ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿತ್ರದುರ್ಗ : ರೈತರಿಗೆ ನ್ಯಾಯ ಬೇಕು: ಬೆಳೆ ಪರಿಹಾರ ಅಕ್ರಮ ವಿರುದ್ಧ ಶಾಸಕರ ಆಗ್ರಹ!

ಚಿತ್ರದುರ್ಗ : ವಿಧಾನಸಭಾ ಅಧಿವೇಶನದಲ್ಲಿ ಇಂದು ಚಿತ್ರದುರ್ಗ ಜಿಲ್ಲೆಯ ಐದು ತಾಲೂಕುಗಳು ಹಾಗೂ ಚಳ್ಳಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರಗಾಲಕ್ಕೆ ಸಂಬಂಧಿಸಿದ ಬೆಳೆ ಪರಿಹಾರ ವಿತರಣೆಯಲ್ಲಿ ನಡೆದಿರುವ ಅವ್ಯವಹಾರಗಳ ಕುರಿತು ಶಾಸಕ ಟಿ.ರಘುಮೂರ್ತಿ ಸದನದಲ್ಲಿ ಚರ್ಚೆ ನಡೆಸಿದ್ದರು.

ಈ ಕುರಿತು ಸ್ಥಳೀಯ ಮಟ್ಟದಲ್ಲಿ ದೂರುಗಳು ದಾಖಲಾಗಿರುವುದಾಗಿ ಗ್ರಾಮೀಣ ಅಭಿವೃದ್ಧಿ ಸಚಿವರಾದ ಶ್ರೀ ಪ್ರಿಯಾಂಕ ಖರ್ಗೆ ಅವರು ಸ್ಪಷ್ಟಪಡಿಸಿ, ಶೀಘ್ರ ತನಿಖೆ ನಡೆಸಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು.

ಬೆಳೆ ಪರಿಹಾರದಲ್ಲಿ ರೈತರಿಗೆ ಯಾವುದೇ ಅನ್ಯಾಯವಾಗದಂತೆ, ತಪ್ಪಿತಸ್ಥ ವಿಮಾ ಕಂಪನಿಗಳು ಹಾಗೂ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಜೊತೆಗೆ ನನ್ನ ಕ್ಷೇತ್ರದ ಅರ್ಹ ರೈತ ಫಲಾನುಭವಿಗಳಿಗೆ ಶೀಘ್ರವಾಗಿ ಬೆಳೆ ಪರಿಹಾರ ಒದಗಿಸುವಂತೆ ಶಾಸಕ ಟಿ.ರಘುಮೂರ್ತಿ ಆಗ್ರಹಿಸಿದರು.

Edited By : PublicNext Desk
PublicNext

PublicNext

02/02/2026 08:53 pm

Cinque Terre

19.16 K

Cinque Terre

0

ಸಂಬಂಧಿತ ಸುದ್ದಿ