ಬ್ರಹ್ಮಾವರ: ಹಿಂದೂ ಸಂಗಮ ಆಯೋಜನಾ ಸಮಿತಿ ಶಿರಿಯಾರ ಮಂಡಲದ ಯಡ್ತಾಡಿ ಕಕ್ಕುಂಜೆ, ಹೇರಾಡಿ ಗ್ರಾಮದಿಂದ ಭಾನುವಾರ ಶಿರಿಯಾರದಲ್ಲಿ ಜರುಗಿದ ಹಿಂದೂ ಸಂಗಮದ ಶೋಭಾ ಯಾತ್ರೆಗೆ ಹಿಂದೂ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಚಾಲನೆ ನೀಡಿ ಶಿರಿಯಾರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಿಂದ ಸಾಗಿಬಂದು ಶಿರಿಯಾರ ಪೇಟೆಯಲ್ಲಿ ಸಮಾಪನ ಗೊಂಡಿತು.
ಬಳಿಕ ರಾಣಿ ಅಬ್ಬಕ್ಕ ವೇದಿಕೆಯಲ್ಲಿ ಜರುಗಿದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಪಿ ಎಸ್ ಪ್ರಕಾಶ್ ಮಾತನಾಡಿ ನಮ್ಮ ಪರಿಸರವನ್ನು, ಗಾಳಿ ನೀರನ್ನು ಮಲಿನಗೊಳಿಸದೇ ಇರುವುದು, ಕುಟುಂಬ ಪದ್ದತಿಯನ್ನು ಗಟ್ಟಿಗೊಳಿಸುವಿಕೆ ನಮ್ಮ ಧರ್ಮ ದೇವರುಗಳ ನಂಬಿಕೆಗಳನ್ನು ಮಕ್ಕಳಲ್ಲಿ ತಿಳಿಸುವ ಕಾರ್ಯವಾಗಬೇಕು ಎಂದರು. ಗುರುಮೂರ್ತಿ ಅಡಿಗ , ಡಾ ಪ್ರತಿಮಾ ನಾಗೇಶ್ ಗಿರಿಕೆಮಠ, ಪ್ರಮೀಳಾ, ರಾಮಕೃಷ್ಣಅಡಿಗ ಕರುಣಾಕರ ಶೆಟ್ಟಿ ಪಡುಮುಂಡು ಉಪಸ್ಥಿತರಿದ್ದರು.
3 ಕಿ.ಮೀ. ಶೋಭಾಯಾತ್ರೆಯಲ್ಲಿ ದಾಖಲೆಯ ಸುಮಾರು 8 ಸಾವಿರ ಮಂದಿ ಭಾಗವಹಿಸಿದ್ದು ಛತ್ರಪತಿ ಶಿವಾಜಿ, ಭಾರತ ಮಾತೆ ,ಹುಲಿ ಕುಣಿತ, ಹಲವಾರು ಭಜನಾ ತಂಡದಿಂದ ಕುಣಿತ ಭಜನೆ ನಾನಾ ಟ್ಯಾಬ್ಲೊಗಳು ಮೆರವಣಿಗೆಯ ಮೆರುಗು ಹೆಚ್ಚಿಸಿತ್ತು. ಸಭಾ ಕಾರ್ಯಕ್ರಮದ ಮೊದಲು ಗೋಗ್ರಾಸ ನೀಡಲಾಯಿತು.ಶತಕಂಠಗಾಯನ, ರಾಷ್ಟ್ರ ದೇವೋಭವ ಗಾನಲಹರಿ, ನೃತ್ಯ ರೂಪಕ, ದನದಕೊಟ್ಟಿಗೆ , ಕಾರಂಜಿ , ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕ, ಗ್ರಾಮೀಣ ಪರಿಕರಗಳ ಪ್ರದರ್ಶನಗಳು ಜನ ಮೆಚ್ಚುಗೆ ಪಡೆಯಿತು.
PublicNext
02/02/2026 07:09 pm
LOADING...