ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿವಮೊಗ್ಗ: ಸೋಗಾನೆ ಕೇಂದ್ರ ಕಾರಾಗೃಹಕ್ಕೆ ಗಾಂಜಾ ಪ್ಯಾಕೆಟ್‌ ಎಸೆದ ಪ್ರಕರಣ, ಮೂವರು ಆರೋಪಿಗಳ ಬಂಧನ

ಶಿವಮೊಗ್ಗ: ಸೋಗಾನೆಯ ಕೇಂದ್ರ ಕಾರಾಗೃಹಕ್ಕೆ ಹೊರಗಿನಿಂದ ಗಾಂಜಾ ಪ್ಯಾಕೆಟ್‌ ಎಸೆಯಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನ ತುಂಗಾ ನಗರ ಪೊಲೀಸರು ಬಂಧಿಸಿದ್ದಾರೆ. ಗಾಂಜಾ ಪ್ಯಾಕೆಟ್ ಅಕ್ರಮವಾಗಿ ಪಡೆದಿದ್ದ ಇಬ್ಬರು ವಿಚಾರಣಾಧೀನ ಕೈದಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಜೈಲಿನ ಭದ್ರತಾ ಸಿಬ್ಬಂದಿ ನಡೆಸಿದ ಹಠಾತ್ ತಪಾಸಣೆ ವೇಳೆ ಈ ಅಕ್ರಮ ಬಯಲಾಗಿದೆ.

ಫೆಬ್ರವರಿ 1ರ ಬೆಳಗ್ಗೆ ಕಾರಾಗೃಹದ ಸಿಬ್ಬಂದಿ ಮತ್ತು ಕೆ.ಎಸ್.ಐ.ಎಸ್.ಎಫ್ ಸಿಬ್ಬಂದಿ ಗಸ್ತಿನಲ್ಲಿದ್ದಾಗ, ಜೈಲಿನ ಆವರಣದೊಳಗೆ ಹೊರಗಿನಿಂದ ಪೊಟ್ಟಣಗಳನ್ನು ಎಸೆಯುತ್ತಿರುವುದು ಗಮನಕ್ಕೆ ಬಂದಿದೆ. ಒಳಗೆ ಪರಿಶೀಲನೆ ನಡೆಸಿದಾಗ ಪೊಟ್ಟಣಗಳನ್ನು ಹೊಂದಿದ್ದ ವಿಚಾರಣಾಧೀನ ಕೈದಿಗಳಾದ ಮೊಹ್ಮದ ಖಲಂದರ್ ಮತ್ತು ಅಬ್ದುಲ್ ಆಸೀಫ್ ಸಿಕ್ಕಿಬಿದ್ದಿದ್ದಾರೆ.

ಇವರಿಂದ ಒಂದು ಸಣ್ಣ ಕೀಪ್ಯಾಡ್ ಮೊಬೈಲ್ ಫೋನ್ ಮತ್ತು ಸಣ್ಣ ಪೊಟ್ಟಣಗಳಲ್ಲಿದ್ದ ಗಾಂಜಾವನ್ನು ವಶಪಡಿಸಿಕೊಂಡಿದ್ದರು. ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಎ1 ಇಮ್ರಾನ್ ಪಾಷಾ, ಸೈಯ್ಯದ್ ಮಲ್ಲಿಕ್, ಅಲ್ಲಾ ಬಕಶ್ ಎಂಬ ಆರೋಪಿಗಳನ್ನ ತುಂಗಾ ನಗರ ಪೊಲೀಸರು ಬಂಧಿಸಿದ್ದಾರೆ

Edited By :
PublicNext

PublicNext

03/02/2026 10:31 pm

Cinque Terre

5.51 K

Cinque Terre

0

ಸಂಬಂಧಿತ ಸುದ್ದಿ