ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಮದುರ್ಗ : ಸರ್ಕಾರಿ ಜಾಗ ಒತ್ತುವರಿ ವರದಿ ಬೆನ್ನಲ್ಲೇ ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ತನಿಖೆಗೆ ಆದೇಶ

ಬೆಳಗಾವಿ : ಜಿಲ್ಲೆಯ ರಾಮದುರ್ಗ ತಾಲೂಕಿನ ಕಲ್ಲೂರ ಗ್ರಾಮದಲ್ಲಿ ರೈತರ ಹೊಲಕ್ಕೆ ಹೋಗುವ ಸರ್ಕಾರಿ ರಸ್ತೆಯನ್ನು ಅತಿಕ್ರಮಿಸಿ ಮನೆ ನಿರ್ಮಿಸಿರುವ ಬಗ್ಗೆ 'ಪಬ್ಲಿಕ್ ನೆಕ್ಸ್ಟ್' ವರದಿ ಪ್ರಕಟಿಸುತ್ತಿದ್ದಂತೆ, ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಪ್ರಕರಣದ ತನಿಖೆಗೆ ತಕ್ಷಣ ಆದೇಶಿಸಿದ್ದಾರೆ.

ಪ್ರಕರಣದ ಹಿನ್ನೆಲೆ

ರೈತ ಮಹಿಳೆ ಈರವ್ವ ಕಾಡಪ್ಪ ಚವಣ್ಣವರ ಅವರು ತಮ್ಮ ಹೊಲಕ್ಕೆ ಹೋಗಲು ಇರುವ ಏಕೈಕ ಸರ್ಕಾರಿ ರಸ್ತೆಯನ್ನು ಸಿದ್ದಪ್ಪ ಪೂಜಾರ ಮತ್ತು ಅವರ ಸಹೋದರರು ಅತಿ ಕ್ರಮಿಸಿಕೊಂಡು ಮನೆ ಕಟ್ಟಿದ್ದಾರೆ ಎಂದು ಆರೋಪಿಸಿದ್ದರು. ಈ ಕುರಿತು ಕಲ್ಲೂರ ಗ್ರಾಮದಲ್ಲಿ ಎಡಿಎಲ್‌ಆರ್ (ADLR) ಸರ್ವೆ ನಡೆದಿತ್ತು. ಈ ಸರ್ವೆಯಲ್ಲಿ ಒತ್ತುವರಿಯಾಗಿರುವ ಜಾಗ ಸರ್ಕಾರಿ ಜಾಗವೇ ಎಂದು ವರದಿಯಲ್ಲಿ ಸ್ಪಷ್ಟವಾಗಿ ತಿಳಿಸಲಾಗಿತ್ತು.

ತಹಶೀಲ್ದಾರರ ನಿರ್ಲಕ್ಷ್ಯ ಮತ್ತು ಮಾಧ್ಯಮ ವರದಿ

ಎಡಿಎಲ್‌ಆರ್ ವರದಿ ಸ್ಪಷ್ಟವಾಗಿದ್ದರೂ, ರಾಮದುರ್ಗ ತಾಲೂಕಿನ ತಹಶೀಲ್ದಾರ್ ಪ್ರಕಾಶ್ ಹೊಳೆಪ್ಪಗೋಳ ಅವರು ಈವರೆಗೂ ಒತ್ತುವರಿಯನ್ನು ತೆರವುಗೊಳಿಸಲು ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಇದರಿಂದ ನೊಂದಿದ್ದ ರೈತ ಮಹಿಳೆ ಈರವ್ವ ಚವಣ್ಣವರ ಅವರು ಮಾಧ್ಯಮದ ಮುಂದೆ ಬಂದು ಸರ್ಕಾರಿ ಜಾಗದ ಅತಿಕ್ರಮಣದ ಬಗ್ಗೆ ಆರೋಪಿಸಿದ್ದರು. ಈ ಕುರಿತು 'ಪಬ್ಲಿಕ್ ನೆಕ್ಸ್ಟ್' ವರದಿ ಪ್ರಕಟಿಸಿ ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರ ಗಮನಕ್ಕೆ ತಂದ ಕೂಡಲೇ, ಅವರು ತನಿಖೆಗೆ ಆದೇಶ ಹೊರಡಿಸಿದ್ದಾರೆ.

ಅಧಿಕಾರಿಗಳ ನಡೆಗೆ ಸಾರ್ವಜನಿಕರ ಆಕ್ರೋಶ

ಯಾವುದೇ ಭಯವಿಲ್ಲದೆ ಸರ್ಕಾರಿ ಜಾಗವನ್ನೇ ರಾಜಾರೋಷವಾಗಿ ಅತಿಕ್ರಮಿಸಿಕೊಂಡು ಮನೆ ನಿರ್ಮಿಸುತ್ತಿರುವ ಪ್ರವೃತ್ತಿ ಹೆಚ್ಚುತ್ತಿದೆ. ಇಂತಹ ಪ್ರಕರಣಗಳಲ್ಲಿ ತಹಶೀಲ್ದಾರರಂತಹ ಸ್ಥಳೀಯ ಅಧಿಕಾರಿಗಳು ಕಣ್ಣಿದ್ದೂ ಕುರುಡರಂತೆ ವರ್ತಿಸುತ್ತಿರುವುದು ಸಾರ್ವಜನಿಕರಲ್ಲಿ ಅನುಮಾನ ಮೂಡಿಸಿದೆ. ಕೂಡಲೇ ಜಿಲ್ಲಾಧಿಕಾರಿಗಳು ಮತ್ತು ಸಹಾಯಕ ಆಯುಕ್ತರ (AC) ಅಧಿಕಾರಿಗಳು ಈ ಬಗ್ಗೆ ಗಂಭೀರವಾಗಿ ಗಮನಹರಿಸಿ, ರೈತರಿಗೆ ನ್ಯಾಯ ಒದಗಿಸಲು ಮತ್ತು ಸರ್ಕಾರಿ ಜಾಗವನ್ನು ಸಂರಕ್ಷಿಸಲು ಅಗತ್ಯ ಕ್ರಮ ಕೈಗೊಳ್ಳಬೇಕಿದೆ.

Edited By :
PublicNext

PublicNext

03/02/2026 03:51 pm

Cinque Terre

6.39 K

Cinque Terre

0

ಸಂಬಂಧಿತ ಸುದ್ದಿ