ಬೆಂಗಳೂರು:ಯಲಹಂಕ ರೈತರ ಸಂತೆಯಿಂದ ಜಕ್ಕೂರು ರೈಲ್ವೆ ಓವರ್ ಬ್ರಿಡ್ಜ್ ವರೆಗೆ ವೈಟ್ ಟಾಪಿಂಗ್, ಸುರಕ್ಷಿತ ಫುಟ್ ಪಾತ್ ಮಾರ್ಗ, ಟಿ.ಡಿ.ಆರ್, ಪಾರ್ಕಿಂಗ್ ವ್ಯವಸ್ಥೆಗಳ ಕುರಿತು ಇಂದು ಯಲಹಂಕ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಸ್.ಆರ್.ವಿಶ್ವನಾಥ್ ಮತ್ತು ಬೆಂಗಳೂರು ಉತ್ತರ ನಗರ ಪಾಲಿಕೆಯ ಆಯುಕ್ತರಾದ ಪೊಮ್ಮಲ ಸುನೀಲ್ ಕುಮಾರ್ ರವರು ಜಂಟಿಯಾಗಿ ಪರಿಶೀಲನೆ ನಡೆಸಿದರು.
ವೈಟ್ ಟಾಪಿಂಗ್ ಕಾಮಗಾರಿಯ ಗುಣಮಟ್ಟ ಕಾಪಾಡಿಕೊಂಡು ಅತಿ ಶೀಘ್ರದಲ್ಲೇ ಮಾರ್ಚ್ ತಿಂಗಳ ಅಂತ್ಯದೊಳಗೆ ಕಾಮಗಾರಿಯನ್ನು ಪೂರ್ಣಗೊಳಿಸಲು ಸೂಚನೆ ನೀಡಿದರು.
ಸುರಕ್ಷಿತವಾಗಿ ಸಾರ್ವಜನಿಕರ ಓಡಾಟಕ್ಕೆ ಅನುವು ಮಾಡುವ ಉದ್ದೇಶದಿಂದ ಪಾದಚಾರಿ ಮಾರ್ಗಗಳ ಪರಿಶೀಲನೆ ನಡೆಸಲಾಗಿ, ಪಾದಚಾರಿ ಮಾರ್ಗಗಳನ್ನು ಸಮತಟ್ಟಾಗಿ ಒಂದೇ ರೀತಿಯಲ್ಲಿ ನಿರ್ವಹಣೆ ಮಾಡಲು ಸೂಚಿಸಿದರು.
ರಸ್ತೆ ಅಗಲೀಕರಣಕ್ಕೆ ಇರುವ ಸಮಸ್ಯೆಗಳನ್ನು ಪರಿಹರಿಸಿಕೊಂಡು, ಪರಿತ್ಯಾಗ ಪತ್ರ ನೀಡಿರುವ ಜಾಗವನ್ನು ನಗರ ಪಾಲಿಕೆ ವಶಕ್ಕೆ ಪಡೆದು, ರಸ್ತೆ ಅಗಲೀಕರಣಕ್ಕೆ ತ್ವರಿತವಾಗಿ ಕ್ರಮ ವಹಿಸಲು ಸೂಚನೆ ನೀಡಲಾಯಿತು.
ರಸ್ತೆಯು ಅಗಲವಿದ್ದ ಕಡೆ ಅದರ ಅಕ್ಕ ಪಕ್ಕದಲ್ಲಿ ವಾಹನಗಳ ಪಾರ್ಕಿಂಗ್ ಗೆ ಸೂಕ್ತ ವ್ಯವಸ್ಥೆಯನ್ನು ಮಾಡಬೇಕು. ಒಟ್ಟಾರೆ ಕಾಮಗಾರಿಯನ್ನು ಮಾರ್ಚ್ ಅಂತ್ಯದ ವೇಳೆಗೆ ಪೂರ್ಣಗೊಳಿಸಬೇಕು ಎಂದು ಶಾಸಕರು ಹಾಗೂ ಆಯುಕ್ತರು ಸಂಬಂಧಪಟ್ಟ ಬಿ- ಸ್ಮೈಲ್ ಅಧಿಕಾರಿಗಳಿಗೆ ನಿರ್ದೇಶಿಸಿದರು.
ಪರಿಶೀಲನೆಯ ಸಂದರ್ಭದಲ್ಲಿ ಜಂಟಿ ಆಯುಕ್ತರಾದ ಶ್ರೀಮತಿ ಪಲ್ಲವಿ ಸೇರಿದಂತೆ ಸಂಬಂಧಿಸಿದ ನಗರ ಪಾಲಿಕೆ ಹಾಗೂ ಬಿ- ಸ್ಮೈಲ್ ಅಭಿಯಂತರರು ಹಾಜರಿದ್ದರು.
PublicNext
03/02/2026 10:28 pm
LOADING...