ಉಡುಪಿ: ಶ್ರೀ ಕೃಷ್ಣಮಠದೊಳಗೆ ಉಗ್ರ ವರ್ತನೆಯಿಂದ ಭಯದ ವಾತಾವರಣ ಸೃಷ್ಟಿಸಿದ ಯುವಕನನ್ನು ಸಮಾಜಸೇವಕ ನಿತ್ಯಾನಂದ ಒಳಕಾಡು ವಶಕ್ಕೆ ಪಡೆದು ದೊಡ್ಡಣಗುಡ್ಡೆಯ ಡಾ ಎ ವಿ ಬಾಳಿಗ ಆಸ್ಪತ್ರೆಗೆ ದಾಖಲಿಸಿರುವ ಘಟನೆ ನಡೆದಿದೆ.
ಮಾನಸಿಕ ಅಸ್ವಸ್ಥ ಸ್ಥಿತಿಯಲ್ಲಿದ್ದ ಯುವಕನ ವರ್ತನೆಯಿಂದ ಯಾತ್ರಾರ್ಥಿಗಳು ಭೀತಿಗೊಳಗಾಗಿದ್ದರು. ಮಠದ ರಕ್ಷಣಾ ಸಿಬ್ಬಂದಿಯ ವಿನಂತಿಗೆ ಸ್ಪಂದಿಸಿದ ಒಳಕಾಡು ನೆರವಿಗೆ ಬಂದಿದ್ದು, ಆಂಬುಲೆನ್ಸ್ ವಾಹನದಲ್ಲಿ ಯುವಕನನ್ನು ಆಸ್ಪತ್ರೆಗೆ ಸಾಗಿಸಿದರು.ಯುವಕ ಸಾಗಿಸುವಾಗಲೂ ಆಂಬುಲೆನ್ಸ್ ವಾಹನದಲ್ಲಿ ರಂಪಾಟ ಮುಂದುವರಿಸಿದ್ದಾನೆ. ಹಲ್ಲೆಯ ಯತ್ನಕ್ಕೆ ಮುಂದಾದಾಗ ತಕ್ಷಣ ನಡುರಸ್ತೆಯಲ್ಲಿ ವಾಹನ ನಿಲ್ಲಿಸಿ ಸಾರ್ವಜನಿಕರ ಸಹಕಾರದಿಂದ ಯುವಕನ ಕೈ ಕಾಲುಗಳನ್ನು ಹಗ್ಗದಿಂದ ಭದ್ರಗೊಳಿಸಿ ಆಸ್ಪತ್ರೆಗೆ ಸಾಗಿಸಲಾಯಿತು. ಯುವಕ ಬೆಣ್ಮಣ್ ಮೂಲದವನೆಂದು ತಿಳಿದುಬಂದಿದ್ದು, ಸಂಬಂಧಿಕರಿಗೆ ಆಸ್ಪತ್ರೆಯನ್ನು ಸಂಪರ್ಕಿಸುವಂತೆ ಮಾಹಿತಿ ನೀಡಲಾಗಿದೆ.
PublicNext
02/02/2026 12:02 pm
LOADING...