ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಬ್ಲಾಕ್ ಸ್ಪಾಟ್ ಮುಕ್ತ ಗುರಿಯೊಂದಿಗೆ ಸ್ವಚ್ಛ ಸರ್ವೇಕ್ಷಣೆಯಲ್ಲಿ ಉತ್ತಮ ರ‍್ಯಾಂಕಿಂಗ್ ಪಡೆಯಲು ಶ್ರಮಿಸಿ - ಲೋಖಂಡೆ ಸ್ನೇಹಲ್ ಸುಧಾಕರ್

ಬೆಂಗಳೂರು: ಬೆಂಗಳೂರು ಪೂರ್ವ ನಗರ ಪಾಲಿಕೆಯ ಅಪರ ಆಯುಕ್ತರು (ಅಭಿವೃದ್ಧಿ) ಲೋಖಂಡೆ ಸ್ನೇಹಲ್ ಸುಧಾಕರ್ ಅವರ ಅಧ್ಯಕ್ಷತೆಯಲ್ಲಿ ಘನ ತ್ಯಾಜ್ಯ ನಿರ್ವಹಣೆ ಕುರಿತು ಪ್ರಗತಿ ಪರಿಶೀಲನಾ ಸಭೆಯನ್ನು ನಡೆಸಲಾಯಿತು. ಸಭೆಯಲ್ಲಿ ಬ್ಲಾಕ್ ಸ್ಪಾಟ್ ನಿವಾರಣೆ, ಕಸ ಸಂಗ್ರಹಣೆ–ವರ್ಗಾವಣೆ ವ್ಯವಸ್ಥೆ, ಸ್ವಚ್ಛತಾ ಸಿಬ್ಬಂದಿಗಳ ಕಲ್ಯಾಣ ಮತ್ತು ಸ್ವಚ್ಛ ಸರ್ವೇಕ್ಷಣದಲ್ಲಿ ಉತ್ತಮ ಸ್ಥಾನ ಗಳಿಸುವ ಕುರಿತು ವಿಸ್ತೃತವಾಗಿ ಚರ್ಚಿಸಲಾಯಿತು.

ಮುಂದಿನ 15 ದಿನಗಳೊಳಗಾಗಿ ಮಹದೇವಪುರ ವಲಯದಲ್ಲಿ ಕನಿಷ್ಠ 10 ಕಡೆಗಳು ಮತ್ತು ಕೆ.ಆರ್.ಪುರ ವಲಯದಲ್ಲಿ ಕನಿಷ್ಠ 20 ಕಡೆಗಳಲ್ಲಿ ಗುರುತಿಸಲಾದ ಬ್ಲಾಕ್ ಸ್ಪಾಟ್ ಗಳನ್ನು ಸಂಪೂರ್ಣವಾಗಿ ನಿವಾರಣೆ ಮಾಡಲು ಸೂಚಿಸಲಾಯಿತು. ಬ್ಲಾಕ್ ಸ್ಪಾಟ್ ಪ್ರದೇಶಗಳಲ್ಲಿ ರಂಗೋಲಿ ಚಿತ್ರಣ, ಗ್ರೀನ್ ನೆಟ್ ಬಳಸಿ ಸೌಂದರೀಕರಣ ಮಾಡುವಂತೆ ಹಾಗೂ ಸಾಹಸ್ ಎನ್. ಜಿ.ಓ ಸಹಯೋಗ ಪಡೆದುಕೊಳ್ಳಲು ಸೂಚಿಸಲಾಯಿತು.

ಡಿಸೆಂಬರ್ ತಿಂಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಕಿರಿಯ ಆರೋಗ್ಯ ಪರಿವೀಕ್ಷಕರು ಹಾಗೂ ಮಾರ್ಷಲ್‌ಗಳಿಗೆ ಪ್ರಶಂಸನಾ ಪತ್ರಗಳನ್ನು ನೀಡಿದರು.

ಸಭೆಯಲ್ಲಿ ಅಧೀಕ್ಷಕ ಅಭಿಯಂತರರು, ಉಪ ಪ್ರಧಾನ ವ್ಯವಸ್ಥಾಪಕರು, ಸಹಾಯಕ ಪ್ರಧಾನ ವ್ಯವಸ್ಥಾಪಕರು, ಮಾರ್ಷಲ್ ಸೂಪರ್ ವೈಸರ್‌ಗಳು, ವಾರ್ಡ್ ಮಾರ್ಷಲ್ ಗಳು, ಕಿರಿಯ ಆರೋಗ್ಯ ಪರಿವೀಕ್ಷಕರು ಮತ್ತು ಇತರ ಸಿಬ್ಬಂದಿ ಭಾಗವಹಿಸಿದ್ದರು.

Edited By : Nagaraj Tulugeri
Kshetra Samachara

Kshetra Samachara

02/02/2026 08:24 pm

Cinque Terre

264

Cinque Terre

0

ಸಂಬಂಧಿತ ಸುದ್ದಿ