ಬೆಂಗಳೂರು : ಈ ಹಿಂದೆ ಇದೇ ಕುಮಾರಸ್ವಾಮಿಯವರು ಸಿಎಂ ಆಗಿದ್ದಾಗ ‘ಗ್ರಾಮೀಣಾಭಿವೃದ್ಧಿಗೆ ಮನರೇಗಾ ಸಂಜೀವಿನಿ ’ ಅಂತಾ ಹಾಡಿ ಹೊಗಳಿದ್ರು!! ಆದರೆ, ಅಂದು ಬೆಂಬಲಿಸಿದವರು ಇಂದು ಬಿಜೆಪಿಯವರೊಂದಿಗೆ ಹೊಂದಾಣಿಕೆ ಮಾಡಿಕೊಂಡು ವಿರೋಧಿಸುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಅವರು ಸದನದಲ್ಲಿ ಜೆಡಿಎಸ್ ಸೇರಿದಂತೆ ಬಿಜೆಪಿಯವರಿಗೂ ಚಾಟಿ ಬೀಸಿದರು. ಇನ್ನು ಸಿಎಂ ಅವರ ಉತ್ತರದ ಸಾರಾಂಶ ಈ ಕೆಳಗಿನಂತಿದೆ.
* ಜನವರಿ 22 ರಂದು ರಾಜ್ಯಪಾಲರ ಭಾಷಣ ಮಾಡಿದರು. ನಂತರ ಜನವರಿ 23 ರಂದು ರಾಜ್ಯದ ಪ್ರಮುಖ ಪತ್ರಿಕೆಗಳಲ್ಲಿ ರಾಜ್ಯಪಾಲರ ಭಾಷಣದ ಓದದೇ ಇರಲು ಸಂವಿಧಾನದಲ್ಲಿ ಆಯ್ಕೆಯಿಲ್ಲ. ರಾಜ್ಯಪಾಲರ ನಡವಳಿಕೆ ಅವರ ಘನತೆಗೆ ತಕ್ಕುದಾದುದಲ್ಲ. ಅಧಿವೇಶನ ಐತಿಹಾಸಿಕ ಕಳಂಕಕ್ಕೆ ಸಾಕ್ಷಿಯಾಯಿತು, ರಾಜ್ಯಪಾಲರು ರಾಜಕೀಯ ಏಜೆಂಟರಂತೆ ವರ್ತಿಸುತ್ತಿರುವುದೇ ಇದಕ್ಕೆ ಕಾರಣ, ಎಂಬಿತ್ಯಾದಿ ಸಂಪಾದಕೀಯಗಳು ಪ್ರಕಟವಾಗಿದ್ದವು.
* ಕೇಂದ್ರ ವಿತ್ತ ಸಚಿವರು ಕೃಷ್ಣಾ ಮೇಲ್ದಂಡೆ ಯೋಜನೆಗೆ ಅನುದಾನ ನೀಡುವುದಾಗಿ ಘೋಷಿಸಿ , ನಂತರದ ರಾಜ್ಯ ಸರ್ಕಾರವೂ ಇದನ್ನು ರಾಷ್ಟ್ರೀಯ ಯೋಜನೆ ಘೋಷಿಸಲಾಗುವುದು ಎಂದೂ ತಿಳಿಸಿದ್ದರು. ಆದರೆ ಅನುದಾನವಾಗಲಿ, ರಾಷ್ಟ್ರೀಯ ಯೋಜನೆ ಎಂದಾಗಲಿ ಘೋಷಣೆಯಾಗಿಲ್ಲ. ಇದು ಸತ್ಯವಲ್ಲವೇ?
* 15 ನೇ ಹಣಕಾಸು ಆಯೋಗದಲ್ಲಿ ಶಿಫಾರಸು ಮಾಡಲಾಗಿದ್ದ 11495 ಕೋಟಿ ರೂ.ಗಳು ರಾಜ್ಯಕ್ಕೆ ನೀಡಲಿಲ್ಲ. 14 ನೇ ಆಯೋಗದಲ್ಲಿ 4.71 % ರಾಜ್ಯಕ್ಕೆ ಕೊಡಲಾಗಿತ್ತು. 15 ನೇ ಆಯೋಗದಲ್ಲಿ 3.64% ಕ್ಕೆ ಇಳಿಸಿದರು. ಇದರಿಂದ ಐದು ವರ್ಷಗಳಲ್ಲಿ ರಾಜ್ಯಕ್ಕೆ 1,25,000 ಕೋಟಿ ಕಡಿಮೆಯಾಯಿತು.
