ಶಿಗ್ಗಾಂವಿ : ತಾಲೂಕಿನ ಗುಡ್ಡದಚನ್ನಾಪುರ ಗ್ರಾಮದ ಶ್ರೀ ಗುರು ಕೊಟ್ಟೂರು ಬಸವೇಶ್ವರರ ನೂತನ ಬೆಳ್ಳಿ ಉತ್ಸವ ಮೂರ್ತಿ ಹಾಗೂ ತೇರಿನ ಕಳಸದ ಭವ್ಯ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ನಡೆಯಿತು. ಫೆಬ್ರುವರಿ 13 ರವರೆಗೆ ನಡೆಯುವ ಕೊಟ್ಟೂರು ಬಸವೇಶ್ವರ ರಥೋತ್ಸವ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿದೆ.
ಪ್ರತಿಯೊಬ್ಬರು ತಮ್ಮ ಮನೆಗಳನ್ನು ಸ್ವಚ್ಛಗೊಳಿಸಿ. ತಳಿರು ತೋರಣಗಳಿಂದ ಸಿಂಗರಿಸಿದ್ದಾರೆ. ನಿತ್ಯ ಪುರಾಣ ಪ್ರವಚನ ಆಯೋಜಿಸಿಮಠಾಧೀಶರನ್ನು ಆಹ್ವಾನಿಸಿ ಧಾರ್ಮಿಕ ಸಂದೇಶ ನೀಡಲು ಸಿದ್ಧತೆ ಕೈಗೊಳ್ಳಲಾಗಿದೆ.
ಪ್ರಾತಃಕಾಲ ಶ್ರೀಗುರು ಕೊಟ್ಟೂರು ಬಸವೇಶ್ವರ ದೇವರಿಗೆ ಅಭಿಷೇಕ, ವಿಶೇಷ ಪೂಜೆ ನಡೆಯಿತು. ಮೊದಲನೇ ದಿನದ ಪುರಾಣ ಪ್ರವಚನದ ಕಾರ್ಯಕ್ರಮಕ್ಕೆ ಬಂಕಾಪುರದ ಅರಳಲೆಹಿರೇಮಠದ ರೇವಣಸಿದ್ದೇಶ್ವರ ಶ್ರೀಗಳ ಸಾನ್ನಿಧ್ಯದಲ್ಲಿ ನಡೆದ ಪುರಾಣ ಪ್ರವಚನ ಜರಗಿತು ಕಾರ್ಯಕ್ರಮದಲ್ಲಿ ಮಠಾಧೀಶರು, ರಾಜಕೀಯ ಗಣ್ಯರು, ಸಮಾಜ ಸೇವಕರು, ಭಕ್ತರು ಪಾಲ್ಗೊಂಡಿದ್ದರು
ವರದಿ. ಚನ್ನವೀರ ನೀರಲಗಿ. ಪಬ್ಲಿಕ್ ನೆಕ್ಸ್ಟ್
Kshetra Samachara
02/02/2026 10:10 pm
LOADING...