ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಪಾಪನಾಶಿನಿ ನದಿಗೆ ಹಂದಿ ಫಾರ್ಮ್ ನ ತ್ಯಾಜ್ಯ ನೀರು !

ಉಡುಪಿ: ಊರಿನಲ್ಲೊಂದು ನದಿ ಇದ್ದರೆ ,ಅದು ಕೇವಲ ನೀರಿನ ಹರಿವು ಮಾತ್ರವಲ್ಲ; ಅದು ಅನೇಕ ಜನರಿಗೂ, ಜಾನುವಾರುಗಳಿಗೂ ಜೀವನದ ಆಧಾರವಾಗಿದೆ. ಮನುಷ್ಯರಿಗಷ್ಟೇ ಅಲ್ಲ , ಶುದ್ಧವಾಗಿದ್ದ ನದಿ ನೀರನ್ನು ಅರಸಿ ಬರುವ ಜಾನುವಾರುಗಳು ಶಾಂತವಾಗಿ ಬಂದು ನೀರನ್ನು ಕುಡಿಯುತ್ತಿದ್ದವು.ನದಿಯ ತೀರದಲ್ಲಿ ಜೀವನ ಹಸಿರಾಗಿ ಅರಳಿತ್ತು,

ಆದರೆ ಇಂದು ಜನರು ಕಸ, ಕೋಳಿ ತ್ಯಾಜ್ಯ ಹಾಗೂ ಇತರೆ ಮಲಿನ ವಸ್ತುಗಳನ್ನು ನದಿಗೆ ಎಸೆಯುತ್ತಿರುವುದು ಎಲ್ಲೆಡೆ ನಡೆಯುತ್ತಿದೆ. ಉಡುಪಿಯ ಉದ್ಯಾವರ ಪಂಚಾಯತ್ ವ್ಯಾಪ್ತಿಯಲ್ಲಿ ಹರಿಯುವ ಪಾಪನಾಶಿನಿ ನದಿಯ ಕತೆಯೂ ಇದುವೇ.ಈ ಹಿಂದೆಲ್ಲ ಹೆದ್ದಾರಿ ಮೂಲಕ ಸಾಗುವ ಕೆಲವರು , ವಾಹನಗಳ ಮೂಲಕ ಕಸ ತ್ಯಾಜ್ಯ ತಂದು ಇಲ್ಲಿ ಸುರಿಯುತ್ತಿದ್ದರು.ಈಗ ನದಿಪಾತ್ರದಲ್ಲಿರುವ ಹಂದಿ ಫಾರ್ಮ್ ನಿಂದ ತ್ಯಾಜ್ಯ ನೀರು ನದಿಗೆ ಬಿಡಲಾಗುತ್ತದೆ ಎಂಬ ಆರೋಪ ಕೇಳಿಬಂದಿದೆ.

ಉದ್ಯಾವರ ಗ್ರಾ.ಪಂ ವ್ಯಾಪ್ತಿಯಲ್ಲಿ ನದಿ ಪಕ್ಕವೇ ಈ ಫಾರ್ಮ್ ಇದೆ. ಅಲ್ಲಿ ಫಾರ್ಮ್ ನ ಮಲಿನ ನೀರನ್ನು ನದಿಗೆ ಬಿಡುವ ಬಗ್ಗೆ ದೂರುಗಳು ಕೇಳಿಬರುತ್ತಿವೆ.ಈ ಬಗ್ಗೆ ಪಂಚಾಯತ್ ಗಮನಕ್ಕೂ ಬಂದಿದ್ದು ಪಂಚಾಯತ್ ನವರು ಸ್ಥಳಕ್ಕೆ ಭೇಟಿ ನೀಡಿ ಎಚ್ಚರಿಕೆ ನೀಡಿದ್ದಾರೆ.ನದಿ ನೀರು ಕಲುಷಿತ ಗೊಳ್ಳುವುದರ ಜೊತೆಗೆ ದುರ್ವಾಸನೆ ಮತ್ತು ಸ್ವಚ್ಛತೆಯ ಕೊರತೆಯಿಂದ ಸ್ಥಳೀಯವಾಗಿ ರೋಗ ರುಜಿನ ಹರಡುವ ಅಪಾಯವೂ ಎದುರಾಗಿದೆ.ಸ್ಥಳೀಯಾಡಳಿತ ಕೇವಲ ಎಚ್ಚರಿಕೆ ಕೊಟ್ಟರಷ್ಟೇ ಸಾಲದು ,ಈ ಫಾರ್ಮ್ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

Edited By : Shivu K
PublicNext

PublicNext

03/02/2026 06:58 pm

Cinque Terre

8.91 K

Cinque Terre

1

ಸಂಬಂಧಿತ ಸುದ್ದಿ