ಶಿವಮೊಗ್ಗ : ಶಿವಮೊಗ್ಗದ ಬೈಪಾಸ್ ರಸ್ತೆಯಲ್ಲಿರುವ ಕಾಲೇಜೊಂದಕ್ಕೆ ಹೋಗಿ ಬರುತ್ತೇನೆ ಎಂದು ತೆರಳಿದ್ದ ಯುವತಿ ನಾಪತ್ತೆಯಾಗಿದ್ದಾರೆ. ಈ ಹಿನ್ನೆಲೆ ಯುವತಿಯ ಪತ್ತೆಗಾಗಿ ಪೊಲೀಸರು ಪ್ರಕಟಣೆಯನ್ನು ಹೊರಡಿಸಿದ್ದಾರೆ. ಭೂಮಿಕ (18) ನಾಪತ್ತೆಯಾದ ಯುವತಿ.
ಭದ್ರಾವತಿ ತಾಲೂಕು ರಾಮಿನಕೊಪ್ಪ ವಾಸಿ ಹನುಮಂತನಾಯ್ಕ ಎಂಬುವವರ ಮಗಳು ಭೂಮಿಕಾ ಜ. 30 ರಂದು ಮನೆಯಿಂದ ಬೈಪಾಸ್ ರಸ್ತೆಯ ಬಳಿಯಿರುವ ಕಾಲೇಜಿಗೆ ಎಂದು ಹೋದವರು ನಾಪತ್ತೆಯಾಗಿದ್ದಾರೆ.
5.2 ಅಡಿ ಎತ್ತರ, ಕೋಲುಮುಖ, ತೆಳುವಾದ ಮೈಕಟ್ಟು, ಗೋಧಿ ಮೈಬಣ್ಣ ಹೊಂದಿದ್ದು, ಕನ್ನಡ ಭಾಷೆ ಮಾತನಾಡುತ್ತಾರೆ. ಕಪ್ಪುಬಣ್ಣದ ಪ್ಯಾಂಟ್, ಪರ್ಪಲ್ ಬಣ್ಣದ ಟಾಪ್ ಧರಿಸಿರುತ್ತಾರೆ.ಸುಳಿವು ದೊರೆತಲ್ಲಿ ದೊಡ್ಡಪೇಟೆ ಪೊಲೀಸ್ ಠಾಣೆ ಮಾಹಿತಿ ನೀಡುವಂತೆ ಪೊಲೀಸರು ಪ್ರಕಟಣೆ ತಿಳಿಸಿದೆ.
PublicNext
03/02/2026 12:49 pm
LOADING...