ಹುಬ್ಬಳ್ಳಿ: ಹುಬ್ಬಳ್ಳಿ ಮಾರ್ಕೆಟ್ ಅಂದ್ರೆ ಜನ ಜಂಗುಳಿಯಿಂದ ತುಂಬಿರುತ್ತದೆ. ಅಂತದರಲ್ಲಿ ಈ ರೋಡ್‌ಲೈನ್ಸ್ ಕಂಪನಿಯವರು ರಸ್ತೆ ಮಧ್ಯದಲ್ಲೇ ಗೂಡ್ಸ್ ವಾಹನಗಳನ್ನು ನಿಲ್ಲಿಸಿ ಇನ್ನಷ್ಟು ಟ್ರಾಫಿಕ್ ಮಾಡುತ್ತಿದ್ದಾರೆ. ಅದಕ್ಕೆ ತಕ್ಕ ಉದಾಹರಣೆ ಅಂದ್ರೆ ಹುಬ್ಬಳ್ಳಿಯ ಡಾಕಪ್ಪ ಸರ್ಕಲ್ ಬಳಿ ಫುಲ್ ಟ್ರಾಫಿಕ್ ಟ್ರಾಫಿಕ್.... ಸಾರ್ವಜನಿಕರು ಇದರಿಂದ ಕಂಗಾಲಾಗಿದ್ದಾರೆ. ಈ ರೋಡ್‌ಲೈನ್ಸ್ ಕಂಪನಿಯವರು ಮಾಡುವ ಅವಾಂತರದಿಂದ ಎಷ್ಟೆಲ್ಲಾ ತೊಂದರೆ ಆಗುತ್ತಿದೆ ಎಂಬುದನ್ನು ನೀವೇ ನೋಡಿ...
ಹುಬ್ಬಳ್ಳಿಯ ಮುಲ್ಲಾ ಓಣಿ ಡಾಕಪ್ಪ ಸರ್ಕಲ್ ಬಳಿ ಇರುವ ರೋಡ್‌ಲೈನ್ಸ್ ಕಂಪನಿಯವರು ನಡು ರಸ್ತೆಯಲ್ಲೇ ಗೂಡ್ಸ್ ವಾಹನಗಳನ್ನು ನಿಲ್ಲಿಸಿ ಅವಾಂತರ ಸೃಷ್ಟಿ ಮಾಡುತ್ತಿದ್ದಾರೆ. ಸಾಯಂಕಾಲ ಆಯಿತು ಅಂದ್ರೆ ಸಾಕು ಟ್ರಾಫಿಕ್... ಟ್ರಾಫಿಕ್.. ಸಾರ್ವಜನಿಕರು, ವಾಹನ ಸವಾರ ಪರದಾಡುತ್ತಿದ್ದಾರೆ. ಮಾರಿಕಾಂಬಾ ರೋಡ್‌ಲೈನ್ಸ್, ಪದ್ಮಾವತಿ, ನ್ಯಾಷನಲ್, ಪವರ್, ಧನಲಕ್ಷ್ಮಿ, ಮುಕ್ಕಾ ಟ್ರಾನ್ಸ್‌ಪೋರ್ಟ್, ಯಲ್ಲೂರ ಟ್ರಾನ್ಸ್‌ಪೋರ್ಟ್ ಇವರು ತಮ್ಮ ಗೂಡ್ಸ್ ಹಾಕಲು ರಸ್ತೆ ಮಧ್ಯದಲ್ಲೇ ವಾಹನಗಳನ್ನು ನಿಲ್ಲಿಸಿ ಟ್ರಾಫಿಕ್ ಜಾಮ್ ಮಾಡುತ್ತಿದ್ದಾರೆ. ಇದರಿಂದ ಸ್ಥಳೀಯರು, ವಾಹನ ಸವಾರರು ಪರದಾಡುವಂತಾಗಿದೆ. ಟ್ರಾಫಿಕ್ ಪೊಲೀಸರು ನೋಡಿದರೂ ಕಾಣದಂತೆ ವರ್ತನೆ ಮಾಡುತ್ತಿದ್ದಾರೆ. ಕೂಡಲೇ ಟ್ರಾಫಿಕ್ ಡಿಸಿಪಿ ರವೀಶ್ ಆರ್ ಅವರು, ಇತ್ತ ಗಮನಿಸಿ ಈ ಸಮಸ್ಯೆಗೆ ಇತ್ಯರ್ಥ ಹಾಕಬೇಕಿದೆ.
ಈರಣ್ಣ ವಾಲಿಕಾರ, ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ.
Kshetra Samachara
04/02/2026 02:05 pm
LOADING...