ಉಡುಪಿ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ಮೂರು ತಿಂಗಳು ಉಚಿತ ಹೊಲಿಗೆ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭ ಸಾಲಿಗ್ರಾಮ ತಾಲೂಕಿನ ಗಾಯನಹಳ್ಳಿಯಲ್ಲಿ ನಡೆಯಿತು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕಿ ಮಮತಾ ರಾವ್ ಕಾರ್ಯಕ್ರಮ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಮನೆಯೊಳಗೆ ಇರುವ ಮಹಿಳೆಯರಲ್ಲಿ ಧೈರ್ಯ ತುಂಬಿ ಸಮಾಜದಲ್ಲಿ ಉತ್ತಮವಾಗಿ ಬೆಳೆಯಲು ಹೇಮಾವತಿ ವಿ. ಹೆಗ್ಗಡೆಯವರು ತಿಳುವಳಿಕೆ ನೀಡಿದ್ದರು. ಜೀವನ ನಡೆಸಲು ಒಳ್ಳೆಯ ವ್ಯವಸ್ಥೆಯನ್ನು ಕಲ್ಪಿಸಿಕೊಟ್ಟಿದ್ದಾರೆ. ಜೊತೆಗೆ ಮಹಿಳೆ ಸ್ವಾವಲಂಬಿ ಬದುಕು ನಡೆಸಲು ಹಾಗೂ ತನ್ನ ಮನೆ ಆದಾಯ ಹೆಚ್ಚಿಸಲು ಹೊಲಿಗೆ ತರಬೇತಿ ಕಲ್ಪಿಸಿ ಕೊಟ್ಟಿದ್ದಾರೆ. ಇದನ್ನು ಕಲಿತು ಸುಮ್ಮನೆ ಸುಮ್ಮನಿರದೇ ಸಣ್ಣ ರೀತಿಯಲ್ಲಿ ಆದಾಯ ಮಾಡಿ ಕುಟುಂಬಕ್ಕೆ ಆಧಾರವಾಗಿ ಸಮಾಜದಲ್ಲಿ ಉತ್ತಮ ಹೆಸರು ಗಳಿಸಿ ಎಂದು ತಿಳಿಸಿದರು.
ತಾಲೂಕಿನ ಯೋಜನಾಧಿಕಾರಿ ಉಮೇಶ್ ಪೂಜಾರಿ ಮಾತನಾಡಿ, ಬೇರೆಡೆ ದುಡಿಯುವ ಬದಲು ಸ್ವಉದ್ಯೋಗ ಮಾಡುವುದು ಉತ್ತಮ. ಆದ್ದರಿಂದ ನೀವು ಕಲಿತ ಹೊಲಿಗೆ ತರಬೇತಿಯನ್ನು ಬಿಟ್ಟು ಬಿಡದೆ ಸಣ್ಣ ಉದ್ಯೋಗ ಮಾಡಿ ಜೀವನಕ್ಕೆ ದಾರಿದೀಪ ಮಾಡಿಕೊಳ್ಳಿ ಎಂದು ಹರಸಿದರು.
ಕಾರ್ಯಕ್ರಮವನ್ನು ಜ್ಞಾನ ವಿಕಾಸ ಸಮನ್ವಯಾಧಿಕಾರಿ ನಿರೂಪಿಸಿ ರಜನಿ ಸ್ವಾಗತಿಸಿದರು. ಗೌರಮಣಿ ಎಲ್ಲರನ್ನು ವಂದಿಸಿದರು.
Kshetra Samachara
03/02/2026 09:31 pm
LOADING...