ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾವೇರಿ: ಯಲವಿಗಿಯಲ್ಲಿ ಅಂಬಿಗರ ಚೌಡಯ್ಯನವರ ಜಯಂತಿ - ಅದ್ದೂರಿಯಾಗಿ ಆಚರಿಸಿದ ಗ್ರಾಮಸ್ಥರು..!

ಹಾವೇರಿ: ಅಂಬಿಗ, ಅಂಬಿಗನೆಂದು ಕುಂದು ನುಡಿಯದಿರು. ನಂಬಿದರೇ ಒಂದೇ ಹುಟ್ಟಲ್ಲಿ ಕಡೆ ಹಾಯಿಸುವ ನಮ್ಮ ಅಂಬಿಗರ ಚೌಡಯ್ಯ. ಕ್ರಾಂತಿಕಾರಿ ವಚನಕಾರ, ನಿಜಶರಣ ಅಂಬಿಗರ ಚೌಡಯ್ಯನವರ ಜಯಂತೋತ್ಸವವನ್ನು ಹಾವೇರಿ ಜಿಲ್ಲೆಯ ಯಲವಿಗಿ ಗ್ರಾಮದಲ್ಲಿ ಅದ್ದೂರಿಯಾಗಿ ಆಚರಣೆ ಮಾಡಲಾಯಿತು.

ಬೆಸ್ತರ(ಗಂಗಾಮತ)ಸಮಾಜ ಸೇವಾ ಸಮಿತಿ, ಗ್ರಾಮ ಪಂಚಾಯಿತಿಯ ಸಹಭಾಗಿತ್ವದಲ್ಲಿ ಹಾಗೂ ಯಲವಿಗಿ ಗ್ರಾಮದ ಗ್ರಾಮಸ್ಥರ ಸಮ್ಮುಖದಲ್ಲಿ ಅದ್ದೂರಿಯಾಗಿ ಆಚರಿಸಲಾಯಿತು. ಅಂಬಿಗರ ಚೌಡಯ್ಯನವರ ಭಾವಚಿತ್ರಕ್ಕೆ ವಿಶೇಷವಾಗಿ ಪೂಜೆ ಸಲ್ಲಿಸುವ ಮೂಲಕ ಅರ್ಥಪೂರ್ಣವಾಗಿ ಆಚರಣೆ ಮಾಡಲಾಯಿತು.

ಇನ್ನೂ ಗಂಗಾಪರಮೇಶ್ವರಿ ದೇವಸ್ಥಾನದಲ್ಲಿ ಹಾಗೂ ಗ್ರಾಮ ಪಂಚಾಯಿತಿಯಲ್ಲಿ ನೂರಾರು ಸಂಖ್ಯೆಯಲ್ಲಿ ಊರಿನ ಸರ್ವಧರ್ಮದ ನಾಗರಿಕರು, ಗಂಗಾಮತ ಸಮಾಜದವರು ಹಾಗೂ ಗ್ರಾಮ ಪಂಚಾಯಿತಿ ಚುನಾಯಿತ ಸದಸ್ಯರು ಹಾಗೂ ಸಿಬ್ಬಂದಿ ವರ್ಗ ಭಾಗವಹಿಸಿ ಕ್ರಾಂತಿಕಾರಿ ವಚನಕಾರ, ನಿಜಶರಣ ಅಂಬಿಗರ ಚೌಡಯ್ಯನವರಿಗೆ ಗೌರವ ಸಮರ್ಪಣೆ ಮಾಡಿದರು.

Edited By : Vinayak Patil
Kshetra Samachara

Kshetra Samachara

21/01/2026 03:22 pm

Cinque Terre

19.18 K

Cinque Terre

0

ಸಂಬಂಧಿತ ಸುದ್ದಿ