ಹೊಸಪೇಟೆ : ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನಲ್ಲಿ ಹಿಂದೂ ಸಮ್ಮೇಳನದ ನಿಮಿತ್ತ ಅದ್ದೂರಿ ರ‍್ಯಾಲಿ ನಡೆಯಿತು. ಹೊಸಪೇಟೆಯ ರಾಣಿಪೇಟೆ ಏರಿಯಾದಿಂದ ಶುರು ಆದ ರ‍್ಯಾಲಿ ನಗರದ ಪ್ರಮುಖ ವೃತ್ತಗಳಲ್ಲಿ ಸಾಗಿ ಬಳಿಕ ವೆಂಕಟೇಶ್ವರ ಕಲ್ಯಾಣ ಮಂಟಪದವರೆಗೆ ಸಾಗಿತು.
ಬಳಿಕ ಅಂಬೇಡ್ಕರ್ ಮೂರ್ತಿಗೆ ಮಾಲಾರ್ಪಣೆ ಮಾಡಲಾಯಿತು. ಹಿಂದೂ ಸಮ್ಮೇಳನ ಮೆರವಣಿಗೆಯಲ್ಲಿ ಕುಂಭ ಹೊತ್ತು, ಡೊಳ್ಳು, ವಾದ್ಯ ಮೇಳಗಳೊಂದಿಗೆ ಮೆರವಣಿಗೆ ನಡೆಯಿತು. ಅದ್ರಲ್ಲೂ 30ಕ್ಕೂ ಅಧಿಕ ಮಕ್ಕಳು ಆಂಜನೇಯನ ವೇಶ ಆಕರ್ಷಕ ಧರಿಸಿ ಜೈ ಶ್ರೀರಾಮ್.. ಘೋಷಣೆ ಕೂಗುತ್ತಾ ಸಾಗಿದ್ರು.
PublicNext
30/01/2026 07:21 am
LOADING...