ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೊಲಕ್ಕೆ ದಾರಿ ಇಲ್ಲದೆ ರೈತರ ಪರದಾಟ: ಕಲ್ಲೂರ ಗ್ರಾಮದಲ್ಲಿ ಅನ್ನದಾತರ ಕಣ್ಣೀರು

ಬೆಳಗಾವಿ/ರಾಮದುರ್ಗ: ರೈತ ದೇಶದ ಬೆನ್ನೆಲುಬು ಅಂತಾರೆ, ಅನ್ನದಾತ ಬೆಳೆದ ಬೆಳೆಯಿಂದಲೇ ಎಲ್ಲರೂ ಹೊಟ್ಟೆ ತುಂಬಿಸಿಕೊಳ್ಳುತ್ತಾರೆ. ಆದ್ರೆ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲ್ಲೂಕಿನ ಕಲ್ಲೂರ ಗ್ರಾಮದಲ್ಲಿ, ರೈತರು ತಮ್ಮ ಹೊಲಕ್ಕೆ ಹೋಗಲು ಸರ್ಕಾರಿ ರಸ್ತೆ ಇದ್ದರೂ ಬೇರೆಯವರು ಅದನ್ನು ಅತಿಕ್ರಮಣ ಮಾಡಿಕೊಂಡು ಮನೆ ಕಟ್ಟಿಕೊಂಡು ದರ್ಪ ಮೆರೆಯುತ್ತಿರುವ ಆರೋಪ ಕೇಳಿ ಬಂದಿದೆ.

ಹೌದು,,, ಈರವ್ವ ಕಾಡಪ್ಪ ಚವಣ್ಣವರ ಈ ರೈತ ಮಹಿಳೆಯೇ ಈ ಅನ್ಯಾಯಕ್ಕೆ ಒಳಗಾದವರು. ಬೆಳಗಾವಿ ಜಿಲ್ಲೆ ರಾಮದುರ್ಗ‌ ತಾಲ್ಲೂಕು ಕಲ್ಲೂರ ಗ್ರಾಮದ ರೈತ ಮಹಿಳೆ, ಇವರು ತಮ್ಮ ಎರಡು ಎಕರೆ ಹೊಲದಲ್ಲಿ ತಮ್ಮ ಉಪ ಜೀವನ ನಡೆಸುತ್ತಿದ್ದರು. ಆದ್ರೆ ಇವರ ಹೊಲಕ್ಕೆ ಹೋಗಲು ಇರುವುದು ಒಂದೇ ಸರ್ಕಾರಿ ಜಾಗ, ಅದೇ ಸರ್ಕಾರಿ ರಸ್ತೆಯನ್ನು ಪಕ್ಕದಲ್ಲಿದ್ದ ಸಿದ್ದಪ್ಪ ಪೂಜಾರ ಹಾಗೂ ಸಹೋದರರು ಅತಿಕ್ರಮಣ ಮಾಡಿಕೊಂಡು ಮನೆ ಕಟ್ಟಿಕೊಂಡಿದ್ದಾರಂತೆ. ಇದರ ಬಗ್ಗೆ ಜಿಲ್ಲಾಡಳಿತದಲ್ಲಿ ದಾಖಲಾತಿ ತಗಿಸಿ ನೋಡಿದಾಗ ಹೊಲಕ್ಕೆ ಹೋಗುವ ಸರ್ಕಾರಿ ರಸ್ತೆಯನ್ನೇ ಕಬಳಿಸಿಕೊಂಡಿರುವುದರ ಬಗ್ಗೆ ADLR ವರದಿ‌ ಕೂಡ ಕೊಟ್ಟಿದ್ದಾರೆ.

