ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿವಮೊಗ್ಗ : ಕೊಟ್ಟಿಗೆಯಲ್ಲಿ ಕಟ್ಟಿದ್ದ ಕುರಿಗಳ ಕಳವು

ಶಿವಮೊಗ್ಗ : ಗೋವಿಂದಪುರ ಗ್ರಾಮದಲ್ಲಿ ಮನೆಯ ಪಕ್ಕದ ಕೊಟ್ಟಿಗೆಯಲ್ಲಿ ಕಟ್ಟಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಕುರಿಗಳನ್ನು ಕಳ್ಳರು ಹೊತ್ತೊಯ್ದಿದ್ದಾರೆ. ಹಬ್ಬದ ಪ್ರಯುಕ್ತ ಮಾರಾಟ ಮಾಡಲು ಚಿತ್ರದುರ್ಗದ ಸಂತೆಯಿಂದ ತಂದಿದ್ದ ಕುರಿಗಳು ಕಳುವಾಗಿವೆ.

ಈಶ್ವರಪ್ಪ ಎಂಬುವವರು ಮಾರಿಹಬ್ಬದ ಪ್ರಯುಕ್ತ ಮಾರಾಟ ಮಾಡಲು ಚಿತ್ರದುರ್ಗದ ಸಂತೆಯಲ್ಲಿ 1,30,000 ಮೌಲ್ಯದ ನಾಲ್ಕು ಕುರಿಗಳನ್ನು ಖರೀದಿಸಿ ತಂದಿದ್ದರು. ಈ ಕುರಿಗಳನ್ನು ಮನೆಯ ಪಕ್ಕದ ತೆರೆದ ಕೊಟ್ಟಿಗೆಯಲ್ಲಿ ಇತರ ಕುರಿಗಳೊಂದಿಗೆ ಕಟ್ಟಿದ್ದರು.ರಾತ್ರಿ ಕೊಟ್ಟಿಗೆಯಲ್ಲಿ ಎಲ್ಲಾ ಕುರಿಗಳು ಇದ್ದವು. ಮರುದಿನ ಎದ್ದು ನೋಡಿದಾಗ ಚಿತ್ರದುರ್ಗದಿಂದ ತಂದಿದ್ದ ನಾಲ್ಕು ಗಂಡು ಕುರಿಗಳು ನಾಪತ್ತೆಯಾಗಿದ್ದವು. ಘಟನೆ ಸಂಬಂಧ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : PublicNext Desk
PublicNext

PublicNext

03/02/2026 07:40 pm

Cinque Terre

4.38 K

Cinque Terre

0

ಸಂಬಂಧಿತ ಸುದ್ದಿ