ಯಲ್ಲಾಪುರ: ಈ ಬಾರಿ ಮಂಡನೆಯಾದ ಕೇಂದ್ರ ಬಜೆಟ್ ಅಸ್ಪಷ್ಟತೆಯಿಂದ ಸ್ಪಷ್ಟತೆ ಎಡೆಗೆ, ಆಡಂಬರದಿಂದ ಸುಧಾರಣೆ ಕಡೆಗೆ ಮತ್ತು ಜನಪ್ರಿಯತೆಗಿಂತ ಜನಹಿತ ಮುಖ್ಯ ಎನ್ನುವ ಸಂದೇಶ ನೀಡಿದೆ. ಈ ಬಜೆಟ್ ನಲ್ಲಿ ಆರ್ಥಿಕ ಶಿಸ್ತು ಕಾಪಾಡುವುದಕ್ಕೆ ಪ್ರಥಮ ಆದ್ಯತೆ ನೀಡಲಾಗಿದೆ ಎಂದು ಬಿಜೆಪಿ ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ ಹೇಳಿದರು.
ಅವರು ಸೋಮವಾರ ಯಲ್ಲಾಪುರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅಮೆರಿಕಾ,ಚೀನಾ ದೇಶಗಳು ಭಾರತದ ವಿರುದ್ಧ ಸಾರಿರುವ ಸುಂಕ, ವಾಣಿಜ್ಯ ಸಮರಕ್ಕೆ ಕೇಂದ್ರ ಬಜೆಟ್ ತಕ್ಕ ಪ್ರತ್ಯುತ್ತರ ನೀಡಿದೆ. ಬಜೆಟ್ ನಲ್ಲಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಪ್ರೋತ್ಸಾಹ ನೀಡಲಾಗಿದೆ. ಸೆಮಿಕಂಡಕ್ಟರ್,ಎಲೆಕ್ಟ್ರಾನಿಕ್ ವಸ್ತುಗಳು, ಔಷಧ ಆಮದು ಕಡಿಮೆಮಾಡಿ, ರಪ್ತು ಹೆಚ್ಚಳಕ್ಕೆ ಪ್ರೋತ್ಸಾಹ, ಆದ್ಯತೆ ನೀಡಿರುವುದು ಅಮೆರಿಕಾ ಮತ್ತು ಚೀನಾಕ್ಕೆ ಭಾರತ ನೀಡಿರುವ ತಕ್ಕ ಉತ್ತರ ಎಂದು ಪರಿಣಿತರು ತಿಳಿಸಿದ್ದಾರೆ.
ಪ್ರಚಾರ, ಅಗ್ಗದ ಜನಪ್ರಿಯತೆಗೆ ಜೋತುಬೀಳದೇ ಹಣಕಾಸು ಕೊರತೆಯನ್ನು ಶೇ.4.4ಕ್ಕೆ ತಂದಿರುವುದು ಇದಕ್ಕೆ ಶಕ್ಷಿಯಾಗಿದೆ. ಮೂಲ ಸೌಕರ್ಯ ವೃದ್ಧಿಗೆ ಶೇ.100 ಅನುದಾನ ಹೆಚ್ಚಳ ಮಾಡಲಾಗಿದೆ. ರೈತರ ಆದಾಯ ದ್ವಿಗುಣ ಮಾಡುವ ಪ್ರಧಾನಿ ಮೋದಿಯವರ ಸಂಕಲ್ಪಕ್ಕೆ ಬಜೆಟ್ ನಲ್ಲಿ ಆದ್ಯತೆ ನೀಡಲಾಗಿದೆ. ಮಹಿಳಾ ಉದ್ಯಮ ಮತ್ತು ಉದ್ಯೋಗ ಸ್ಥಾಪನೆಗೆ ಶಿ-ಮಾರ್ಟ್ ಮೂಲಕ ಉದ್ಯೋಗ ಹೆಚ್ಚಳಕ್ಕೆ ಯೋಜನೆ ರೂಪಿಸಲಾಗಿದೆ. ಜಿಲ್ಲೆಗೊಂದು ಬಾಲಕಿಯರ ಹಾಸ್ಟೆಲ್ ಸ್ಥಾಪನೆ ಮಹಿಳಾ ಶಿಕ್ಷಣಕ್ಕೆ ಅನುಕೂಲಕಾರಿಯಾಗಿದೆ. ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಅನುದಾನ ನೀಡಲಾಗಿದೆ ಎಂದ ಅವರು, ವಿಶೇಷವಾಗಿ ಕರ್ನಾಟಕಕ್ಕೆ ಎರಡು ಹೈಸ್ಪೀಡ್ ರೈಲು ಲಭ್ಯವಾಗಿದೆ. ಕರ್ನಾಟಕಕ್ಕೆ 16 ನೇ ಹಣಕಾಸು ಆಯೋಗದ ಶಿಫಾರಸಿನಂತೆ ಶೇ.4.4 ಹೆಚ್ಚುವರಿ ತೆರಿಗೆ ಪಾಲು ನೀಡುವ ವಾಗ್ದಾನ ಮಾಡಲಾಗಿದೆ ಎಂದರು.
ಫೆ.8 ರಂದು ಯಲ್ಲಾಪುರ ಪಟ್ಟಣದ ಅಡಿಕೆ ಭವನದಲ್ಲಿ ಜಿ-ರಾಮ-ಜಿ ಸಮಾವೇಶ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಗೋಪಾಲಕೃಷ್ಣ ಗಾಂವ್ಕಾರ್, ರಾಘವೇಂದ್ರ ಭಟ್ಟ ಹಾಸಣಗಿ, ಗಣೇಶ ಹೆಗಡೆ ಕುಂದರಗಿ, ಕೆ.ಟಿ.ಹೆಗಡೆ ಮುಂತಾದವರು ಇದ್ದರು.
Kshetra Samachara
02/02/2026 02:05 pm