ಈ ಜಾಗ ಒತ್ತುವರಿ ಬಗ್ಗೆ ಅನ್ಯಾಯಕ್ಕೆ ಒಳಗಾದ ಈರವ್ವ ಚವಣ್ಣವರ ಇದರ ಬಗ್ಗೆ ರಾಮದುರ್ಗದ ತಹಶೀಲ್ದಾರರಿಗೆ, ಬೈಲಹೊಂಗಲ ಎಸಿ, ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ಅರ್ಜಿ ನೀಡಿದ್ದಾರೆ. ADLR ವರದಿ ಪ್ರಕಾರ ಸಿದ್ದಪ್ಪ ಪೂಜಾರ ಹಾಗೂ ಸಹೋದರರು ಸರ್ಕಾರಿ ರಸ್ತೆಯನ್ನು ಅತಿಕ್ರಮಣ ಮಾಡಿಕೊಂಡಿರುವುದು ಖಚಿತವಾಗಿದೆ, ಇದನ್ನು ತೆರವುಗೊಳಿಸಿ ಕೊಡಿ ಎಂದು ತಹಶೀಲ್ದಾರ್ ಪ್ರಕಾಶ ಹೊಳೆಪ್ಪಗೋಳ ಅವರು ಮಾಡುತ್ತಿಲ್ಲವಂತೆ. ಅದಕ್ಕಾಗಿ ನೊಂದ ರೈತ ಮಹಿಳೆ ಈರವ್ವ ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರಿಗೆ ಮನವಿ‌ ಮಾಡಿದ್ದರು, ಕೂಡಲೇ ಜಿಲ್ಲಾಧಿಕಾರಿಗಳು ರಾಮದುರ್ಗ ತಹಶೀಲ್ದಾರರಿಗೆ ಹೇಳಿದ್ದರೂ ಕೂಡ ಇನ್ನೂವರೆಗೂ ತೆರವು ಮಾಡಿಸುತ್ತಿಲ್ಲವಂತೆ. ಈಗ ನ್ಯಾಯಕ್ಕಾಗಿ ನೊಂದ ಕುಟುಂಬ ಮಾಧ್ಯಮದ ಮುಂದೆ ಬಂದು ಅಳಲು ತೋಡಿಕೊಂಡಿದೆ.

ಇನ್ನು ಸರ್ವೆ ನಂಬರ್ 2/3ಅ, 2/3ಬ, 2/6 , 2/7 , 2/8 ಇದರಲ್ಲಿ ಸರ್ಕಾರಿ ಜಾಗವಿದೆ ಅದನ್ನೇ ಸಿದ್ದಪ್ಪ ಅಯ್ಯಪ್ಪ ಪೂಜಾರ ಹಾಗೂ ಸಹೋದರರು ಅತಿಕ್ರಮಣ ಮಾಡಿಕೊಂಡಿದ್ದಾರೆಂದು

ADLR ದಿಂದ ವರದಿಯಲ್ಲಿದೆ.

ತಮ್ಮ ಹೊಲಕ್ಕೆ ಹೋಗಲು ರೈತ ಈರವ್ವ ಸರ್ಕಾರಿ ಜಾಗವನ್ನು ಬಿಡಿ ಎಂದಿದ್ದಕ್ಕೆ ಸಿದ್ದಪ್ಪ ಪೂಜಾರ ಸಹೋದರರು ಸೇರಿ ಜೀವ ಬೆದರಿಕೆ ಹಾಕಿದ್ದಾರಂತೆ, ಇದರ ಬಗ್ಗೆ ಬೆಳಗಾವಿ ಎಸ್.ಪಿ ಅವರಿಗೆ 9/10/2025 ಕ್ಕೆ ದೂರು ನೀಡಿದ್ದಾರೆ.‌ ಇಷ್ಟೆಲ್ಲಾ ದಾಖಲಾತಿಗಳು ಇದ್ದರೂ ಕೂಡ ರಾಮದುರ್ಗ ತಹಶೀಲ್ದಾರರು ಯಾಕೆ ಕೈ ಕಟ್ಟಿ ಕುಳಿತಿದ್ದಾರೆ ಎಂಬುದಕ್ಕೆ ಸುತ್ತಲೂ ಅನುಮಾನ ಮೂಡುತ್ತಿದೆ.

ಕೂಡಲೇ ಬೆಳಗಾವಿ ಜಿಲ್ಲಾಧಿಕಾರಿಗಳು ಮೊಹಮ್ಮದ್ ರೋಷನ್ ಅವರು ಈ ಬಡ ರೈತಿಗೆ ನ್ಯಾಯ ಒದಗಿಸಿಕೊಡಬೇಕಿದೆ.

ಈರಣ್ಣ ವಾಲಿಕಾರ ಪಬ್ಲಿಕ್ ನೆಕ್ಸ್ಟ್.

Edited By :
PublicNext

PublicNext

02/02/2026 10:33 pm

Cinque Terre

18.84 K

Cinque Terre

1

ಸಂಬಂಧಿತ ಸುದ್ದಿ