* ಈ ಅನುದಾನದ ಕಡಿತದ ಬಗ್ಗೆ ಪ್ರಶ್ನಿಸುವುದು ರಾಜ್ಯದ ಎಲ್ಲ ಜನಪ್ರತಿನಿಧಿಗಳ ಜವಾಬ್ದಾರಿ. ರಾಜ್ಯದಿಂದ 4.50 ಲಕ್ಷ ಕೋಟಿ ತೆರಿಗೆ ಕೊಟ್ಟರೆ, ನಮಗೆ ಕೇವಲ 55 ರಿಂದ 60 ಸಾವಿರ ಕೋಟಿ ರಾಜ್ಯಕ್ಕೆ ಬರುತ್ತದೆ.
* ಎಂಟು ವರ್ಷದಿಂದ ಹೆಚ್ಚು ಜಿಎಸ್ ಟಿ ತೆರಿಗೆ ಪಡೆದು, ಈಗ ಕೇಂದ್ರ ಸರ್ಕಾರ ಹಠಾತ್ತಾಗಿ ಜಿಎಸ್ ಟಿ ಯನ್ನು ಕಡಿತಗೊಳಿಸಿತು. ರಾಜ್ಯಕ್ಕೆ ಜಿಎಸ್ ಟಿ ಯಿಂದ 12-15 ಸಾವಿರ ಕೋಟಿ ನಷ್ಟವಾಗುತ್ತದೆ. ಇದು ಏಳು ಕೋಟಿ ಕನ್ನಡಿಗರಿಗೆ ಆದ ನಷ್ಟ.
* ಕೇಂದ್ರ ಸರ್ಕಾರ ಸೆಸ್ ಮತ್ತು ಸರ್ಚಾರ್ಜ್ ನ್ನು ಸುಮಾರು 6 ಲಕ್ಷ ಕೋಟಿ ವಸೂಲಿಯಾಗುತ್ತಿದ್ದು, ಇದರಲ್ಲಿ ರಾಜ್ಯಗಳಿಗೆ ಒಂದು ಪೈಸೆಯೂ ಬರುವುದಿಲ್ಲ. ಈ ಬಗ್ಗೆ ಧ್ವನಿ ಎತ್ತಿ ರಾಜ್ಯಗಳಿಗೂ ಪಾಲು ನೀಡಿ ಎಂದು ನಮ್ಮ ಸರ್ಕಾರ ಒತ್ತಾಯಿಸಿದ್ದರೂ, ಇದು ಜಾರಿಯಾಗಿಲ್ಲ. ಈ ಎಲ್ಲ ಅಂಶಗಳು ವಾಸ್ತವಾಂಶವಾಗಿದೆ.
* ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಅನುದಾನ ಕಡಿತದ ಬಗ್ಗೆ ನಾನೇ ಹಲವು ಬಾರಿ ಸಂಬಂಧಿಸಿದವರಿಗೆ ಪತ್ರ ಬರೆದಿದ್ದೇನೆ. ಕೇಂದ್ರ ವಿತ್ತ ಸಚಿವರನ್ನು ಈ ಸಂಬಂಧ ಭೇಟಿ ಮಾಡಲಾಗಿದೆ. ಜಿಎಸ್ ಟಿ ಸಮಿತಿ ಸಭೆಯಲ್ಲಿ ರಾಜ್ಯ ಸರ್ಕಾರ ತನ್ನ ನಿಲುವನ್ನು ಮಂಡಿಸಿದರೂ, ಅದನ್ನು ಪರಿಗಣಿಸಲಾಗಿಲ್ಲ.
PublicNext
02/02/2026 07:07 pm