ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾವೇರಿ: ನದಿಯ ನೀರಿಗಾಗಿ ರಾಜ್ಯದಲ್ಲಿ ಹೋರಾಟದ ಕಿಚ್ಚು - ಬೇಡ್ತಿ-ವರದಾ ಯೋಜನೆಗೆ ಪರ-ವಿರೋಧ ಸಂಘರ್ಷ!

ಹಾವೇರಿ: ಬೇಡ್ತಿ-ವರದಾ ನದಿ ಜೋಡಣೆ ಯೋಜನೆ ಕುರಿತಂತೆ ರಾಜ್ಯದಲ್ಲಿ ಪರ ವಿರೋಧದ ಹೋರಾಟಗಳು ತೀವ್ರಗೊಂಡಿವೆ. ಈ ಯೋಜನೆಗೆ ಉತ್ತರಕನ್ನಡ ಜಿಲ್ಲೆಯ ಮಠಾಧೀಶರು, ಜನಪ್ರತಿನಿಧಿಗಳು ಹಾಗೂ ಪರಿಸರ ಹೋರಾಟಗಾರರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಯೋಜನೆಗೆ ರೈತರ ಬೆಂಬಲ

ಮತ್ತೊಂದೆಡೆ, ಹಾವೇರಿ, ಗದಗ ಹಾಗೂ ರಾಯಚೂರು ಜಿಲ್ಲೆಗಳಿಗೆ ವರದಾನವಾಗಲಿದೆ ಎನ್ನಲಾದ ಈ ಯೋಜನೆಗೆ ಆ ಭಾಗದ ರೈತರು ಬೆಂಬಲ ಸೂಚಿಸಿದ್ದಾರೆ. ಬೇಡ್ತಿ-ವರದಾ ನದಿ ಜೋಡಣೆ ಯೋಜನೆ ವಿರೋಧಿಸಿ ಶಿರಸಿಯಲ್ಲಿ ಸಭೆ ನಡೆದ ಬೆನ್ನಲ್ಲೇ, ಯೋಜನೆಗೆ ಬೆಂಬಲಿಸಿ ಹಾವೇರಿಯಲ್ಲಿ ರೈತರು ಜನಜಾಗೃತಿ ಸಭೆ ನಡೆಸಲು ನಿರ್ಧರಿಸಿದ್ದಾರೆ. ಯೋಜನೆಗೆ ಬೆಂಬಲ ವ್ಯಕ್ತಪಡಿಸಿರುವ ರೈತರ ಹೋರಾಟಕ್ಕೆ ಕೆಲ ಮಠಾಧೀಶರು ಹಾಗೂ ಜನಪ್ರತಿನಿಧಿಗಳು ಕೂಡ ಬೆಂಬಲ ನೀಡಿದ್ದಾರೆ.

ಸಭೆಗಳ ಸರಣಿ

ಇದೇ 11ರಂದು ಶಿರಸಿಯಲ್ಲಿ ಸ್ವರ್ಣವಲ್ಲಿ ಶ್ರೀಗಳ ನೇತೃತ್ವದಲ್ಲಿ ವರದಾ-ಬೇಡ್ತಿ ಯೋಜನೆ ವಿರೋಧಿ ಜನಜಾಗೃತಿ ಸಭೆ ನಡೆದಿತ್ತು. ಇದರ ಬೆನ್ನಲ್ಲೇ, ಇದೇ 26ರಂದು ಹಾವೇರಿಯಲ್ಲಿ ಬೃಹತ್ ಜನಜಾಗೃತಿ ಸಭೆ ನಡೆಸಲು ಹಾವೇರಿ ಜಿಲ್ಲೆಯ ರೈತರು ನಿರ್ಧರಿಸಿದ್ದಾರೆ. ಹಾವೇರಿಯ ಹುಕ್ಕೇರಿಮಠದ ಸದಾಶಿವಸ್ವಾಮಿಗಳ ನೇತೃತ್ವದಲ್ಲಿ ಈ ಸಭೆ ನಡೆಯಲಿದೆ.

Edited By :
Kshetra Samachara

Kshetra Samachara

18/01/2026 12:10 pm

Cinque Terre

21.2 K

Cinque Terre

0

ಸಂಬಂಧಿತ ಸುದ್ದಿ