ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

VIDEO: ಹಳಿಗೆ ಬಿದ್ದ ನಾಯಿಯ ರಕ್ಷಣೆ - ಈ ವಿಡಿಯೋ ಅಸಲಿಯತ್ತು ಏನು?

ಹಳಿಗೆ ನಾಯಿ ಬಿದ್ದ ವೇಳೆ ಕೂಡಲೇ ಹಳಿಗೆ ಜಿಗಿದ ವ್ಯಕ್ತಿಯೊಬ್ಬ ಆ ನಾಯಿಯನ್ನು ರಕ್ಷಿಸಿ ಮೇಲಕ್ಕೆತ್ತಿದ್ದಾರೆ. ಗೋಲ್ಡನ್ ರಿಟ್ರೈವರ್ ತಳಿಯ ಈ ನಾಯಿಯನ್ನು ರಕ್ಷಿಸಿದ ದೃಶ್ಯ ಈಗ ಎಲ್ಲೆಡ ವೈರಲ್ ಆಗುತ್ತಿದೆ. ನಾಯಿಯನ್ನು ರಕ್ಷಿಸಿದ ವ್ಯಕ್ತಿಯ ಮಾನವೀಯ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.

ಆದರೆ, ಈ ವಿಡಿಯೋದ ಹಿಂದಿರುವ ಅಸಲಿ ಸತ್ಯವೇ ಬೇರೆ!

ಕೋಟಿ ದಾಟಿದ ವೀಕ್ಷಣೆ, ಆದರೆ ಇದು 'ರಿಯಲ್' ಅಲ್ಲ! @kadance01 ಎಂಬ ಎಕ್ಸ್ (ಟ್ವಿಟ್ಟರ್) ಖಾತೆಯಿಂದ ಹಂಚಿಕೊಳ್ಳಲಾದ ಈ ವಿಡಿಯೋ ಈಗಾಗಲೇ 37 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಮತ್ತು ಸಾವಿರಾರು ಲೈಕ್‌ಗಳನ್ನು ಪಡೆದುಕೊಂಡಿದೆ. ಭಾವನಾತ್ಮಕವಾಗಿರುವ ಈ ದೃಶ್ಯವನ್ನು ನೋಡಿ ಜನ "ಇವನೇ ನಿಜವಾದ ಹೀರೋ" ಎಂದು ಕಮೆಂಟ್ ಮಾಡಿದ್ದರು. ಆದರೆ ಕೆಲವರು ವಿಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿ ಇದು ಕೃತಕ ಬುದ್ಧಿಮತ್ತೆ (AI - Artificial Intelligence) ಮೂಲಕ ಸೃಷ್ಟಿಸಲಾದ ವಿಡಿಯೋ ಎಂದು ಪತ್ತೆಹಚ್ಚಿದ್ದಾರೆ.

ಈ ವಿಡಿಯೋವನ್ನು ಪೋಸ್ಟ್ ಮಾಡಿದ ವ್ಯಕ್ತಿ ಪದೇ ಪದೇ ಇಂತಹ ಪ್ರಾಣಿ ರಕ್ಷಣೆಯ ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾನೆ. ಇವು ನೋಡಲು ಕಣ್ಣಿಗೆ ಕಟ್ಟುವಂತೆ ಇರುತ್ತವೆ. ಆದರೆ ಇವೆಲ್ಲವೂ ಕೇವಲ ಜನರನ್ನು ಎಂಗೇಜ್‌ ಮಾಡುವ ಅಥವಾ ಲೈಕ್ಸ್ ಪಡೆಯಲು AI ತಂತ್ರಜ್ಞಾನ ಬಳಸಿ ಸೃಷ್ಟಿಸಿದ ಸುಳ್ಳು ಕಥೆಗಳು ಎಂಬುದುಸಾಬೀತಾಗಿದೆ.

Edited By : Nagaraj Tulugeri
PublicNext

PublicNext

04/02/2026 02:01 pm

Cinque Terre

6.17 K

Cinque Terre

0

ಸಂಬಂಧಿತ ಸುದ್ದಿ