ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿಯಲ್ಲಿ ಕಾಗದರಹಿತ ನೋಂದಣಿ ಕಾರ್ಯಾಗಾರ !

ಮುಲ್ಕಿ : ಉಪ ನೋಂದಣಿ ಕಚೇರಿಯಲ್ಲಿ ಸರಕಾರದ ಸುತ್ತೋಲೆಯಂತೆ ಸೋಮವಾರ ಕಾಗದರಹಿತ ನೋಂದಣಿ ವ್ಯವಸ್ಥೆಯ ಕುರಿತು ವಿಸ್ತೃತ ಮಾಹಿತಿ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು.

ದಕ್ಷಿಣ ಕನ್ನಡ ಜಿಲ್ಲಾ ನೋಂದಣಿ ಕಚೇರಿಯ ಎಂಜಿನಿಯರ್‌ ಗಳಾದ ಧನಂಜಯ ಮತ್ತು ಧನುಷ್ ಅವರು ಈ ಕಾರ್ಯಾಗಾರದಲ್ಲಿ ಮಾಹಿತಿ ನೀಡಿದರು. ಸ್ಥಳೀಯ ದಸ್ತಾವೇಜು ಬರಹಗಾರರು, ವಕೀಲರು, ಕರ್ನಾಟಕ ಒನ್, ಗ್ರಾಮ ಒನ್, ಮಂಗಳೂರು ಒನ್, ಇ-ಸ್ಟ್ಯಾಂಪ್ ಮಾರಾಟಗಾರರು, ಬಾಪೂಜಿ ಸೇವಾ ಕೇಂದ್ರ, ಬ್ಯಾಂಕ್, ಸೊಸೈಟಿ, ಕಂಪ್ಯೂಟರ್ ಸೆಂಟರ್ ಸಿಬ್ಬಂದಿ ಮತ್ತು ಸಾರ್ವಜನಿಕರು ಸೇರಿದಂತೆ ವಿವಿಧ ವರ್ಗದವರು ಭಾಗವಹಿಸಿದ್ದರು. ಕಾಗದರಹಿತ ನೋಂದಣಿ ವ್ಯವಸ್ಥೆಯ ಬಗ್ಗೆ ಸಮಗ್ರ ಮಾಹಿತಿ ನೀಡಿದ ತಜ್ಞರು, ಭಾಗವಹಿಸಿದವರ ಪ್ರಶ್ನೆಗಳಿಗೆ ಉತ್ತರಿಸಿದರು.

ಉಪನೋಂದಣಾಧಿಕಾರಿ ರಾಜೇಶ್ವರಿ ಹೆಗಡೆ ಹೇಳಿಕೆ

ಮುಲ್ಕಿ ಉಪನೋಂದಣಾಧಿಕಾರಿ ರಾಜೇಶ್ವರಿ ಹೆಗಡೆ ಮಾತನಾಡಿ, ಯಾವುದೇ ಕ್ಷಣದಲ್ಲಿ ಕಾಗದ ರಹಿತ ನೋಂದಣಿ ವ್ಯವಸ್ಥೆ ಜಾರಿಗೆ ಬರಲಿದೆ. ಎಲ್ಲವೂ ಸಂಪೂರ್ಣವಾಗಿ ಡಿಜಿಟಲೀಕರಣಗೊಳ್ಳಲಿದೆ. ಈ ಕುರಿತು ಯಾವುದೇ ಸಂದೇಹಗಳಿದ್ದಲ್ಲಿ ಕಚೇರಿಯನ್ನು ಸಂಪರ್ಕಿಸಬಹುದು. ಅಲ್ಲದೆ, ಈ ವ್ಯವಸ್ಥೆಯ ಕುರಿತಾದ ಮಾಹಿತಿ ವೀಡಿಯೊಗಳನ್ನು ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಲಾಗಿದ್ದು, ಅಲ್ಲಿಂದಲೂ ಮಾಹಿತಿ ಪಡೆಯಬಹುದು ಎಂದು ತಿಳಿಸಿದರು.

Edited By : PublicNext Desk
PublicNext

PublicNext

03/02/2026 06:18 pm

Cinque Terre

4.52 K

Cinque Terre

0

ಸಂಬಂಧಿತ ಸುದ್ದಿ