ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾವೇರಿ: ಅಮರ ಶಿಲಾಕ್ಷರ ಫಲಕದಲ್ಲಿ 365 ಸ್ವಾತಂತ್ರ್ಯ ಹೋರಾಟಗಾರರ ಹೆಸರು!

ಹಾವೇರಿ: ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಕೊಡಿಯಾಲ ಗ್ರಾಮ ಪಂಚಾಯತ್ 77ನೇ ಗಣರಾಜ್ಯೋತ್ಸವ ಸೋಮವಾರ ವಿಭಿನ್ನವಾಗಿ ಆಚರಿಸಲಿದೆ. ಈ ವಿಭಿನ್ನ ಆಚರಣೆಗೆ ಕಾರಣವಾಗಿದ್ದು ಗ್ರಾಮದ ಕಲಾವಿದ ಡಾ.ಜಿ.ಜೆ.ಮೆಹಂದಳೆ.

ಮೆಹಂದಳೆಯವರು 77ನೇ ಗಣರಾಜ್ಯೋತ್ಸವದ ಅಂಗವಾಗಿ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಪ್ರಮುಖರಾದ 365

ಹೋರಾಟಗಾರರ ಹೆಸರು- ಜನನ ಮತ್ತು ಅವರು ಹುತಾತ್ಮರಾದ ದಿನಾಂಕಗಳನ್ನು ಅಮರ ಶಿಲಾಕ್ಷರ ಫಲಕದಲ್ಲಿ ಕೆತ್ತಿಸಿದ್ದಾರೆ. ಎರಡು ಅಡಿ ಅಗಲ, ಮೂರು ಅಡಿ ಎತ್ತರದ 12 ಶಿಲೆಗಳಲ್ಲಿ ದಿನಾಂಕಕ್ಕೆ ತಕ್ಕಂತೆ ಮಾಹಿತಿಯನ್ನು ಕೆತ್ತಿಸಿದ್ದಾರೆ.

ಈ ಅಮರ ಶಿಲಾ ಫಲಕಗಳನ್ನು ಸೋಮವಾರ ಕೊಡಿಯಾಳ ಗ್ರಾಮ ಪಂಚಾಯತ್ ಕಾರ್ಯಾಲಯದ ಆವರಣದಲ್ಲಿ ಸ್ಥಾಪಿಸಲಿದ್ದಾರೆ. ಪ್ರತಿ ತಿಂಗಳು ಎಷ್ಟು ದಿನಗಳಿವೆ, ಆ ದಿನಗಳಿಗೆ ಒಬ್ಬಬ್ಬರಂತೆ ಸ್ವಾತಂತ್ರ ಹೋರಾಟಗಾರರ ಹೆಸರು, ಅವರ ಮರಣದ ದಿನಾಂಕಕ್ಕೆ ಅನುಗುಣವಾಗಿ ಸುಮಾರು 12 ಫಲಕಗಳನ್ನು ಮೆಹಂದಳೆ ಕೆತ್ತಿಸಿದ್ದಾರೆ.

Edited By :
PublicNext

PublicNext

26/01/2026 08:26 am

Cinque Terre

17.87 K

Cinque Terre

0

ಸಂಬಂಧಿತ ಸುದ್ದಿ