ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾವೇರಿ: ಹೋರಿ ಸಾವಿಗೆ ಶ್ವಾನದ ಕಣ್ಣೀರು - ಮೂಕಪ್ರಾಣಿಗಳ ಮಮತೆಗೆ ಮನಮಿಡಿದ ಘಟನೆ

ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಹುಲಿಕಟ್ಟಿ ಗ್ರಾಮದಲ್ಲಿ ಒಂದು ಹೃದಯ ಕಲಕುವ ಘಟನೆ ನಡೆದಿದೆ. ರೈತನ ನೆಚ್ಚಿನ ಹೋರಿಯ ಸಾವಿನಿಂದ, ಅದನ್ನು ಸಾಕಿದ ಶ್ವಾನವೊಂದು ಮೂಕಪ್ರಾಣಿಯ ಮೂಕರೋದನೆ ತೋರಿದೆ.

ನಿಷ್ಠಾವಂತ ಒಡನಾಟ

ಗ್ರಾಮದ ಸಿದ್ದಬೀರಪ್ಪ ಗಡ್ಡೆ ಎಂಬುವರಿಗೆ ಸೇರಿದ ಹೋರಿ ಅನಾರೋಗ್ಯದಿಂದ ಮೃತಪಟ್ಟಿತ್ತು. ಈ ಹೋರಿಯೊಂದಿಗೆ ಸದಾ ಒಡನಾಡುತ್ತಿದ್ದ ಶ್ವಾನ, ತನ್ನ ಪ್ರೀತಿಯ ಒಡನಾಡಿ ಸಾವನ್ನಪ್ಪುತ್ತಿದ್ದಂತೆ ಕಣ್ಣೀರಿಟ್ಟಿದೆ. ಅಷ್ಟೇ ಅಲ್ಲದೆ, ಸಾವನ್ನಪ್ಪಿದ ಹೋರಿಯ ಶವವನ್ನು ತನ್ನ ನಾಲಿಗೆಯಿಂದ ನೆಕ್ಕುವ ಮೂಲಕ ಮುದ್ದಾಡಿದೆ. ಹೊಲದಲ್ಲಿ ಉಳುಮೆಗೆ ಹೋದಾಗಲೂ ಸದಾ ಹೋರಿಯ ಜೊತೆಗೇ ಇರುತ್ತಿದ್ದ ಈ ಶ್ವಾನ, ಹೋರಿಯ ಅಂತ್ಯಸಂಸ್ಕಾರ ಮಾಡುವವರೆಗೂ ಜೊತೆಗಿದ್ದು, ಎಲ್ಲರನ್ನೂ ಅಚ್ಚರಿಗೊಳಿಸಿದೆ.

Edited By : Shivu K
PublicNext

PublicNext

26/01/2026 08:55 pm

Cinque Terre

16.65 K

Cinque Terre

1