ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕ್ಷೇತ್ರದಲ್ಲಿ ಮರಗಳ ಮಾರಣಹೋಮ

ಬೆಳಗಾವಿ: ಅರಣ್ಯ ಇಲಾಖೆ ಅನುಮತಿ ಪಡೆಯದೇ 50 ಎಕರೆ ಜಾಗದಲ್ಲಿದ್ದ ಮರಗಳಿಗೆ ಕತ್ತರಿ ಹಾಕಿರುವ ಘಟನೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಕ್ಷೇತ್ರದಲ್ಲಿ ನಡೆದಿದೆ.

ಬೆಳಗಾವಿ ತಾಲೂಕಿನ ಬಡಾಲ ಅಂಕಲಗಿ ಗ್ರಾಮದಲ್ಲಿ ಬೆಳಗಾವಿಯ ಹೆಸ್ಕಾಂ ಅಧಿಕಾರಿಗಳ ಮಹಾ ಎಡವಟ್ಟಿಗೆ ಸಾವಿರಾರು ಮರಗಳ ಮಾರಣ ಹೋಮ ಆಗಿದೆ.

ಜೆಸಿಬಿ ಬಳಸಿ ಸಾವಿರಾರು ಮರಗಳನ್ನು ಖದೀಮರು ಕಡಿದು ಹಾಕಿದ್ದಾರೆ. ಕಂದಾಯ ಇಲಾಖೆಗೆ ಸೇರಿದ 50 ಎಕರೆ ಜಾಗ ಇಂಧನ ಇಲಾಖೆಗೆ ಹಸ್ತಾಂತರಿಸಲಾಗಿದೆ. ಸೋಲಾರ್ ಪ್ಲಾಂಟ್ ಮಾಡಲು ಲೀಸ್ ಮೇಲೆ ಜಮೀನು ನೀಡಲು ಅನುಮೋದನೆ ನೀಡಿಲಾಗಿದೆ.‌ಆದರೆ ಅರಣ್ಯ ಇಲಾಖೆಯ ಅನುಮತಿ ಇಲ್ಲದೇ ಸೋಲಾರ್ ಪ್ಲಾಂಟ್ ಅಳವಡಿಕೆಗಾಗಿ ಸಾವಿರಾರು ಮರಗಳಿಗೆ ಕತ್ತರಿ ಹಾಕಲಾಗಿದೆ.‌ ಬಡಾಲ ಅಂಕಲಗಿ ಗ್ರಾಮದ ಕೌರಿ ಗುಡ್ಡದ 50 ಎಕರೆ ಪ್ರದೇಶದಲ್ಲಿರೋ ಮರಗಳ ಮಾರಣಹೋಮ ಆಗಿದೆ.‌

ಶ್ರೀಗಂಧದ ಮರಗಳು, ಕೌಳಿ, ಸಾಗವಾಣಿ, ಕಾರಿ, ಬೋರೆಹಣ್ಣಿನ ಮರ ಸೇರಿ ಗಿಡಮೂಲಿಕೆ ಹೊಂದಿರುವ ಸಾವಿರಾರು ಗಿಡಮರಗಳು ನೆಲಸಮವಾಗಿದೆ. ಗಿಡಮರಗಳ ಮಾರಣಹೋಮಕ್ಕೆ ಅನುಮತಿ ಕೊಟ್ಟವರು ಯಾರು? ಕಾಡಿನಲ್ಲಿರೋ ಪ್ರಾಣಿಪಕ್ಷಿಗಳ ಗತಿಯೇನು? ಯಾರನ್ನು ಕೇಳಿ ಮರಗಳನ್ನ ಕಡಿದು ಹಾಕ್ತಿದ್ದೀರಿ ಎಂಬ ಪ್ರಶ್ನೆಗೆ ಉತ್ತರ ಇಲ್ಲದಂತೆ ಆಗಿದೆ. ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ಇಂಧನ, ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ಹೊರ ಹಾಕಿದ್ದಾರೆ.

Edited By : Shivu K
PublicNext

PublicNext

02/02/2026 12:33 pm

Cinque Terre

14.3 K

Cinque Terre

0

ಸಂಬಂಧಿತ ಸುದ್ದಿ