮುನಿದ ಚಿನ್ನ ಒಲಿಯಲಿ ಎಂದು ಬಾಳೆ ಹಣ್ಣಿನ ಮೇಲೆ ಬರೆದು ರಥಕ್ಕೆ ಎಸೆದು ಹರಕೆ ಹೊತ್ತಿದ್ದಾನೆ. ಈ ದೃಶ್ಯ ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಚಿಮ್ನಳ್ಳಿ ದುರ್ಗಮ್ಮ ದೇವಿಯ ಜಾತ್ರಾ ಮಹೋತ್ಸವ ಬೆಳಕಿಗೆ ಬಂದಿದೆ. ನಾಗರಾಜ ಉಲವತ್ತಿ ಎಂಬ ಭಕ್ತನೇ ಚಿನ್ನದ ದರ ಕಡಿಮೆ ಆಗಲಿ ಅಂತ ಹರಕೆ ಹೊತ್ತ ಭಕ್ತ ಅಂತ ಗುರುತಿಸಲಾಗಿದೆ.
ದೇಶದ ಸರ್ವ ಸಾಮಾನ್ಯರ ಬಹುದೊಡ್ಡ ಬೇಡಿಕೆಯಾದ ಚಿನ್ನದ ಬೆಲೆ ಕಡಿಮೆಯಾಗಲಿ ಎಂಬ ಬಯಕೆ ಈ ಭಕ್ತನದ್ದಾಗಿದೆ. ಹೀಗಾಗಿ ದರ ಯಾವಾಗ ಕಡಿಮೆಯಾಗುತ್ತೋ ಅಂತ "ಚಿನ್ನದ ದರ ಇಳಿಯಲಿ ಮುನಿದ ಚಿನ್ನ ಒಲಿಯಲಿ" ಎಂದು ಬಾಳೆಹಣ್ಣಿನ ಮೇಲೆ ಬರೆದು ತಾಯಿಯ ರಥೋತ್ಸವಕ್ಕೆ ಭಕ್ತಿ ಪೂರ್ವಕವಾಗಿ ಎಸೆದು ಬೇಡಿಕೊಂಡಿದ್ದಾನೆ. ಬಂಗಾರ ದರ ಕಡಿಮೆ ಆಗಲಿ ಅಂತ ಬಾಳೆ ಹಣ್ಣಿನ ಮೇಲೆ ಎಸೆದು ವಿಡಿಯೋ ವೈರಲ್ ಆಗ್ತಿದೆ.
PublicNext
29/01/2026 05:51 pm
LOADING...