ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ : ಬೋಟ್ ಮಾಲಕರು ಕಡ್ಡಾಯವಾಗಿ ಸುರಕ್ಷಾ ಕ್ರಮ ಅಳವಡಿಸಿಕೊಳ್ಳಬೇಕು - ಎಸ್ ಪಿ ಹರಿರಾಮ್ ಶಂಕರ್

ಉಡುಪಿ : ಜಿಲ್ಲೆಯಲ್ಲಿ ಕಾರ್ಯಾಚರಿಸುತ್ತಿರುವ ಪ್ರವಾಸಿ ಬೋಟ್ ಸಹಿತ ವಾಟರ್‌ಸ್ಪೋರ್ಟ್ಸ್ ಗೆ ಸಂಬಂಧಿಸಿ 149 ಬೋಟ್ ಮಾಲಕರ ಜತೆ ಸಭೆ ನಡೆಸಿ ಸೂಕ್ತ ಸಲಹೆ ಸೂಚನೆ ನೀಡಿ ಕಟ್ಟುನಿಟ್ಟಾಗಿ ಪಾಲಿಸುವಂತೆ ತಿಳಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ತಿಳಿಸಿದ್ದಾರೆ.

ಈಗಾಗಲೇ ವಿವಿಧ ಇಲಾಖೆಗಳಿಂದ ಹಾಗೂ ಪ್ರವಾಸೋದ್ಯಮ ಇಲಾಖೆಯಿಂದ ಅನುಮತಿ ಹಾಗೂ ಪರವಾನಿಗೆ ಪಡೆಯಲು 45 ದಿನಗಳ ಕಾಲಾವಕಾಶವನ್ನು ನೀಡಲಾಗಿದೆ. ಈ ನಿಯಮಾವಳಿಯನ್ನು ಮೀರಿ ಜಲಕ್ರೀಡೆ ನಡೆಸುವುದು ಕಂಡುಬಂದರೆ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.ಜಿಲ್ಲೆಯಲ್ಲಿರುವ ಪ್ರವಾಸಿ ಬೋಟ್, ಹೌಸ್ ಬೋಟ್, ಕಯಾಕಿಂಗ್, ಪ್ರವಾಸಿದೋಣಿ, ಪ್ಯಾರಾಚೂಟ್, ಬನಾನಾ ರೈಡ್, ಸರ್ಫಿಂಗ್, ಜೆಟ್‌ಸ್ಕಿ, ಬಂಪರ್, ಬೋಟ್ ರೌಂಡಿಂಗ್, ವಾಟರ್ ಸ್ಪೋರ್ಟ್ಸ್ ನಡೆಸುತ್ತಿದ್ದು, ಇವುಗಳಿಗೆ ವಿವಿಧ ಇಲಾಖೆಗಳಿಂದ ಹಾಗೂ ಪ್ರವಾಸೋದ್ಯಮ ಇಲಾಖೆಯಿಂದ ಅನುಮತಿ ಹಾಗೂ ಪರವಾನಿಗೆ ಪಡೆಯಲು 45 ದಿನಗಳ ಕಾಲಾವಕಾಶ ನೀಡಲಾಗಿದೆ ಎಂದರು.

ಜಲಕ್ರೀಡೆ ನಡೆಸುವ ಸಮಯದಲ್ಲಿ ಪ್ರವಾಸಿಗರಿಗೆ ಲೈಫ್ ಜಾಕೆಟ್ ಕಡ್ಡಾಯವಾಗಿ ಧರಿಸುವಂತೆ ಕ್ರಮ ವಹಿಸಬೇಕು. ಲೈಫ್ ಬಾಯ್, ಪ್ರಥಮ ಚಿಕಿತ್ಸಾ ಕಿಟ್, ಅಗ್ನಿಶಾಮಕ ಸಾಧನ ಹಾಗೂ ಇನ್ನಿತರ ಸುರಕ್ಷಾ ಸಲಕರಣಿಗಳನ್ನು ದೋಣಿಯಲ್ಲಿ ಇಟ್ಟುಕೊಳ್ಳಬೇಕು. ಸಂಬಂಧಿಸಿದ ಮಾಲಕರು ಜಲಕ್ರೀಡೆ ನಡೆಸುವ ಸ್ಥಳದಲ್ಲಿ ಪ್ರವಾಸಿಗರು ಹಾಗೂ ಸಾರ್ವಜನಿಕರಿಗೆ ಫಲಕಗಳನ್ನು ಅಳವಡಿಸಿ ಅರಿವು ಮೂಡಿಸಬೇಕು. ಫಿಟ್ನೆಸ್ ಪತ್ರವನ್ನು ಹೊಂದಿದವರು ಮಾತ್ರ ಬೋಟ್ ಚಲಾಯಿಸಬೇಕು ಎಂದರು.

Edited By :
PublicNext

PublicNext

03/02/2026 08:50 pm

Cinque Terre

5.47 K

Cinque Terre

0

ಸಂಬಂಧಿತ ಸುದ್ದಿ