ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾವೇರಿ: ಜನವರಿ 26ರಂದು ಪಕ್ಷಾತೀತ ಸಭೆ ನಡೆಸಲು ಮುಂದಾದ ರೈತ ಸಂಘ

ಹಾವೇರಿ: ಬೇಡ್ತಿ ವರದಾ ನದಿ ಜೋಡಣೆ ಕುರಿತಂತೆ ಹಾವೇರಿ ಜಿಲ್ಲೆಯಲ್ಲಿ ಹೋರಾಟ ತೀವ್ರಗೊಳ್ಳುವ ಲಕ್ಷಣಗಳು ಕಾಣಿಸಲಾರಂಭಿಸಿವೆ. ಜನವರಿ 26 ರಂದು ಪಕ್ಷಾತೀತವಾಗಿ ದೊಡ್ಡ ಸಭೆ ನಡೆಸಲು ಹಾವೇರಿ ಜಿಲ್ಲಾ ರೈತ ಸಂಘ ಮುಂದಾಗಿದೆ.

ಈಗಾಗಲೇ ಹಾವೇರಿ ಜಿಲ್ಲೆಯ ಆರು ಶಾಸಕರನ್ನ, ಸಂಸದರನ್ನ, ಉಸ್ತುವಾರಿ ಸಚಿವರನ್ನ ರೈತರು ಸಭೆಗೆ ಆಹ್ವಾನಿಸಿದ್ದಾರೆ. ಈ ಹಾವೇರಿ ಹುಕ್ಕೇರಿಮಠದ ಸದಾಶಿವಶ್ರೀಗಳು ಸೇರಿದಂತೆ ಹಲವು ಮಠಾಧೀಶರು ಸಹ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಯೋಜನೆಯ ವಿರೋಧ ಹೋರಾಟಗಾರರು ಪರಿಸರವಾದಿಗಳು ಮತ್ತು ಮಠಾಧೀಶರ ಹೋರಾಟಕ್ಕೆ ಪ್ರತಿತಂತ್ರ ಹೆಣೆಯಲು ಹಾವೇರಿ ಜಿಲ್ಲಾ ರೈತರು ಸಿದ್ಧತೆ ನಡೆಸಿದ್ದಾರೆ. ರೈತಸಂಘ ಅಹ್ವಾನಿಸಿರುವ ಸಭೆಗೆ ಹಾವೇರಿಯ ಶಾಸಕರು ಪಾಲ್ಗೊಳ್ಳುವುದಾಗಿ ತಿಳಿಸಿದ್ದಾರೆ.

Edited By :
Kshetra Samachara

Kshetra Samachara

25/01/2026 11:59 am

Cinque Terre

13.08 K

Cinque Terre

0

ಸಂಬಂಧಿತ ಸುದ್ದಿ