ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾವೇರಿ: ʼರಾಕ್ಷಸʼ ಇನ್ನಿಲ್ಲ; ಈತನ ನಾಗಾಲೋಟಕ್ಕೆ ಪಹಿಲ್ವಾನರೇ ಚೆಲ್ಲಾಪಿಲ್ಲಿ!

ಹಾವೇರಿ: ಹಾವೇರಿ ಸೇರಿದಂತೆ ಉತ್ತರ ಕರ್ನಾಟಕದಲ್ಲಿ ದನ ಬೆದರಿಸುವ ಸ್ಪರ್ಧೆಯಲ್ಲಿ ಧೂಳೆಬ್ಬಿಸುತ್ತಿದ್ದ ಹೋರಿ ʼರಾಕ್ಷಸʼ ಸಾವನ್ನಪ್ಪಿದೆ. ಸುಮಾರು 18 ವರ್ಷ ವಯಸ್ಸಿನ ಹೋರಿ ಇದಾಗಿದ್ದು, ಕಳೆದ 15 ದಿನಗಳಿಂದ ವಯೋಸಹಜ ಖಾಯಲೆಗಳಿಂದ ಬಳಲುತ್ತಿತ್ತು.

ಹಾವೇರಿ ಸಮೀಪದ ಕೆರಿಮತ್ತಿಹಳ್ಳಿಯ ಸಿದ್ದಲಿಂಗಪ್ಪ ವಾಲಿ ಹೆಸರಿನ ರೈತ ಈ ಹೋರಿಯನ್ನು ತಮಿಳುನಾಡಿನಿಂದ 11 ವರ್ಷಗಳ ಹಿಂದೆ ಖರೀದಿ ಮಾಡಿದ್ದರು. ಆರಂಭದಲ್ಲಿ ದನ ಬೆದರಿಸುವ ಸ್ಪರ್ಧೆಯಲ್ಲಿ ಬಿಟ್ಟಾಗ ಹೋರಿ ಅಖಾಡದ ಪಹಿಲ್ವಾನರನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ ಓಡುವಂತೆ ಮಾಡಿತ್ತಂತೆ. ಈ ಹಿನ್ನೆಲೆಯಲ್ಲಿ ಈ ಹೋರಿಗೆ ಅಭಿಮಾನಿಗಳೇ ʼರಾಕ್ಷಸʼ ಎಂದು ಹೆಸರಿಟ್ಟಿದ್ದರು.

ಅಲ್ಲಿಂದ ಆರಂಭವಾದ ʼರಾಕ್ಷಸʼನ ನಾಗಾಲೋಟ ಕಳೆದ ಎರಡು ವರ್ಷಗಳವರೆಗೆ ಮುಂದುವರೆದಿತ್ತು. ಶಿವಮೊಗ್ಗ, ಉತ್ತರ ಕರ್ನಾಟಕ ಎಲ್ಲಿಯೇ ದನ ಬೆದರಿಸುವ ಸ್ಪರ್ಧೆ ಇರಲಿ... ಅಲ್ಲಿ ʼರಾಕ್ಷಸʼ ಹಾಜರಿರುತ್ತಿದ್ದ. ಆದರೆ, ಬುಧವಾರ ಸಾವನ್ನಪ್ಪಿದ.

Edited By : Manjunath H D
PublicNext

PublicNext

23/01/2026 06:50 pm

Cinque Terre

19.36 K

Cinque Terre

0

ಸಂಬಂಧಿತ ಸುದ್ದಿ